Asianet Suvarna News Asianet Suvarna News

ಹಳೆ ಜೋಡೆತ್ತುಗಳ ನಡುವೆ ಫೈಟ್ : ಸ್ಲೋ ಪಾಯಿಸನ್ ಎಂದ್ರು HDK

ಇದೀಗ ಹಳೆ ಜೋಡೆತ್ತುಗಳ ನಡುವೆ ಫೈಟ್ ಶುರುವಾಗಿದೆ. ಮುನಿಸಿನಿಂದ ಮಾತುಗಳು ಹೊರಬರುತ್ತಿವೆ.

HD Kumaraswamy unhappy Over DK Shivakumar snr
Author
Bengaluru, First Published Oct 15, 2020, 8:03 AM IST
  • Facebook
  • Twitter
  • Whatsapp

ರಾಮನಗರ (ಅ.15): ಬೇರೆ ಪಕ್ಷ​ದಲ್ಲಿರುವ ಕೆಲ​​ವ​ರಿಂದ ನನಗೆ ಸ್ಲೋ ಪಾಯಿಸನ್‌ ಆಗು​ವಂತಹ ಘಟ​ನೆ​ಗಳು ನಡೆ​ಯು​ತ್ತಿವೆ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ವಿರುದ್ಧ ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ವಾಗ್ದಾಳಿ ನಡೆ​ಸಿದ್ದಾರೆ. 

ಬುಧ​ವಾರ ಮಾತ​ನಾ​ಡಿದ ಅವರು, ‘ಏನೋ ನಮ್ಮಿಂದಲೇ ಕುಮಾ​ರ​ಸ್ವಾ​ಮಿಗೆ ರಕ್ಷಣೆ ಕೊಟ್ಟಿ​ದ್ದೇವೆ ಎಂದು ಕೆಲ​ವರು ಜನ​ರಲ್ಲಿ ಸಂದೇಶ ಕೊಡಲು ಹೊರ​ಟಿ​ದ್ದಾರೆ. ಈ ಮೂಲಕ ನನ್ನೊಂದಿಗೆ ಬಹಳ ಆತ್ಮೀ​ಯತೆ ತೋರಿಸಿ ಸ್ಲೋ ಪಾಯಿಸನ್‌ ಆಗುವ ಕೆಲಸ ಮಾಡಲಾಗುತ್ತಿದೆ. 

ಬೈ ಎಲೆಕ್ಷನ್‌ನಲ್ಲಿ ಜಾತಿ ವಾರ್: ಹಳೆ ಜೋಡೆತ್ತುಗಳ ನಡುವೆ ಶುರುವಾಯ್ತು ಕಾದಾಟ .

ಇದ​ಕ್ಕೆಲ್ಲ ನಾವು ಯಾವುದೇ ರೀತಿ​ಯಲೂ ಮೈಮ​ರೆ​ಯು​ವು​ದಿಲ್ಲ’ ಎಂದ​ರು. ‘ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಮುಗಿಸುವುದು ಕಾಂಗ್ರೆ​ಸ್ಸಿ​ಗರ ಹಗಲು ಗನಸು. ಸಿದ್ದ​ರಾ​ಮಯ್ಯನವರ ಸರ್ಕಾ​ರ​ವಿದ್ದಾಗ ಮಂಡ್ಯ​ದಲ್ಲಿ 200ಕ್ಕೂ ಹೆಚ್ಚು​ ರೈತರು ಆತ್ಮ​ಹತ್ಯೆ ಮಾಡಿ​ಕೊಂಡರು. ಆ ರೈತರ ಕುಟುಂಬ​ಕ್ಕೆ ನನ್ನ ಸರ್ಕಾ​ರ​ದಲ್ಲಿ ಪರಿ​ಹಾರ ನೀಡಿದೆ. ಈಗ ಜಾತಿ ಹೆಸರು ಹೇಳು​ತ್ತಿ​ದ್ದಾರೆ’ ಎಂದು ಕಿಡಿಕಾರಿದರು.

ಮಂಡ್ಯದಲ್ಲಿ ರೈತರ ಶಾಲು ಹಾಕಿಕೊಂಡು ಕಾರ್ಯಕ್ರಮ ಮಾಡಿದ್ದಾರೆ. ಈಗ ಅವರಿಗೆಲ್ಲ ಕಾಂಗ್ರೆಸ್‌ ಶಾಲಿಗೆ ಬೆಲೆಯಿಲ್ಲ ಅಂತಾ ಗೊತ್ತಾ​ಗಿದೆ. ಹಾಗಾಗಿ ಕಾಂಗ್ರೆಸ್‌ ಶಾಲು ಬಿಟ್ಟು, ರೈತರ ಹಸಿರು ಶಾಲು ಹಾಕಿಕೊಂಡು ಹೋಗಿದ್ದಾರೆ ಎಂದು ಲೇವಡಿ ಮಾಡಿ​ದ​ರು.

Follow Us:
Download App:
  • android
  • ios