ಹಾಸನ [ಸೆ.18] : ಕುಮಾರಸ್ವಾಮಿಯೂ ತಪ್ಪು ಮಾಡಿದ್ದಾರೆ. ಏತಕ್ಕೂ ಬಾರದವರನ್ನು ಶಾಸಕ, ಮಂತ್ರಿ, ಎಂಪಿಯನ್ನಾಗಿ ಮಾಡಿದ್ದಾರೆ. ಅವರೆಲ್ಲರೂ ಕುಮಾರಸ್ವಾಮಿಗೆ ಟೋಪಿ ಹಾಕಿ ಹೋಗುತ್ತಾರೆ. ಹೀಗೆ ಮಾಡಿದ ತಪ್ಪಿಗೆ ಈಗ ಕುಮಾರಸ್ವಾಮಿ ನೋವು ಅನುಭವಿಸುತ್ತಿದ್ದಾರೆ ಎಂದು ಎಚ್ ಡಿ ರೇವಣ್ಣ ಹೇಳಿದ್ದಾರೆ. 

ಹಾಸನದಲ್ಲಿ ಮಾತನಾಡಿದ ರೇವಣ್ಣ, ಕುಮಾರಸ್ವಾಮಿ ಅವರದ್ದು ತಾಯಿ ಕರಳು ಹೊಂದಿರುವ ಎಚ್ಡಿಕೆ, ಒಳ್ಳೆಯವರು, ಕೆಟ್ಟವರೆನ್ನದೇ ಎಲ್ಲರಿಗೂ ತಥಾಸ್ತು ಅಂದು ಬಿಡುತ್ತಾನೆ. ಒಬ್ಬ ಅಣ್ಣನಾಗಿ ಹೇಳುತ್ತಿದ್ದೇನೆ ಕುಮಾರಸ್ವಾಮಿ ಗೌರವ ಇರುವ ಸಜ್ಜರನ್ನು ಪ್ರೀತಿಸಬೇಕು ಎಂದು ಸಲಹೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ 700 ಕೋಟಿ ರು. ಕೆಲಸ ಮಾಡಲಾಗಿದೆ. ಹೀಗೆ ಎಲ್ಲ ಶಾಸಕರಿಗೂ ಹಣ ನೀಡಲಾಗಿದೆ. ಈ ರಾಜ್ಯದಲ್ಲಿ ರೈತರು ಉಳಿಯಬೇಕು. ಅದಕ್ಕಾಗಿ ಮತ್ತೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೇಬೇಕು. ಮುಂದಿನ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ದೇವೇಗೌಡರು, ಪಕ್ಷದ ರಾಜ್ಯಾಧ್ಯಕ್ಷರು ತೀರ್ಮಾನ ಮಾಡುತ್ತಾರೆ ಎಂದರು.