ಅತಿವೃಷ್ಟಿಯಿಂದ ಬ್ಯಾಡಗಿ ಮತಕ್ಷೇತ್ರದ ರೈತರು ಸಂಕಷ್ಟಕ್ಕೀಡಾಗಿರುವುದು ಎಷ್ಟುಸತ್ಯವೋ ಮತಕ್ಷೇತ್ರದಾದ್ಯಂತ ಯಾವುದೇ ಪರಿಹಾರ ನಡೆಯದೇ ಇರುವುದು ಅಷ್ಟೇ ಸತ್ಯ.ಸರ್ಕಾರ ಪ್ರತಿ ಹೆಕ್ಟೇರ್‌ಗೆ 50,000 ರೂ. ಪರಿಹಾರ ನೀಡಲಿ. ಕಾಂಗ್ರೆಸ್ ಮುಖಂಡ ಎಸ್‌ಆರ್‌ಪಾಟೀಲ್ ಒತ್ತಾಯ.

ಬ್ಯಾಡಗಿ (ಸೆ.3) : ಅತಿವೃಷ್ಟಿಯಿಂದ ಬ್ಯಾಡಗಿ ಮತಕ್ಷೇತ್ರದ ರೈತರು ಸಂಕಷ್ಟಕ್ಕೀಡಾಗಿರುವುದು ಎಷ್ಟುಸತ್ಯವೋ ಮತಕ್ಷೇತ್ರದಾದ್ಯಂತ ಯಾವುದೇ ಪರಿಹಾರ ನಡೆಯದೇ ಇರುವುದು ಅಷ್ಟೇ ಸತ್ಯ, ದæೂಡ್ಡ ಅಥವಾ ಸಣ್ಣ ಹಿಡುವಳಿದಾರರು ಎಂದು ಪ್ರತ್ಯೇಕಿಸದೇ ಪ್ರತಿ ಹೆಕ್ಟೇರ್‌ ಕೃಷಿ ಭೂಮಿಗೆ ಕೂಡಲೇ .50 ಸಾವಿರ ಪರಿಹಾರ ಘೋಷಣೆ ಮಾಡುವಂತೆ ಕಾಂಗ್ರೆಸ್‌ ಮುಖಂಡ ಎಸ್‌.ಆರ್‌. ಪಾಟೀಲ ಆಗ್ರಹಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರ ಮಳೆಯಿಂದ ತಾಲೂಕಿನಾದ್ಯಂತ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಸಂಪೂರ್ಣ ಹಾಳಾಗಿದೆ, ಮಳೆ ಸುರಿಯುತ್ತಿರುವ ಕಾರಣ ಬಿತ್ತನೆ ಮಾಡಿದ ಕ್ಷೇತ್ರದಲ್ಲಿ ರೈತರಿಗೆ ಬೆಳೆ ಕೈಗೆ ಸಿಗುವ ಅನುಮಾನಗಳಿವೆ, ಕೂಡಲೇ ಸರ್ಕಾರ ಸಣ್ಣ ಮತ್ತು ದೊಡ್ಡ ಹಿಡುವಳಿದಾರರು ಪ್ರತ್ಯೇಕಿಸದೇ ಪ್ರತಿ ಹೆಕ್ಟೇರ್‌ಗೆ .50 ಸಾವಿರ ಪರಿಹಾರ ಘೋಷಿಸುವಂತೆ ಆಗ್ರಹಿಸಿದರು.

ಹಾವೇರಿ: ನಿರಂತರ ಮಳೆ, ಮೂರು ದಿನಗಳಲ್ಲಿ 670 ಮನೆ ಹಾನಿ

ಪಹಣಿ ಹಿಡಿದು ಹಣ ವಿತರಿಸಲಿ: ನೆರೆಯಂತಹ ಸಮಯದಲ್ಲಿ ಮನೆ ಕಳೆದುಕೊಂಡಿದ್ದಲ್ಲದೇ ಜನ ಜಾನುವಾರು ಬೀದಿಗೆ ಬರುವ ಮೂಲಕ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ,ಇಂತಹ ಸ್ಥಿತಿಯಲ್ಲಿ ಅರ್ಜಿ ಸಲ್ಲಿಸಲು ಕಚೇರಿಗೆ ಬರಬೇಕೆಂಬುದು ಮೂರ್ಖತನದ ಪರ ಮಾವಧಿ ಕೂಡಲೇ ಅಧಿಕಾರಿಗಳು ನೆರೆಯಲ್ಲಿ ಬದುಕು ಕಳೆದುಕೊಂಡವರನ್ನು ಪತ್ತೆ ಹಚ್ಚುವ ಮೂಲಕ ತಾವೇ ಸ್ವಯಂಪ್ರೇರಿತರಾಗಿ ಅರ್ಜಿ ಪಡೆದು ಪರಿಹಾರ ವಿತರಣೆ ಮಾಡುವಂತೆ ಆಗ್ರಹಿಸಿದರು.

ಬ್ಯಾಡಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟುಮನೆಗಳು ಬಿದ್ದು ಬಡವರು ಬೀದಿಗೆ ಬಂದಿದ್ದಾರೆ, ಆದರೆ ನಿಜವಾಗಿಯೂ ಮನೆ ಕಳೆದುಕೊಂಡವರಿಗೆ ಪರಿಹಾರ ಸಿಗುತ್ತಿಲ್ಲ ಬದಲಾಗಿ ಶಾಸಕರ ಹಿಂಬಾಲಕರು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಬೀಳದಿರುವ ಮನೆಗಳಿಗೆ ಪರಿಹಾರ ಕೊಡಿಸಲು ಮುಂದಾಗುತ್ತಿದ್ದಾರೆ, ಇದರಲ್ಲಿ ಸಾಕಷ್ಟುವ್ಯವಹಾರಗಳು ನಡೆದಿದ್ದು ಕೂಡಲೇ ತನಿಖೆ ನಡೆಸುವ ಮೂಲಕ ಶಾಸಕರ ಹಿಂಬಾಲಕರ ಅಕ್ರಮವನ್ನು ಬಯಲಿಗೆ ತರಬೇಕು ಎಂದು ಆಗ್ರಹಿಸಿದ ಅವರು,ಯಾವುದೇ ಕಾರಣಕ್ಕೂ ಅರ್ಹರಿಗೆ ಪರಿಹಾರ ಸಿಗದಿದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಗುಂಡಿಗಳನ್ನು ಮುಚ್ಚಿ ಪುಣ್ಯಕಟ್ಟಿಕೊಳ್ಳಿ:

ಮುಖಂಡ ಪ್ರಕಾಶ ಬನ್ನಿಹಟ್ಟಿಮಾತನಾಡಿ, ಪುರಸಭೆ, ಲೋಕೋಪಯೋಗಿ, ಪಿಎಂಜಿಎಸ್‌ವೈ ಜಿಪಂ ಸೇರಿದಂತೆ ತಾಲೂಕಿನಲ್ಲಿರುವ ಎಲ್ಲ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆ ಮಾಡುವುದು ಒತ್ತಟ್ಟಿಗಿರಲಿ ಅದರಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಮೂಲಕ ಜನರ ಜೀವ ಉಳಿಸಿ ಪುಣ್ಯಕಟ್ಟಿಕೊಳ್ಳಿ ಎಂದರು. Haveri: ಒಂದು ಕಿಲೋಮೀಟರ್ ನೀರಲ್ಲಿ ತೇಲಿ, ಗಿಡಗಂಟಿ ಹಿಡಿದು ಬದುಕಿತು ಬಡ ಜೀವ

ಈ ಸಂದರ್ಭದಲ್ಲಿ ಅಧ್ಯಕ್ಷ ಅಲ್ಪಸಂಖ್ಯಾತ ಘಟಕದ ಯೂನಸ್‌ ಅಹಮ್ಮದ ಸವಣೂರ, ಮುಖಂಡರಾದ ಶಶಿಧರ (ತೋಟಪ್ಪ) ಅಕ್ಕಿ, ಜಗದೀಶಗೌಡ ಪಾಟೀಲ, ಮಂಜುನಾಥ ಬೋವಿ, ಮಹೇಶ ಉಜನಿ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.