ಹುಬ್ಬಳ್ಳಿ(ಜ.15): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ. ಕುಟುಂಬ ರಾಜಕಾರಣ ದೇಶವನ್ನು ಕಿತ್ತು ತಿನ್ನುತ್ತಿದೆ. ಯಡಿಯೂರಪ್ಪ ಕುಟುಂಬದ ರಾಜಕಾರಣ ಅತಿಯಾಗಿದೆ ಎಂದು ಬಿಜೆಪಿ ಎಂಎಲ್‌ಸಿ ಎಚ್. ವಿಶ್ವನಾಥ್‌ ಹೇಳಿದ್ದಾರೆ. 

"

ಇಂದು(ಶುಕ್ರವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಮಗ ವಿಜಯೇಂದ್ರ ಇಲ್ವಾ..?, ರಾಘವೇಂದ್ರ ಎಂ.ಪಿ ಇದ್ದಾರೆ. ಯಡಿಯೂರಪ್ಪ ಕುಟುಂಬದ ಹೆಣ್ಣುಮಕ್ಕಳು ರಾಜಕಾರಣದಲ್ಲಿ ಭಾಗಿಯಾಗುತ್ತಿಲ್ವಾ.?. ಈಶ್ವರಪ್ಪನ ಸಹ ಕುಟುಂಬ ರಾಜಕಾರಣದಿಂದ ಹೊತರಾಗಿಲ್ಲ. ಕುಟುಂಬ ರಾಜಕಾರಣವೇ ಭ್ರಷ್ಟಾಚಾರವನ್ನು ಪೋಷಿಸುತ್ತಿದೆ ಎಂದು ತಿಳಿಸಿದ್ದಾರೆ. 

ಸಂಕ್ರಮಣದ ಕರಿಗೆ ಹೋಗುವಾಗ ಭೀಕರ ಅಪಘಾತ: ಸ್ಥಳದಲ್ಲೇ 12 ಮಂದಿ ದುರ್ಮರಣ

ಅಮಿತ್ ಶಾ ಮಗನ ವಿಚಾರದಲ್ಲಿ ಮೋದಿ ಸಹ ಬೇಸರ ಮಾಡಿಕೊಂಡಿದ್ದಾರೆ. ಯಡಿಯೂರಪ್ಪ ಕಾಮಧೇನು ಇದ್ದಂತೆ, 30 ವರ್ಷದಿಂದ  ನೋಡುತ್ತಿದ್ದೇನೆ. ಯಡಿಯೂರಪ್ಪನವರ ಜೀವ ವಿಜಯೇಂದ್ರನ ಕೈಯಲ್ಲಿ ಇದೆ. ಬಾಲ ನಾಗಮ್ಮನ ಕಥೆಯಂತಾಗಿದೆ ಯಡಿಯೂರಪ್ಪ ಬದುಕು ಎಂದು ವೇವಡಿ ಮಾಡಿದ್ದಾರೆ. 

ಇವತ್ತಿಗೂ ಯಡಿಯೂರಪ್ಪನವರ ಬಗ್ಗೆ ನನಗೆ ಕಳಕಳಿ ಇದೆ. ಆದರೆ ಇದೀಗ ಅವರು ನಾಲಿಗೆ ಕಳೆದುಕೊಂಡ ನಾಯಕ, ಮಾತು ತಪ್ಪಿದ ನಾಯಕರಾಗಿದ್ದಾರೆ ಎಂದು ಹೇಳಿದ್ದಾರೆ.