Asianet Suvarna News Asianet Suvarna News

ದಕ್ಷಿಣ ಕನ್ನಡದಲ್ಲಿ ಆ.20ರವರೆಗೆ ಭಾರಿ ಮಳೆ ಸಂಭವ

  •  ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಬುಧವಾರ ಇಡೀ ದಿನ ಮೋಡ, ತಂಪು ಹವೆ
  • ಆಗಸ್ಟ್ 20ರವರೆಗೆ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವ ಸಂಭವ    
heavy Monsoon Rain alert in Dakshina kannada snr
Author
Bengaluru, First Published Aug 19, 2021, 4:06 PM IST

ಮಂಗಳೂರು (ಆ.19): ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಬುಧವಾರ ಇಡೀ ದಿನ ಮೋಡ, ತಂಪು ಹವೆ ಕಂಡುಬಂದಿದೆ. 

ಗ್ರಾಮಾಂತರದ ಅಲ್ಲಲ್ಲಿ ತುಸು ಮಳೆ ಹನಿದಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಹೆಚ್ಚಿನ ಮಳೆಯ ಸಂಭವವನ್ನು ಹವಾಮಾನ ಇಲಾಖೆ ತಿಳಿಸಿದೆ.

ಹೊಸದಾಗಿ ಮತ್ತೆ 22 ಪ್ರವಾಹ ಪೀಡಿತ ತಾಲೂಕುಗಳ ಘೋಷಣೆ: ಕುಮಾರಸ್ವಾಮಿಗೆ ಜಯ

ಆ.20ರ ವರೆಗೂ ಮಳೆ ಹೆಚ್ಚಾಗಲಿದ್ದು, ಕರಾವಳಿಯಲ್ಲಿ ಮಳೆ ತೀವ್ರತೆ ಜಾಸ್ತಿಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಜಿಲ್ಲೆಯಲ್ಲಿ ಬುಧವಾರ ಹಗಲು ಹೊತ್ತು ಮಳೆ ಇಲ್ಲದಿದ್ದರೂ ಬಿಸಿಲು ಇರಲಿಲ್ಲ. ಅಪರಾಹ್ನ ಮಂಗಳೂರಿನಲ್ಲಿ ಒಮ್ಮೆ ಬಿಸಿಲು ಇಣುಕಿದ್ದು ಬಿಟ್ಟರೆ ಮತ್ತೆ ಮೋಡ ಆವರಿಸಿತ್ತು. ಸಂಜೆಗೂ ಮೊದಲೇ ಮಳೆಯ ವಾತಾವರಣ ಗೋಚರಿಸಿತ್ತು.

ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಇದೀಗ ಮತ್ತೆ ಅರಂಭವಾಗಿದೆ. ಮಲೆನಾಡು ಹಾಗು ಕರಾವಳಿ ಪ್ರದೇಶದಲ್ಲಿ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

Follow Us:
Download App:
  • android
  • ios