ಭಾರೀ ಮಳೆ: ಮೂಲ್ಕಿ ತಾಲೂಕು ಅಲ್ಲಲ್ಲಿ ಮಳೆ ಹಾನಿ
ಕಳೆದ ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಬಿರುಸಿನ ಮಳೆಯಿಂದ ಮೂಲ್ಕಿ ತಾಲೂಕಿನ ಹೆಚ್ಚಿನ ಭಾಗ ಜಲಾವೃತಗೊಂಡಿದ್ದು ಶಾಂಭವಿ ಮತ್ತು ನಂದಿನಿ ನದಿಗಳು ತುಂಬಿ ಹರಿಯುತ್ತಿದೆ. ನದಿ ತೀರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಕೆಲವು ಕಡೆ ಮನೆ ಕುಸಿದು, ಆವರಣ ಗೋಡೆ ಕುಸಿತ ಸೇರಿದಂತೆ ಅತೀ ಹೆಚ್ಚು ಹಾನಿ ಸಂಭವಿಸಿದೆ.
ಮೂಲ್ಕಿ (ಜು.6) : ಕಳೆದ ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಬಿರುಸಿನ ಮಳೆಯಿಂದ ಮೂಲ್ಕಿ ತಾಲೂಕಿನ ಹೆಚ್ಚಿನ ಭಾಗ ಜಲಾವೃತಗೊಂಡಿದ್ದು ಶಾಂಭವಿ ಮತ್ತು ನಂದಿನಿ ನದಿಗಳು ತುಂಬಿ ಹರಿಯುತ್ತಿದೆ. ನದಿ ತೀರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಕೆಲವು ಕಡೆ ಮನೆ ಕುಸಿದು, ಆವರಣ ಗೋಡೆ ಕುಸಿತ ಸೇರಿದಂತೆ ಅತೀ ಹೆಚ್ಚು ಹಾನಿ ಸಂಭವಿಸಿದೆ.
ಶಿಮಂತೂರು ಭಾರಿ ಮಳೆಗೆ ವಾಲಿದ ಟ್ರಾನ್ಸ್‌ಫಾರ್ಮರ್, ವಿದ್ಯುತ್ ಕಂಬ - ಆವರಣ ಗೋಡೆ ಕುಸಿತ ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಕೆಲ ಕಡೆ ಕೃತಕ ನೆರೆ ಹಾಗೂ ಅಲ್ಪಸ್ವಲ್ಪ ಹಾನಿ ಸಂಭವಿಸಿದೆ. ಭಾರಿ ಮಳೆಗೆ ಶಿಮಂತೂರು ದೇವಸ್ಥಾನದ ಬಳಿ ಪ್ರಧಾನ ರಸ್ತೆಯಲ್ಲಿ ಅಳವಡಿಸಿದ್ದ ನೂತನ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬ ಸಮೇತ ವಾಲಿ ನಿಂತಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಕೆಲವು ತಿಂಗಳ ಹಿಂದೆ ನೂತನ ಟ್ರಾನ್ಸ್‌ಫಾರ್ಮರ್ ಅನ್ನು ಅಳವಡಿಸಲಾಗಿತ್ತು. ಇದರಿಂದಾಗಿ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಸ್ಥಳಕ್ಕೆ ಮೂಲ್ಕಿ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ: ಐವರು ಎಂಜಿನಿಯರ್ ಕೆಲಸ ಒಬ್ಬರಿಗೆ!
ಮಳೆಯಿಂದ ಹೆಚ್ಚಿನ ಹಾನಿ
ಮೂಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮದ ಕಕ್ವ ಎಂಬಲ್ಲಿ ಸುಮತಿ ಎಂಬವರ ಮನೆಗೆ ಮಳೆಯಿಂದ ಹೆಚ್ಚಿನ ಹಾನಿ ಸಂಭವಿಸಿದೆ. ಭಾರಿ ಮಳೆಗೆ ಮೂಲ್ಕಿ ನ.ಪಂ.ವ್ಯಾಪ್ತಿಯ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಶ್ರೀ ಚೆನ್ನಮಲ್ಲಿಕಾರ್ಜುನ ಮಠದ ಆವರಣಗೋಡೆ ಬಿದ್ದು ಅಪಾರ ಹಾನಿ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ. ಪರಿಶೀಲಿಸಿದ್ದಾರೆ. ಮೂಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ, ಕಟೀಲು, ಅತಿಕಾರಿಬೆಟ್ಟು, ಪಕ್ಷಿಕೆರೆ, ಬಳ್ಕುಂಜೆ, ಕಿಲ್ಪಾಡಿ ಪರಿಸರದಲ್ಲಿ ಭಾರಿ ಮಳೆಯಾಗುತ್ತಿದ್ದು ನದೀ ತೀರದ ವಾಸಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.
ಭಾರಿ ಮಳೆಗೆ ಮನೆಯೊಳಗೆ ನುಗ್ಗಿದ ನೀರು
ಕಟೀಲು ಸಮೀಪದ ಸಿತ್ಲ ಎಂಬಲ್ಲಿ ಬಿರುಸಿನ ಮಳೆಗೆ ಮನೆಯೊಂದಕ್ಕೆ ಮಳೆ ನೀರು ನುಗ್ಗಿದೆ. ಕಟೀಲು ಬಸ್ ನಿಲ್ದಾಣದ ಹಿಂಭಾಗದ ಸಿತ್ಲದಲ್ಲಿ ಮನೆ ಸಮೀಪದಲ್ಲಿ ಕೆಲವು ಕಟ್ಟಡ ಹಾಗೂ ಗುಡ್ಡ ಪ್ರದೇಶಗಳಿಂದ ಹರಿದ ಮಳೆ ನೀರು ತೋಡಿನಲ್ಲಿ ಸರಾಗವಾಗಿ ಹರಿದು ಹೋಗದೆ ಸಂಗ್ರಹವಾಗಿ ನೇರವಾಗಿ ಮನೆಯ ಅಂಗಳ ಹಾಗೂ ಮನೆಯ ಒಳಗೆಯೇ ನುಗ್ಗಿದೆ.
ಕಿಲೆಂಜೂರು ಗಾಳಕ್ಕೆ ಸಿಕ್ಕ ಭಾರಿ ಗಾತ್ರದ ಮುಗುಡು ಮೀನು!!
ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಾಮೈತೋಟ ಸುಧಾಕರ ಶೆಟ್ಟಿಅವರಿಗೆ ಗಾಳ ಹಾಕುವ ದೊಡ್ಡ ಗಾತ್ರದ ಸುಮಾರು 2.5 ಅಡಿ ಉದ್ದದ ಮುಗುಡು ಮೀನು ಸಿಕ್ಕಿದೆ.
ಮಳೆ ಪ್ರಾರಂಭದ ಹಂತದಲ್ಲಿ ಸಿಗುವುದು ಸಾಮಾನ್ಯವಾದರೂ ಇದು ದೊಡ್ಡ ಗಾತ್ರದ ಮೀನಾಗಿದೆ. ಮಳೆಗಾಲದಲ್ಲಿ ಗ್ರಾಮೀಣ ಭಾಗದ ತೋಡು ಹೊಳೆಗಳಲ್ಲಿ ಕೆಲ ಯುವಕರು ಜೀವನೋಪಾಯಕ್ಕಾಗಿ ಗಾಳ ಹಾಕುವ ಪ್ರವೃತ್ತಿ ನಡೆಸುತ್ತಿದ್ದಾರೆ.
Dakshina kannada rains: ಮಳೆಗೆ ಗಡಿಯಾರ ಶಾಲೆ ಬಳಿ ಗುಡ್ಡಕುಸಿತ: ಶಾಲೆಗೆ ರಜೆ
ಸೂರಿಂಜೆ ಹಿದಾಯತ್ ಶಾಲೆ ಆವರಣ ಗೋಡೆ ಕುಸಿತ
ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸುರತ್ಕಲ್ ಸಮೀಪದ ಸೂರಿಂಜೆಯ ಹಿದಾಯತ್ ಸ್ಕೂಲ್ ಕಾಂಪೌಂಡ್ ಕುಸಿದು ಬಿದ್ದ ಘಟನೆ ನಡೆದಿದೆ.
ಭಾರಿ ಮಳೆಯಿಂದಾಗಿ ಹಿದಾಯತ್ ಸ್ಕೂಲ್ ಕಾಂಪೌಂಡ್ ಕುಸಿದಿದ್ದು ಅಪಾರ ನಷ್ಟಉಂಟಾಗಿದೆ. ಕುಸಿದ ರಭಸಕ್ಕೆ ಗೋಡೆ ಕಲ್ಲುಗಳು ರಸ್ತೆಗೆ ಬಿದ್ದಿವೆ. ಸ್ಥಳೀಯರು ರಸ್ತೆಗೆ ಬಿದ್ದ ಕಲ್ಲುಗಳ ತೆರವು ಕಾರ್ಯ ನಡೆಸಿದ್ದಾರೆ.