ಹಟ್ಟಿ ಪಟ್ಟಣದಲ್ಲಿ ಹೀನಾಯ ಸ್ಥಿತಿಯಲ್ಲಿ ಪೌರ ಕಾರ್ಮಿಕರ ಬದುಕು

ಹಟ್ಟಿ ಚಿನ್ನದಗಣಿ ಪಟ್ಟಣದ ವ್ಯಾಪ್ತಿಯ ಪ್ರದೇಶದಲ್ಲಿ ಸ್ವಚ್ಚತೆಗೆ ಪಟ್ಟಣ ಪಂಚಾಯ್ತಿ ಹರಸಾಹಸ ಪಡುತ್ತಿದೆ| ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರ ಬದುಕು ಮಾತ್ರ ಹೀನಾಯ ಸ್ಥಿತಿಯಲ್ಲಿದೆ| ಸ್ವಚ್ಚತಾ ಕಾರ್ಮಿಕರಿಗೆ ಕಸದಲ್ಲಿನ ದುರ್ನಾತ ಮೂಗಿಗೆ ಬಡಿಯುತ್ತದೆ| ಮೋರಿಗಳನ್ನು ಬರಿ ಕೈಯಿಂದಲೇ ಸ್ವಚ್ಚ ಮಾಡಲಾಗುತ್ತಿದೆ|  ಈ ಸಂದರ್ಭದಲ್ಲಿ ಕೈ, ಮೈಗೆ ಸೂಕ್ಷ್ಮವಾದ ಕ್ರಿಮಿಗಳು ಅಂಟಿಕೊಳ್ಳುತ್ತವೆ| ಇವು ದೇಹಕ್ಕೆ ಪ್ರವೇಶಿಸಿ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತವೆ| 

Hatti Municipal Workers in Dirty Places

ಲಿಂಗಸುಗೂರು(ಅ.3): ತಾಲೂಕಿನ ಹಟ್ಟಿ ಚಿನ್ನದಗಣಿ ಪಟ್ಟಣದ ವ್ಯಾಪ್ತಿಯ ಪ್ರದೇಶದಲ್ಲಿ ಸ್ವಚ್ಚತೆಗೆ ಪಟ್ಟಣ ಪಂಚಾಯ್ತಿ ಹರಸಾಹಸ ಪಡುತ್ತಿದೆ. ಆದರೆ, ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರ ಬದುಕು ಮಾತ್ರ ಹೀನಾಯ ಸ್ಥಿತಿಯಲ್ಲಿದೆ.

ಹೌದು, ಹಟ್ಟಿ ಪಟ್ಟಣದ ಸ್ವಚ್ಚತಾ ಕಾರ್ಮಿಕರು ಬೆಳ್ಳಂಬೆಳಗ್ಗೆ ವಿವಿಧ ವಾರ್ಡ್‌ಗಳಲ್ಲಿ ಹಾಜರಿದ್ದು ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ವಾಹನಗಳಿಗೆ ಭರ್ತಿ ಮಾಡಿ ಬೇರೆಡೆಗೆ ಸಾಗಿಸಿ ಎಸೆಯುವದರ ಮೂಲಕ ಪಟ್ಟಣವನ್ನು ಸ್ವಚ್ಚಗೊಳಿಸುತ್ತಾರೆ.
ಆದರೆ, ಸ್ವಚ್ಚತಾ ಕಾರ್ಮಿಕರಿಗೆ ಕಸದಲ್ಲಿನ ದುರ್ನಾತ ಮೂಗಿಗೆ ಬಡಿಯುತ್ತದೆ, ಮೋರಿಗಳನ್ನು ಬರಿ ಕೈಯಿಂದಲೇ ಸ್ವಚ್ಚ ಮಾಡಲಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಗಬ್ಬು ನಾರುವ ಚರಂಡಿಗಳಲ್ಲಿ ಕಸವನ್ನು ಸ್ವಚ್ಚತೆ ಮಾಡುತಿರುವಿರಲ್ಲ ಏಕೆ ಅಂತ ಪ್ರಶ್ನಿಸಿದರೆ ಮನೆಯವರ ಕಿರಿ-ಕಿರಿ, ಮಕ್ಕಳ ಶಾಲೆಯ ಶುಲ್ಕ ಕಟ್ಟುವಂತೆ ಶಾಲೆಯವರ ಕಿರಿ-ಕಿರಿ, ಹೀಗಾಗಿ ಬರುವ ವೇತನ ತೀರಾ ಕಡಿಮೆ, ಇದರಲ್ಲಿ ಒಂದು ದಿನದ ಸಂಬಳ ಕಡಿಮೆಯಾದಲ್ಲಿ ಒಂದು ದಿನದ ಊಟಕ್ಕೂ ಸೊನ್ನೆಯಾಗಲಿದೆ ಎಂಬ ಆತಂಕ ಇವರದ್ದಾಗಿದೆ. ಈ ಸಂದರ್ಭದಲ್ಲಿ ಕೈ, ಮೈಗೆ ಸೂಕ್ಷ್ಮವಾದ ಕ್ರಿಮಿಗಳು ಅಂಟಿಕೊಳ್ಳುತ್ತವೆ, ಇವು ದೇಹಕ್ಕೆ ಪ್ರವೇಶಿಸಿ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತವೆ. ಇಷ್ಟಾದರೂ ಸ್ವಚ್ಚತಾ ಕಾರ್ಯವನ್ನು ದಿನಗೂಲಿ ನೌಕರರು ಬಿಟ್ಟಿಲ್ಲ.

ಸ್ವಚ್ಚತೆಗೆ ದುಡಿಯುತ್ತಿರುವ ಸ್ವಚ್ಚತಾ ಕಾರ್ಮಿಕರು ಬಹುತೇಕರು ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸುವವರು. ಇವರುಗಳು ಮಾಡುವ ಕೆಲಸವನ್ನು ಒಮ್ಮೆ ನೋಡಿದರೆ ಕೈಗೆ ಗ್ಲೌಸ್‌ ಇಲ್ಲ, ಕಾಲುಗಳಿಗೆ ಬೂಟು ಇಲ್ಲದೇನೆ ಕೆಲಸ ಮಾಡುತ್ತಾರೆ. ಸ್ವಚ್ಚತೆಗೆ ಬೇಕಾಗುವ ಉಪಕರಣಗಳು ಪಟ್ಟಣ ಪಂಚಾಯತಿ ಇದಾವುದೇ ನಿಯಮವನ್ನು ಪಾಲನೆ ಮಾಡದೇ ಕಾರ್ಮಿಕರನ್ನು ದುಡಿಸಿಕೊಳ್ಳುತಿರುವುದು ಪ್ರಾಣಿಗಳಿಗಿಂತಲೂ ಕಡೆಯಾಗಿದೆ, ಕಲುಷಿತ ವಾತಾವರಣದಲ್ಲಿ ಕೆಲಸ ಮಾಡಬೇಕಾಗಿರುವ ಸ್ವಚ್ಚತಾ ಕಾರ್ಮಿಕರು ಮಾಡಿರುವ ಪಾಪವಾದರೂ ಏನು ಎಂಬ ಪ್ರಶ್ನೆ ಉದ್ಭವವಾಗಿದೆ.

ಗಾರೆ ಕೆಲಸಕ್ಕೆ ಶಾಲಾ ಮಕ್ಕಳು:

ಅಧಿಕಾರಿಗಳು ವೇತನ ನೀಡದೆ ವರ್ಷಗಳೇ ಕಳೆದಿವೆ, ಸ್ವಚ್ಚತಾ ಕಾರ್ಮಿಕರು ಒಂದೊತ್ತು ಊಟಕ್ಕಾಗಿ ದಿನಗಳನ್ನು ದೂಡುವಂತಾಗಿದೆ. ಮಹಿಳಾ ಕಾರ್ಮಿಕರೊಬ್ಬಳ ಮಗ ತನ್ನ ತಾಯಿಯ ಕಷ್ಟವನ್ನು ನೋಡದೆ ಶಾಲೆಯನ್ನೆ ಬಿಟ್ಟು ತಾಯಿಗೆ ಹೆಗಲು ಕೊಟ್ಟು ಗಾರೆ ಕೆಲಸ ಮಾಡುತ್ತಾ ದುಡಿದ ಹಣದಲ್ಲಿಯೇ ಮನೆ ನಡೆಸುತಿದ್ದಾರೆ.

ಅಧಿಕಾರಿಗಳಿಂದ ವೇತನಕ್ಕೆ ಕೊಕ್ಕೆ:

ಸ್ವಚ್ಚತಾ ಕಾರ್ಮಿಕರಿಗೆ ಅನಾರೋಗ್ಯವಾದಲ್ಲಿ ಅವರ ಬಗ್ಗೆ ಅನುಕಂಪವೆ ಇಲ್ಲದಂತಾಗಿದೆ. ಬರುವ ಅಲ್ಪ ವೇತನದಲ್ಲೇ ಸ್ವಚ್ಚತಾ ಕಾರ್ಮಿಕರು ಆಸ್ಪತ್ರೆಗೆ ಹೋಗಬೇಕಾಗಿದೆ. ಕಳೆದ 19 ತಿಂಗಳಿನ ವೇತನ ಬಾಕಿ ಉಳಿಸಿಕೊಂಡ ಪಟ್ಟಣ ಪಂಚಾಯ್ತಿ ಇಲ್ಲಿಯವರೆಗೂ ಅವರಿಗೆ ವೇತನ ನೀಡದೇ ಇರುವುದು ಕಾರ್ಮಿಕರಲ್ಲಿ ಭಯ ಉಂಟು ಮಾಡಿದೆ. ಸ್ವಚ್ಚತಾ ಕಾರ್ಮಿಕರಿಗೆ ಸಮರ್ಪಕವಾದ ವೇತನ ನೀಡುತಿಲ್ಲ ಮುದೊಂದು ದಿನ ಇವರುಗಳು ಪಟ್ಟಣದ ಸ್ವಚ್ಚತೆಗೆ ಭಾರದೇ ಇದ್ದಲ್ಲಿ ಮತ್ತೋಂದು ರೀತಿ ಕಸದ ಮತ್ತು ಚರಂಡಿಗಳ ಸಮಸ್ಯೆ ಎದುರಾಗಬಹುದಾಗಿದೆ. ಕೂಡಲೇ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಸ್ವಚ್ಚತಾ ಕಾರ್ಮಿಕರ ಬಾಕಿ ವೇತನ ನೀಡಿ ಮುಂದೆ ಆಗಬಹುದಾದ ಸಮಸ್ಯಗೆ ಪಟ್ಟಣ ಪಂಚಾಯ್ತಿ ಎಚ್ಚೆತ್ತುಕೊಳ್ಳಬೇಕಿದೆ.
 

Latest Videos
Follow Us:
Download App:
  • android
  • ios