ಬೆಳಗಾವಿ(ಜು.31): ಕೊರೋನಾ ಸೋಂಕಿನಿಂದ ಮೃತಪಟ್ಟ ಇಬ್ಬರು ವ್ಯಕ್ತಿಗಳ ಮೃತದೇಹದ ಅಂತ್ಯಕ್ರಿಯೆ ಪ್ರಕ್ರಿಯೆ ವೇಳೆ ಬೆಳಗಾವಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಬಸವರಾಜ ದಬಾಡೆ ಕಣ್ಣೀರು ಹಾಕಿದ ಪ್ರಸಂಗ ಇಲ್ಲಿನ ಸದಾಶಿವ ನಗರದ ಸ್ಮಶಾನಭೂಮಿಯಲ್ಲಿ ಗುರುವಾರ ನಡೆದಿದೆ. 

ಯಾವ ಜನ್ಮದ ಋುಣವೂ ಇಲ್ಲದ ಮೃತರ ಅಂತ್ಯಕ್ರಿಯೆಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದು, ಎಲ್ಲರ ಮನಕಲಕುವಂತಿದೆ. ಮೃತರ ಕುಟುಂಬಸ್ಥರು ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಂತ್ಯಕ್ರಿಯೆ ಮಾಡುವಂತೆ ಮನವಿ ಮಾಡಿದ್ದರು. 

ಬೆಳಗಾವಿ: ಕೊರೋನಾ ವಾರಿಯರ್ಸ್‌ಗೂ ಸೋಂಕು, ಆರೈಕೆಯೇ ತೊಡಕು..!

ಮೃತರ ಅಗ್ನಿಸ್ಪರ್ಶ ಮಾಡುವ ಮುನ್ನ ಮೂರು ಬಾರಿ ನೆಲಕ್ಕೆ ಮುಟ್ಟಿ ನಮಸ್ಕರಿಸಿದರು. ಕುಟುಂಬಸ್ಥರು ಮಾಡಲಾಗದ ಕಾರ್ಯವನ್ನು ಪಾಲಿಕೆ ಸಿಬ್ಬಂದಿ ನೆರವೇರಿಸುತ್ತಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.