ಹಾಸನಾಂಬೆ ಹುಂಡಿ ಎಣಿಕೆ: 9 ದಿನದಲ್ಲಿ ಸಂಗ್ರಹವಾಯ್ತು 12.63 ಕೋಟಿ ಹಣ, 51 ಗ್ರಾಂ ಚಿನ್ನ!

2024ರ ಹಾಸನಾಂಬೆ ದರ್ಶನೋತ್ಸವದಿಂದ 12.63 ಕೋಟಿ ರೂ. ಆದಾಯ ಗಳಿಕೆಯಾಗಿದ್ದು, ಹಾಸನಾಂಬೆ ಇತಿಹಾಸದಲ್ಲಿಯೇ ಅತಿ ಹೆಚ್ಚು. 20 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, ಕಾಣಿಕೆ ರೂಪದಲ್ಲಿ 2.55 ಕೋಟಿ ರೂ. ಸಂಗ್ರಹವಾಗಿದೆ.

Hasanamba Temple hundi count Amount Details san

ಹಾಸನ (ನ.4): ಹಾಸನಾಂಬೆ ದೇವಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವ ಹೊಸ ಇತಿಹಾಸ ಬರೆದಿದೆ. ವಿಶೇಷ ದರ್ಶನದ ಟಿಕೆ‌ಟ್ ಲಾಡು ಮಾರಾಟದಿಂದ ಈ ಬಾರಿ ದಾಖಲೆ ಆದಾಯ ಗಳಿಕೆಯಾಗಿದೆ. 2024 ರ ಹಾಸನಾಂಬೆ ದರ್ಶನೋತ್ಸವದಿಂದ 12 ಕೋಟಿ 63 ಲಕ್ಷ 83 ಸಾವಿರ 808ರೂಪಾಯಿ ಆದಾಯ ಬಂದಿದೆ. ಇದು ಹಾಸನಾಂಬೆ ಇತಿಹಾಸ ದಲ್ಲಿ ಹರಿದು ಬಂದ ದಾಖಲೆಯ ಆದಾಯ ಎನಿಸಿದೆ. ಸಾವಿರ ರೂಪಾಯಿ ಹಾಗೂ 300 ರೂಪಾಯಿ ಟಿಕೆಟ್, ಲಡ್ಡು ಪ್ರಸಾದ ಮಾರಾಟದಿಂದ 9 ಕೋಟಿ 67 ಲಕ್ಷ 27 ಸಾವಿರದ 180 ರೂಪಾಯಿ ಆದಾಯ ಹರಿದುಬಂದಿದೆ. ಈ ಬಾರಿ ಒಟ್ಟು 20 ಲಕ್ಷದ 40 ಸಾವಿರ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ. ಈ ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ 2 ಕೋಟಿ 55 ಲಕ್ಷದ 97 ಸಾವಿರದ 567 ರೂಪಾಯಿ ಸಂಗ್ರಹವಾಗಿದೆ.

ಹಾಸನಾಂಬೆ ಪವಾಡದಲ್ಲಷ್ಟೇ ಅಲ್ಲ, ಆದಾಯದಲ್ಲೂ ಶ್ರೀಮಂತೆ: ಕೇವಲ 12 ದಿನದಲ್ಲಿ 8.72 ಕೋಟಿ ಆದಾಯ ಗಳಿಕೆ

51 ಗ್ರಾಂ ಚಿನ್ನ, 913 ಗ್ರಾಂ ಬೆಳ್ಳಿ ಮೂಲಕವೂ ಭಕ್ತರು ಕಾಣಿಕೆ ನೀಡಿದ್ದಾರೆ. ಇಂದು ಸತತ 7 ಗಂಟೆಗಳಿಂದ 500 ಜನರಿಂದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು,  ಸಂಜೆ 4 ಗಂಟೆಗೆ ಪೂರ್ಣಗೊಂಡ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಕೇವಲ 9 ದಿನಗಳಲ್ಲಿ ಹಾಸನಾಂಬೆ ಗೆ ಕೋಟಿ ಕೋಟಿ ಆದಾಯ ಹರಿದುಬಂದಿದೆ. ಜಾಹಿರಾತಿನಿಂದ ಬಂದ ಆದಾಯ 5.50 ಲಕ್ಷ ರೂಪಾಯಿ, ಸೀರೆ ಮಾರಾಟದಿಂದ 2,00,305 ರೂಪಾಯಿ, ದೇಣಿಗೆ ನೀಡಿದ ಹಣ 40,908 ರೂಪಾಯಿ, ತುಲಾಭಾರದಿಂದ ಬಂದ ಹಣ 21 ಸಾವಿರ, ಇ ಹುಂಡಿಯಿಂದ ಬಂದ ಆದಾಯ 3,98,859 ರೂಪಾಯಿ. ಆ ಮೂಲಕ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ಬಾರಿ ಆದಾಯ ಮೂಲಕ ದಾಖಲೆ ನಿರ್ಮಾಣವಾಗಿದೆ.\

'ಚಾರ್ಟ್‌ ಸಿದ್ದವಾದ ಬಳಿಕ RAC ಟಿಕೆಟ್‌ Waiting ಲಿಸ್ಟ್‌ಗೆ ಹೋಗೋಕೆ ಹೇಗೆ ಸಾಧ್ಯ..' ರೈಲ್ವೇಸ್‌ಗೆ ಪ್ರಶ್ನೆ ಮಾಡಿದ ಯುವಕ

Latest Videos
Follow Us:
Download App:
  • android
  • ios