ಹಾಸನ, [ಮೇ.31]: ಹಾಸನ ಜಿಲ್ಲೆಯ ಗ್ರಾನೈಟ್ ಉದ್ಯಮಿ ಅಪ್ಪಣ್ಣಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸೇರಿ 7 ಜನರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೇ 15 ರ ರಾತ್ರಿ ಗ್ರಾನೈಟ್‌ ಉದ್ಯಮಿ ಅಪ್ಪಣ್ಣಗೌಡ ಅವರನ್ನು ಅವರ ಮನೆಯಲ್ಲಿಯೇ ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು. ಇದೀಗ ಈ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಪತಿಯನ್ನು ಮುಗಿಸಿದ್ರೆ ಗ್ರಾನೈಟ್ ಫ್ಯಾಕ್ಷರಿ, ಆಸ್ತಿ ಹಾಗೂ ಕಲ್ಲು ಕೋರೆ ಸಿಗಲಿದೆ ಎಂದು ಸ್ಕೆಚ್ ಹಾಕಿದ್ದ ಕೊಲೆಯಾದ ಅಪ್ಪಣ್ಣಗೌಡ ಪತ್ನಿ ವಿಜಯ ಸೇರಿ 7 ಜನರನ್ನು ಬಂಧಿಸಿದ್ದಾರೆ.

ಆರೋಪಿಗಳು ಅರಕಲಗೂಡು, ಹಾಸನ, ಚನ್ನರಾಯಪಟ್ಟಣ ಮೂಲದವರಾಗಿದ್ದಾರೆ. ಆಸ್ತಿಗಾಗಿ ಗಂಡನನ್ನು ಕೊಲ್ಲಲು ವಿಜಯಾ 10 ಲಕ್ಷಕ್ಕೆ ಸುಪಾರಿ ನೀಡಿದ್ದಳು. ಅದರಂತೆ ಕಿಲ್ಲರ್ಸ್ ಮೇ 15 ರ ರಾತ್ರಿ  ಅಪ್ಪಣ್ಣಗೌಡ ಮಲಗಿದ್ದ ಕೊಠಡಿಯಲ್ಲೇ ಹತ್ಯೆ ಮಾಡಿದ್ದರು.

ಬಂಧಿತ ಹಂತಕರು ಈ ಹಿಂದೆಯೂ ಕೊಲೆಗೆ ಸಂಚು ರೂಪಿಸಿ ವಿಫಲರಾಗಿದ್ದರು ಎಂದು  ಎಸ್ಪಿ ಚೇತನ್ ಸಿಂಗ್ ರಾಥೋರ್ ಮಾಹಿತಿ ನೀಡಿದರು.