ರಾಮ​ನ​ಗರ(ಏ.25): ಪಾದ​ರಾ​ಯ​ನ​ಪುರ ಗಲಾಟೆ ಪ್ರಕ​ರ​ಣದ ಆರೋ​ಪಿ​ಗ​ಳನ್ನು ರಾಮ​ನ​ಗರ ಕಾರಾ​ಗೃ​ಹಕ್ಕೆ ಸ್ಥಳಾಂತ​ರಿ​ಸುವ ಮೂಲಕ ರಾಜ್ಯ ಸರ್ಕಾರ ತಪ್ಪು ಮಾಡಿದೆ. ಪಶ್ಚಾ​ತಾಪ ಪಟ್ಟು ಮಾಡಿದ ತಪ್ಪನ್ನು ಸರಿ​ಪ​ಡಿ​ಸಿ​ಕೊ​ಳ್ಳಿ. ಬೇರೆ​ಯವರ ಬಗ್ಗೆ ಲಘು​ವಾಗಿ ಮಾತ​ನಾ​ಡು​ವುದು ಹಾಗೂ ಹುಡು​ಗಾ​ಟಿಕೆ ಹೇಳಿಕೆ ನೀಡು​ವು​ದನ್ನು ಬಿಡ​ಬೇಕು ಎಂದು ಮಾಜಿ ಸಿಎಂ ಕುಮಾ​ರ​ಸ್ವಾ​ಮಿ​ರ​ವರು ಉಪ​ಮು​ಖ್ಯ​ಮಂತ್ರಿ ಅಶ್ವತ್ಥ್ ನಾರಾ​ಯಣ ವಿರುದ್ಧ ಕಿಡಿ​ಕಾ​ರಿ​ದರು.

ಮೈಸೂ​ರಿ​ನಿಂದ ಬೆಂಗ​ಳೂ​ರಿಗೆ ತೆರ​ಳು​ತ್ತಿದ್ದ ಮಾರ್ಗ ಮಧ್ಯೆ ರಾಮ​ನ​ಗ​ರದ ಕಾರಾ​ಗೃ​ಹದ ಬಳಿ ಜನ​ರಿಂದ ಅಹ​ವಾಲು ಸ್ವೀಕ​ರಿ​ಸಿದ ಬಳಿಕ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಜಿಲ್ಲಾ ಉಸ್ತು​ವಾರಿ ಸಚಿ​ವರು ಆಗಿ​ರುವ ಡಿಸಿಎಂ ಅಶ್ವತ್ಥ್ ನಾರಾ​ಯಣ ಅವರು ಎಚ್ಚ​ರಿ​ಕೆ​ಯಿಂದ ಹೇಳಿಕೆ ನೀಡ​ಬೇಕು. ಯಾರ ಬಗ್ಗೆಯೂ ಲಘು​ವಾಗಿ ಮಾತ​ನಾ​ಡ​ಬಾ​ರದು ಎಂದರು.

ಮಾಡಿದ ತಪ್ಪು ಸರಿಪಡಿಸಿಕೊಳ್ಳಿ

ಆರೋ​ಪಿ​ಗಳ ಸ್ಥಳಾಂತ​ರಿಸಿದ್ದು ತಪ್ಪು. ನೀವು ತಪ್ಪು ಮಾಡಿ​ಕೊಂಡಿ​ದ್ದೀರಿ. ತಪ್ಪು ಮಾಡಿ​ಕೊಂಡ ಮೇಲೆ ಪಶ್ಚಾ​ತಾಪ ಪಟ್ಟು ಸರಿ ಪಡಿ​ಸಿ​ಕೊ​ಳ್ಳುವ ಪ್ರಯತ್ನ ಮಾಡ​ಬೇಕು. ಇಂತಹ ಪರಿ​ಸ್ಥಿ​ತಿ​ಯಲ್ಲಿ ತಪ್ಪಾ​ಗಿ​ರು​ವು​ದನ್ನೇ ರಾಜ​ಕೀಯಕ್ಕೆ ಬಳ​ಸಿ​ಕೊ​ಳ್ಳು​ವುದು ಸರಿ​ಯಲ್ಲ. ಇದು ರಾಜ​ಕೀಯ ಮಾಡುವ ಸಮಯ ಅಲ್ಲ ಎಂದು ಹೇಳಿ​ದರು.

ಬಹುದಿನಗಳ ರೈತರ ಕನಸು ನನಸು: ಏಷ್ಯಾದಲ್ಲಿಯೇ ಅತ್ಯಂತ ಉದ್ದದ ಜಲಸೇತುವೆ ಲೋಕಾರ್ಪಣೆ

ಪರ​ಪ್ಪನ ಅಗ್ರ​ಹಾ​ರ​ದಿಂದ ರಾಮ​ನಗರ ಕಾರಾ​ಗೃ​ಹಕ್ಕೆ ಆರೋ​ಪಿ​ಗ​ಳನ್ನು ಸ್ಥಳಾಂತರ ಮಾಡು​ವುದು ವಿವೇಕ ರಹಿತ ನಿರ್ಧಾರ, ಮುಂದಾ​ಗುವ ಅನಾ​ಹು​ತ​ಗ​ಳಿಗೆ ಹೊಣೆ ಆಗ​ಬೇ​ಕಾ​ಗು​ತ್ತದೆ ಎಂದು ರಾಜ್ಯ​ಸ​ರ್ಕಾ​ರಕ್ಕೆ ಎಚ್ಚ​ರಿಕೆ ನೀಡಿದ್ದೆ. ಈ ನಿರ್ಧಾ​ರ​ವನ್ನು ಪುನರ್‌ ಪರಿ​ಶೀ​ಲನೆ ಮಾಡು​ವು​ದಾಗಿ ಮುಖ್ಯ​ಮಂತ್ರಿ, ಗೃಹ ಸಚಿ​ವರು ಹಾಗೂ ಗೃಹ ಇಲಾಖೆ ಕಾರ್ಯ​ದ​ರ್ಶಿ​ಗಳು ಭರ​ವಸೆ ನೀಡಿ​ದ್ದರು. ಆದರೆ, ನಮ್ಮ ಸಲ​ಹೆ​ಯನ್ನು ಧಿಕ್ಕ​ರಿ​ಸಿ​ದ ಪರಿ​ಣಾಮ ರಾಮ​ನ​ಗ​ರ​ದಲ್ಲಿ ಸಮಸ್ಯೆ ಉದ್ಭವ ಆಗಿದೆ ಎಂದರು.

ಐವರು ಆರೋಪಿಗಳಿಗೆ ಸೋಂಕು

ಕಾರಾ​ಗೃ​ಹ​ದ​ಲ್ಲಿ​ರುವ ಐದು ಮಂದಿ ಆರೋ​ಪಿ​ಗ​ಳ​ಲ್ಲಿ ಕೊರೋನಾ ಸೋಂಕು ಪಾಸಿ​ಟಿವ್‌ ಬಂದಿದೆ. ಈಗ ಕಾರಾ​ಗೃ​ಹ​ದಲ್ಲಿ ಕಾರ್ಯ​ನಿ​ರ್ವ​ಹಿ​ಸು​ತ್ತಿ​ರುವ ಕೆಳ ಹಂತದ ಸಿಬ್ಬಂದಿಯ ಕುಟುಂಬ ಪರಿ​ಸ್ಥಿತಿ ಏನಾ​ಗ​ಬೇಕು.

ಡೆಡ್ಲಿ ಕೊರೋನಾ ವೈರಸ್‌ ವಿರುದ್ಧ ಹೋರಾಡಿ ಗೆದ್ದು ಬಂದ ಅಜ್ಜಿಯರು..!

ಸುಮಾರು 30 ರಿಂದ 35 ಮಂದಿ​ಯನ್ನು ಕ್ವಾರಂಟೈನ್‌ ನಲ್ಲಿ ಇಡುವ ಪರಿ​ಸ್ಥಿತಿ ನಿರ್ಮಾ​ಣ​ವಾ​ಗಿದೆ ಎಂದರು. ಜಿಲ್ಲಾ​ಧಿ​ಕಾ​ರಿ​ಗಳು ಹಾಗೂ ಜಿಲ್ಲಾ ಆರೋ​ಗ್ಯಾ​ಧಿ​ಕಾ​ರಿ​ಗ​ಳನ್ನು ದೂರ​ವಾಣಿ ಮೂಲಕ ಸಂಪ​ರ್ಕಿಸಿ ಚರ್ಚೆ ನಡೆ​ಸಿ​ದ್ದೇನೆ. ಸರ್ಕಾ​ರದ ವತಿ​ಯಿಂದ ತಪ್ಪಾ​ಗಿ​ದ್ದರು ಸಹ ಅಧಿ​ಕಾ​ರಿ​ಗಳು ತಮ್ಮ ಮಿತಿ​ಯಲ್ಲಿ ಮುಂಜಾ​ಗೃತ ಕ್ರಮ​ಗ​ಳನ್ನು ಕೈಗೊಂಡು ಪ್ರಾಮಾ​ಣಿ​ಕ​ವಾಗಿ ಕೆಲಸ ಮಾಡು​ತ್ತಿ​ದ್ದಾರೆ ಎಂದು ಹೇಳಿ​ದ​ರು.