ಮಂಡ್ಯ(ಜೂ.11): ರಾಜ್ಯಸಭಾ ಅಭ್ಯರ್ಥಿಯಾಗಿ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿದ್ದೇವೆ ಎಂದು ಬಿಜೆಪಿ ಪಕ್ಷ ಹೇಳಿಕೊಳ್ಳುತ್ತಿದೆ. ಕಾರ್ಯಕರ್ತರನ್ನು ನಿಲ್ಲಿಸಿದ ಮಾತ್ರಕ್ಕೆ ಸಮಸ್ಯೆಗೆ ಪರಿಹಾರ ದೊರೆಯುತ್ತದಾ ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.

ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಕಣ್ಣು ತೆರೆಸಲು ಅನುಭವಸ್ಥರ ಹಾಗೂ ಹಿರಿತನಗಳ ಅವಶ್ಯಕತೆ ಇದೆ. ಜಿಜೆಪಿ ಪಕ್ಷ ಯುವಕರಿಗೆ, ಕಾರ್ಯಕರ್ತರಿಗೆ ಅವಕಾಶ ನೀಡಿದ್ದೇವೆ ಎಂದು ಪ್ರಚಾರ ಪಡೆಯುತ್ತಾರೆ. ದೇವೇಗೌಡರ ವಯಸ್ಸಿನ ಬಗ್ಗೆಯೂ ಚರ್ಚೆ ನಡೆಯುತ್ತಿವೆ. ಆದರೆ, ರಾಜ್ಯದ ಹಿತದೃಷ್ಠಿ ಯಾರಿಗೂ ಕಾಣುತ್ತಿಲ್ಲ ಎಂದು ಬಿಜೆಪಿ ಮುಖಂಡರಿಗೆ ಕುಟುಕಿದರು.

ಮೈಷುಗರ್‌ ಕಾರ್ಖಾನೆ ಪರಿಶೀಲಿಸಿ ಸಚಿವರು, ಸಂಸದೆ: ಇಲ್ಲಿವೆ ಫೋಟೋಸ್

ದೆಹಲಿಯಲ್ಲಿ ರಾಜ್ಯದ ಸಮಸ್ಯೆಯ ಬಗ್ಗೆ ಗಟ್ಟಿದನಿ ಎತ್ತಲು ದೇವೇಗೌಡರು ರಾಜ್ಯಸಭೆಗೆ ಪ್ರವೇಶಿಸುವ ಅಗತ್ಯವಿತ್ತು. ಇದನ್ನು ಅರಿತು ಎಲ್ಲರೂ ಪಕ್ಷಾತೀತವಾಗಿ ಅವರನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಸುದ್ದಿಗಾರ ಜತೆ ಮಾತನಾಡಿ, ಅವರ ಅನುಭವವನ್ನು ಪರಿಗಣಿಸಿ ಪಕ್ಷದ ಶಾಸಕರು, ದೆಹಲಿ ನಾಯಕರು, ಸ್ಥಳೀಯ ಕಾರ್ಯಕರ್ತರು ಸೇರಿದಂತೆ ಹಲವಾರು ಮಂದಿ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಅವರು ರಾಜ್ಯ ಸಭೆಗೆ ಹೋಗಲು ಒಪ್ಪಿ ಕೊಂಡಿದ್ದಾರೆ. ಅವರ ಅನುಭವ ವನ್ನು ಬಳಸಿಕೊಂಡು ರಾಜ್ಯದ ಪರವಾಗಿ ದನಿ ಎತ್ತಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಮ್ಮ ಹೆಂಡತಿ, ಮಕ್ಕಳಿಗೂ ಇಂತಹದ್ದೇ ಆಹಾರ ಧಾನ್ಯ ಕೊಡ್ತೀರಾ? ಸಚಿವ ಗೋಪಾಲಯ್ಯ ಕೆಂಡಾಮಂಡಲ..!

ಕಳೆದ ಬಾರಿಯೇ ಲೋಕಸಭೆಯಲ್ಲಿ ದೇವೇಗೌಡರು ವಿಧಾಯದ ಬಾಷಣ ಮಾಡಿದ್ದರು. ಅದರೆ, ತುಮಕೂರಿನ ಜನತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ದೇವೇಗೌಡರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದರು. ಅದರೆ ಮತದಾರು ಸೋಲಿಸಿದರು. ನಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟುಏಳು ಬೀಳುಗಳನ್ನು ಕಂಡಿದ್ದೇವೆ. ನಾವು ಸೋತಾಗ ಕುಗ್ಗುವುದಿಲ್ಲ, ಗೆದ್ದಾಗ ಹಿಗ್ಗುವುದೂ ಇಲ್ಲ. ದೇವೇಗೌಡರ ರಾಜ್ಯಸಭೆ ಪ್ರವೇಶದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದ್ದು, ಅವುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಟೀಕಾಕಾರರಿಗೆ ಟಾಂಗ್‌ ನೀಡಿದರು.

News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್‌

"