ಹಾಸನ (ಡಿ.16): ಈ ಬಾರಿಯ ತನ್ನ ಹುಟ್ಟುಹಬ್ಬಕ್ಕೆ ಯಾರಾದರೂ ರಸ್ತೆಬದಿ ಫ್ಲೆಕ್ಸ್‌, ಬ್ಯಾನರ್‌ ಹಾಕಿಸಿದ್ರೆ ಕೇಸ್‌ ಹಾಕಿಸ್ತೀನಿ. 

ಜನರು ಕೊರೋನಾದಿಂದಾಗಿ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ವಿಜೃಂಭಣೆ ಬೇಡ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ತಮ್ಮ ಕಾರ್ಯಕರ್ತರಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಇದೇ ಡಿ.17ಕ್ಕೆ ಎಚ್‌.ಡಿ.ರೇವಣ್ಣ ಅವರ 63ನೇ ಹುಟ್ಟುಹಬ್ಬ ಇದೆ. ಪ್ರತಿ ವರ್ಷ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಶುಭಾಶಯ ಕೋರುವ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ಹಾಕಿಸುತ್ತಿದ್ದರು. 

'ಶೀಘ್ರ ಕುಮಾರಸ್ವಾಮಿಗೆ ಸಿಎಂ ಪಟ್ಟ : ಅಲ್ಲಿಂದಲೇ ಬಂತು ಹೇಳಿಕೆ'

ಆದರೆ, ಈ ಬಾರಿ ಕೊರೋನಾದಿಂದ ಜನರು ಸಂಕಷ್ಟದಲ್ಲಿರುವುದರಿಂದ ಹುಟ್ಟುಹಬ್ಬದ ವಿಜೃಂಭಣೆ ಬೇಡ ಎಂದು ರೇವಣ್ಣ ತಿಳಿಸಿದ್ದಾರೆ.