ಚಂಡೀಗಢ/ಹಾಸನ, (ಜೂನ್.09): ಹಾಸನದ ಆಲೂರು ತಾಲ್ಲೂಕಿನ ಕಾದಾಳು ಗ್ರಾಮದ ಮೋಹನ್‍ಕುಮಾರ್ (28) ಹರಿಯಾಣದ ಶಿರಸಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೋಹನ್‍ ಕುಮಾರ್ ಕಳೆದ 8 ವರ್ಷಗಳಿಂದ ಹರಿಯಾಣದ ಶಿರಸಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 

ಶುಕ್ರವಾರ ಡೆತ್ ನೋಟ್ ಬರೆದಿಟಿದ್ದ ಯೋಧ, ಶೌಚಗೃಹದಲ್ಲಿ ತನ್ನ ರೈಫಲ್ ನಿಂದಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯೋಧನ ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.  

ಯೋಧನಿಗೆ ಕಳೆದ 3 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಶನಿವಾರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು,  ಇಂದು (ಭಾನುವಾರ) ಸ್ವಗ್ರಾಮಕ್ಕೆ ಮೃತದೇಹ ಆಗಮಿಸಲಿದೆ. 

ಮೋಹನ್‍ ಕುಮಾರ್ ಸಾವಿನ ವಿಷಯ ಗೊತ್ತಾಗುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.