ಲಿಂಗಸುಗೂರಿನ ಹಟ್ಟಿ ಪಟ್ಟಣದಲ್ಲಿ ಶವ ಸಂಸ್ಕಾರಕ್ಕೆ ರುಧ್ರಭೂಮಿಯೇ ಇಲ್ಲ!
ಹಟ್ಟಿಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ರುಧ್ರಭೂಮಿ ಇಲ್ಲದಂತಾಗಿದೆ| ಪಟ್ಟಣದಿಂದ ಕ್ಯಾಂಪ್‌ಗೆ ಹೊಗುವ ಮಾರ್ಗ ಮಧ್ಯ ಹಳ್ಳವಿದ್ದು ಸುಮಾರು 30 ವರ್ಷಗಳಿಂದಲೂ ಅದೇ ಹಳ್ಳದಲ್ಲಿ ಶವಸಂಸ್ಕಾರ ಮಾಡುತ್ತಾರೆ| ಅಲ್ಲದೇ ಡಾ.ಇಎ.ಸಿಮೇಂಡ್ಸ್ ಶಾಲೆ ಸಂಸ್ಥೆಗೆ ಸೇರಿರುವ ಜಾಗದಲ್ಲಿಯು ಸಹ ಶವಸಂಸ್ಕಾರ ಮಾಡುತ್ತಾ ಬರುತ್ತಿದ್ದಾರೆ| ಹಟ್ಟಿ ಪಟ್ಟಣದ ಜನತೆಗೆ ಮಾತ್ರ ಹಳ್ಳವೇ ರುಧ್ರಭೂಮಿಯಾಗಿದೆ| ಶವಸಂಸ್ಕಾರಕ್ಕಾಗಿ ಹಳ್ಳಕ್ಕೆ ಬರುವವರು ಮೂಗು ಮುಚ್ಚಿಕೊಂಡೆ ಬರುವ ಪರಿಸ್ಥಿತಿ ಎದುರಾಗಿದೆ| ಹಳ್ಳದಲ್ಲಿ ಪಟ್ಟಣ ಪಂಚಾಯ್ತಿಯವರು ಕಸಕಡ್ಡಿ, ಪ್ಲಾಸ್ಟಿಕ್, ಮಾಂಸದ ತುಂಡುಗಳು, ಎಲ್ಲಾ ವಿಭಾಗದ ತ್ಯಾಜ್ಯಗಳನ್ನು ಹಾಕುತ್ತಾರೆ|ಸತ್ತ ಪ್ರಾಣಿಗಳ ದೇಹವೂ ಸಹ ಗಬ್ಬೆದ್ದು ನಾರುತ್ತಿದೆ| ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಜನರಲ್ಲಿ ಕಾಣುತ್ತಿವೆ|
ಲಿಂಗಸುಗೂರು[ಅ.4]: ತಾಲೂಕಿನ ಹಟ್ಟಿಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 13 ವಾರ್ಡ್‌ಗಳಿದ್ದು, ಸರಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ವಾಸ ಮಾಡುತ್ತಾರೆ. ಆದರೆ, ದೇಶಕ್ಕೆ ಚಿನ್ನ ನೀಡುವ ಹಟ್ಟಿಚಿನ್ನದ ಗಣಿಗೆ ರುಧ್ರಭೂಮಿ ಇಲ್ಲದಂತಾಗಿದೆ.
ಪಟ್ಟಣದಿಂದ ಕ್ಯಾಂಪ್‌ಗೆ ಹೊಗುವ ಮಾರ್ಗ ಮಧ್ಯ ಹಳ್ಳವಿದ್ದು ಸುಮಾರು 30 ವರ್ಷಗಳಿಂದಲೂ ಅದೇ ಹಳ್ಳದಲ್ಲಿ ಶವಸಂಸ್ಕಾರ ಮಾಡುತ್ತಾರೆ. ಅಲ್ಲದೇ ಡಾ.ಇಎ.ಸಿಮೇಂಡ್ಸ್ ಶಾಲೆ ಸಂಸ್ಥೆಗೆ ಸೇರಿರುವ ಜಾಗದಲ್ಲಿಯು ಸಹ ಶವಸಂಸ್ಕಾರ ಮಾಡುತ್ತಾ ಬರುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಹಿಂದೆ ನಾನಾ ಸಂಘಟನೆಗಳು ಹಾಗೂ ಊರಿನ ಮುಖಂಡರು ಸೇರಿ ತಹಸೀಲ್ದಾರ್ ಅವರಿಗೆ ಹಟ್ಟಿ ಪಟ್ಟಣ ದೊಡ್ಡದಾಗಿ ಬೆಳೆಯುತಿದ್ದು ಪಟ್ಟಣಕ್ಕೆ ರುಧ್ರಭೂಮಿ ಅತ್ಯವಶ್ಯಕತೆ ಇದೆ ಸರ್ಕಾರ ಹಟ್ಟಿಯ ಸುತ್ತಮುತ್ತ 4 ಎಕರೆ ಜಮೀನು ಖರೀದಿಸಿ ರುಧ್ರಭೂಮಿ ಒದಗಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದರು.
ಪಟ್ಟಣದಲ್ಲಿ ಮುಸ್ಲಿಂ ಜನಾಂಗಕ್ಕಾಗಿ ಕಾಕಾನಗರ ಹತ್ತಿರದ ಮಸೀದಿ ಹಿಂಬದಿಯಲ್ಲಿ ರುಧ್ರಭೂಮಿ ಇದ್ದು, ಹಟ್ಟಿ ಕ್ಯಾಂಪ್‌ನಲ್ಲಿ ಕ್ರೈಸ್ತ ಸಮುದಾಯಕ್ಕಾಗಿ ರುಧ್ರಭೂಮಿ ಇದೆ ಅಲ್ಲದೇ ಹಟ್ಟಿಕ್ಯಾಂಪಿನಲ್ಲಿ ಯಾರೇ ಅಸುನೀಗಿದರು ಕೆಇಬಿ ಹತ್ತಿರ ಇರುವ ರುಧ್ರಭೂಮಿಯಲ್ಲಿ ಶವಸಂಸ್ಕಾರ ಮಾಡುತ್ತಾರೆ. ಆದರೆ ಹಟ್ಟಿ ಪಟ್ಟಣದ ಜನತೆಗೆ ಮಾತ್ರ ಹಳ್ಳವೇ ರುಧ್ರಭೂಮಿಯಾಗಿದೆ.\
ಶವಸಂಸ್ಕಾರಕ್ಕಾಗಿ ಹಳ್ಳಕ್ಕೆ ಬರುವವರು ಮೂಗು ಮುಚ್ಚಿಕೊಂಡೆ ಬರುವ ಪರಿಸ್ಥಿತಿ ಎದುರಾಗಿದೆ. ಹಳ್ಳದಲ್ಲಿ ಪಟ್ಟಣ ಪಂಚಾಯ್ತಿಯವರು ಕಸಕಡ್ಡಿ, ಪ್ಲಾಸ್ಟಿಕ್, ಮಾಂಸದ ತುಂಡುಗಳು, ಎಲ್ಲಾ ವಿಭಾಗದ ತ್ಯಾಜ್ಯಗಳನ್ನು ಹಾಕುತ್ತಾರೆ. ಹಾಗೂ ಸತ್ತ ಪ್ರಾಣಿಗಳ ದೇಹವೂ ಸಹ ಗಬ್ಬೆದ್ದು ನಾರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಜನರಲ್ಲಿ ಕಾಣುತ್ತಿವೆ.
ಹಳ್ಳದ ಪಕ್ಕದಲ್ಲಿಯೇ ತ್ಯಾಜ್ಯವನ್ನು ಹಾಕುವದರಿಂದ ಮೂಗು ಮತ್ತು ಬಾಯಿ ತೆರೆದರೆ ವಾಕರಿಕೆ ಬರುತ್ತದೆ, ಪ್ರತಿನಿತ್ಯ ಸಾವಿರಾರು ಜನ ಹಳ್ಳದ ರಸ್ತೆಯಲ್ಲಿ ತಿರುಗಾಡುವುದರಿಂದ ತ್ಯಾಜ್ಯವನ್ನು ರಸ್ತೆ ಮೇಲೆ ಎಸೆಯುವದರಿಂದ ಬೇರೆಡೆಗೆ ಸಾಗಿಸಬೇಕೆಂದು ಸಾರ್ವಜನಿಕರ ಒತ್ತಡವಾಗಿದೆ. ಇದನ್ನು ಯಾವುದಕ್ಕೂ ಲೆಕ್ಕಕ್ಕೆ ತೆಗೆದುಕೊಳ್ಳದ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಇನ್ನಾದರು ಎಚ್ಚೆತ್ತುಕೊಳ್ಳಬೇಕಾಗಿದೆ.
ಪಟ್ಟಣದಲ್ಲಿ ನೀರು, ಅಂಗಡಿ, ಕಟ್ಟಡ ಪರವಾನಿಗೆ ಸೇರಿದಂತೆ ಹಲವು ತೆರಿಗೆಗಳು ಜನರಿಂದ ವಸೂಲಿ ಮಾಡುತ್ತಾರೆ. ವರ್ಷಕ್ಕೆ 30 ಲಕ್ಷಕ್ಕೂ ಹೆಚ್ಚು ತೆರಿಗೆ ವಸೂಲಿ ಮಾಡುವ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಪಟ್ಟಣದ ಸಾರ್ವಜನಿಕರಿಗಾಗಿ ರುಧ್ರಭೂಮಿಗೆ ಭೂಮಿ ಖರೀದಿಸಲು ಹಿಂದೇಟು ಹಾಕುತ್ತಿದೆ.
ಈ ಬಗ್ಗೆ ಮಾತನಾಡಿದ ಹಟ್ಟಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ದುರುಗಪ್ಪ ಅಗೇದಾಳ ಅವರು, ಹಟ್ಟಿ ಪಟ್ಟಣಕ್ಕೆ ರುಧ್ರಭೂಮಿ ಬೇಕಾಗಿದೆ ಅಂತ ಯಾವ ಸಂಘ ಸಂಸ್ಥೆಗಳು ಹಾಗೂ ಊರಿನ ಮುಖಂಡರು ನಮಗೆ ತಿಳಿಸಿಲ್ಲ, ನಾವು ಸಹ ರುಧ್ರಭೂಮಿ ಬಗ್ಗೆ ಸರ್ಕಾರಕ್ಕೆ ತಿಳಿಸಿಲ್ಲ. ಮುಂದೊಂದು ದಿನ ಯಾರಾದರೂ ರುಧ್ರಭೂಮಿಗೆ ಕೇಳಿದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ತಿಳಸಿದ್ದಾರೆ.
ರುಧ್ರಭೂಮಿ ಸಲುವಾಗಿ ಹೋರಾಟಗಳು ಮಾಡಿದಾಗ ಈ ಹಿಂದೆ ತಹಶಿಲ್ದಾರರವರು ಪಟ್ಟಣಕ್ಕೆ ಆಗಮಿಸಿ ಹಟ್ಟಿಗೆ ರುಧ್ರಭೂಮಿಯ ನೀಡುವುದಾಗಿ ಭರವಸೆ ನೀಡಿದ್ದರು ಆದರೆ ಇಲ್ಲಿಯವರೆಗೆ ಯಾರು ಇದರ ಬಗ್ಗೆ ಚಕಾರ ಎತ್ತುತಿಲ್ಲ, ಆದಷ್ಟು ಬೇಗನೆ ಪಟ್ಟಣಕ್ಕೆ ರುಧ್ರಭೂಮಿ ಒದಗಿಸಬೇಕು ಎಂದು ಹಟ್ಟಿ ಪಟ್ಟಣ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.