ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಪಿಲೆ ಮೈದುಂಬಿ ಹರಿಯುತ್ತಿದೆ. ಇದರಿಂದ ಪ್ರವಾಹ ಸದೃಶ ವಾತಾವರಣ ನಿರ್ಮಾಣವಾಗಿದೆ. 

ನಂಜನಗೂಡು (ಸೆ.22): ಕೇರಳದ ಕಬಿನಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ಕಬಿನಿ ಜಲಾಶಯದಿಂದ 35 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಟ್ಟಪರಿಣಾಮ ಕಪಿಲೆ ಮತ್ತೊಮ್ಮೆ ಮೈದುಂಬಿ ಹುಕ್ಕಿ ಹರಿಯುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ.

ಕಪಿಲೆ ಹುಕ್ಕಿ ಹರಿಯುವ ಕಾರಣ ಇತಿಹಾಸವುಳ್ಳ ಹದಿನಾರು ಕಾಲು ಮಂಟಪ ಭಾಗಶಃ ಮುಳುಗಡೆಯಾಗಿದೆ. ಶ್ರೀೕಕಂಠೇಶ್ವರ ದೇವಾಲಯದ ಸ್ನಾನಘಟ್ಟಸಂಪೂರ್ಣವಾಗಿ ಮುಳುಗಡೆಯಾಗಿದೆ. ಅಯ್ಯಪ್ಪಸ್ವಾಮಿ ದೇವಾಲಯ, ಚಾಮುಂಡೇಶ್ವರಿ ದೇವಾಲಯ, ಮಲ್ಲನಮೂಲೆ ಮಠಕ್ಕೆ ಪ್ರವಾಹದಿಂದ ಮುಳುಗಡೆಯಾಗುವ ಆತಂಕ ಎದುರಾಗಿದೆ. ಆಗಸ್ಟ್‌ನಲ್ಲಷ್ಟೇ ನದಿಯ ಪ್ರವಾಹದಿಂದ ಮುಳುಗಡೆಯಾಗಿದ್ದ ಹಳ್ಳದಕೇರಿ, ಸರಸ್ವತಿ ಕಾಲೋನಿ, ಕುರಬಗೇರಿ, ನಯನಕ್ಷತ್ರಿಯ ಬೀದಿ, ಕುರುಬಗೇರಿ ಸೇರಿದಂತೆ ಇನ್ನಿತರ ತಗ್ಗು ಪ್ರದೇಶದ ಜನರಿಗೆ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ. ಭಾನುವಾರದಿಂದಲೇ ನಗರಸಭಾ ಆಯುಕ್ತ ಕರಿಬಸವಯ್ಯ ತಗ್ಗು ಪ್ರದೇಶಗಳಿಗೆ ಬೇಟಿ ನೀಡಿ ಈ ಪ್ರದೇಶದ ಜನತೆಗೆ ಎಚ್ಚರಿಕೆ ನೀಡಿ. ಸುರಕ್ಷತಾ ಪ್ರದೇಶಕ್ಕೆ ತೆರಳಲು ಸೂಚಿಸಿದ್ದಾರೆ.

 ನದಿಗೆ ಹೆಚ್ಚುವರಿಯಾಗಿ ನೀರು ಬಿಟ್ಟಿರುವ ಕಾರಣ ವಾಹನ ಮೂಲಕ ಟಾಮ್‌ಟಾಮ್‌ ಮಾಡಿ ಜನರನ್ನು ಸುರಕ್ಷತಾ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಮಳೆಯ ಪ್ರಮಾಣದಲ್ಲಿ ಏರಿಕೆಯಾದಲ್ಲಿ ನದಿಗೆ ಮತ್ತಷ್ಷು ಹೆಚ್ಚುವರಿ ನೀರು ಬಿಟ್ಟರೂ ಎಲ್ಲಾ ರೀತಿಯ ಮುಂಜಾಗೃತ ಕ್ರಮ ವಹಿಸಲಾಗಿದೆ ಎಂದರು.

ದಾಖಲೆ ಮಳೆಗೆ ತತ್ತರಿಸಿದ್ದ ಉಡುಪಿ ಸ್ಥಿತಿ ಈಗ ಹೇಗಿದೆ? .

ತಹಸೀಲ್ದಾರ್‌ ಮಹೇಶ್‌ಕುಮಾರ್‌ ಮತನಾಡಿ, ಪ್ರಸ್ತುತ ನದಿಯಲ್ಲಿ 35 ಸಾವಿರ ಕ್ಯುಸೆಕ್ಸ್‌ ನೀರು ಹರಿದು ಬರುತ್ತಿರುವುದರಿಂದ ಯಾವುದೇ ಆತಂಕಪಡಬೇಕಾದ ಅವಶ್ಯಕತೆಯಿಲ್ಲ. ಒಂದು ವೇಳೆ ಕಪಿಲಾನದಿ ಪ್ರವಾಹದಿಂದ ಅಪಾಯ ಮಟ್ಟಮೀರಿ ಹರಿದರೂಯಾವುದೇ ಅನಾಹುತ ವಾಗದಂತೆ ತಾಲೂಕು ಆಡಳಿತ ಎಲ್ಲಾ ರೀತಿಯ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

5 ಜಿಲ್ಲೆಗಳಲ್ಲಿ ಇನ್ನೂ ಮಳೆಯಬ್ಬರ! ...

ರಾಜ್ಯದ ಡ್ಯಾಂಗಳಲ್ಲಿ ಅತೀ ಬೇಗ ತುಂಬುವ ಜಲಾಶಯವೆಂದೇ ಪ್ರಸಿದ್ದಿ ಪಡೆದಿರುವ ಕಬಿನಿ ಜಲಾಶಯ ಈಗ ಮತ್ತೊಮ್ಮೆ ತುಂಬುವ ಮೂಲಕ ಕಪಿಲಾನದಿಗೆ ಜೀವಕಳೆ ತರುವ ಜೊತೆಗೆ ಜನರಿಗೆ ಆತಂಕ ಸೃಷ್ಟಿಸಿದೆ.

ನೂರಾರು ಎಕರೆ ಭತ್ತದ ಫಸಲು ಮುಳುಗಡೆ

ಸುತ್ತೂರು: ಕಳೆದ ಮೂರು ದಿನಗಳಿಂದ ಕಪಿಲಾ ನದಿಯು ಉಕ್ಕಿ ಹರಿದ ಪರಿಣಾಮ ಕಬಿನಿ ನದಿಯ ಸುತ್ತೂರು, ಕುಪ್ಪರವಳ್ಳಿ, ನಗರ್ಲೆ, ಸರಗೂರು, ಬಕ್ಕಳ್ಳಿ ಹದಿನಾರು, ಹೊಸಕೋಟೆ, ಬಿಳುಗಲಿ, ತಾಯೂರು ಮುಂತಾದ ಗ್ರಾಮಗಳಿಗೆ ಸೇರಿದ ಸಾವಿರಾರು ಎಕರೆ ಭತ್ತದ ಫಸಲು ಕಬಿನಿ ನೀರು ನುಗ್ಗಿ ನಾಶವಾಗಿದೆ. ಈ ವ್ಯಾಪ್ತಿಯ ಸಾವಿರಾರು ಎಕರೆ ರೈತರ ಜಮೀನಿನಲ್ಲಿ ಕಳೆದ ವಾರ ನಾಟಿ ಮಾಡಿದ್ದರು.