Mysuru : ' ಕಾಮನ್‌ ಪುಟಕ್ಕೆ ನಾನು ಕೆ.ಆರ್‌. ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ'

ವಿದ್ಯಾರ್ಥಿ ದಿನದಿಂದಲೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನನಗೆ ಈ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಕೆ.ಆರ್‌. ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ ಗುರುಪಾದಸ್ವಾಮಿ ಮನವಿ ಮಾಡಿದರು.

Gurupadaswamy Demands Congress Ticket From KR Constituency snr

 ಮೈಸೂರು (ಡಿ. 02)  : ವಿದ್ಯಾರ್ಥಿ ದಿನದಿಂದಲೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನನಗೆ ಈ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಕೆ.ಆರ್‌. ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ ಗುರುಪಾದಸ್ವಾಮಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಎಲ್ಲಿಯೂ ಲಿಂಗಾಯತ (Lingayat)  ಸಮುದಾಯಕ್ಕೆ ಕಾಂಗ್ರೆಸ್‌ (Congress)  ಟಿಕೆಟ್‌ ನೀಡಿಲ್ಲ. ಆದ್ದರಿಂದ ಈಗಲಾದರೂ ಕೆ.ಆರ್‌. ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಟಿಕೆಟ್‌ ನೀಡಬೇಕು. ಈವರೆಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ನಾನು ಈ ಬಾರಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದೇನೆ. ವೀರಶೈವ ಸಮುದಾಯದವರು ಕೇವಲ ಬಿಜೆಪಿಗೆ ಮಾತ್ರ ಬೆಂಬಲ ನೀಡುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಸರಿಯಲ್ಲ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈವರೆಗೂ ವೀರಶೈವರಿಗೆ ಟಿಕೆಟ್‌ ನೀಡಿಲ್ಲವಾದ್ದರಿಂದ ಈ ಬಾರಿ ಅವಕಾಶ ಕಲ್ಪಿಸಬೇಕು. ಈ ಸಂಬಂಧ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ. ಈಗಾಗಲೇ ಕೆಪಿಸಿಸಿಗೆ ಠೇವಣಿ ಹಣದೊಡನೆ ಅರ್ಜಿ ಸಲ್ಲಿಸಿದ್ದೇನೆ. ಆದರೂ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಜಿಲ್ಲೆಯಲ್ಲಿ ಮತಪಟ್ಟಿಗೆ ಕನ್ನ ಹಾಕಿರುವ ಕುರಿತು ಸಮೀಕ್ಷೆ ನಡೆಸಿ ವರದಿ ನೀಡಲು ಪಕ್ಷ ಸೂಚಿಸಿದ್ದು, ಸದ್ಯದಲ್ಲಿಯೇ ವರದಿ ನೀಡುವುದಾಗಿ ಅವರು ಹೇಳಿದರು.

ಕೃಷ್ಣರಾಜ ಕ್ಷೇತ್ರದಲ್ಲಿ ಶಾಸಕ ಎಸ್‌.ಎ. ರಾಮದಾಸ್‌ ಅವರನ್ನು ಸೋಲಿಸಲು ಬೇರೆ ಪಕ್ಷದವರು ಬೇಕಿಲ್ಲ. ಅವರದೇ ಪಕ್ಷದ ಸಂಸದ ಪ್ರತಾಪ ಸಿಂಹ ಸಾಕು ಎಂದು ಅವರು ಟೀಕಿಸಿದರು. ಕಾಂಗ್ರೆಸ್‌ ಮುಖಂಡರಾದ ಭಾಸ್ಕರ್‌, ಮಹಮ್ಮದ್‌ ಅಕ್ಬರ್‌ ಅಲೀಂ, ಸುರೇಶ್‌ಕುಮಾರ್‌, ಬಸವರಾಜು, ಚಂದ್ರು, ಪ್ರಭಾಕರ್‌ ಇದ್ದರು.

ರಾಜ್ಯಕ್ಕೆ ಮೂವರು ಸಿಎಂಗಳನ್ನು ನೀಡಿದ ಕ್ಷೇತ್ರ

 ರಾಮನಗರ  : ರೇಷ್ಮೆ ನಾಡು ರಾಮನಗರ, ಓರ್ವ ಪ್ರಧಾನಿ ಹಾಗೂ ನಾಲ್ವರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿದ ಹಿರಿಮೆ ಹೊಂದಿದೆ. ಸದ್ಯಕ್ಕೆ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಘಟಾನುಘಟಿ ನಾಯಕರ ತವರೂರು. ಜತೆಗೆ ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ಜಿಲ್ಲೆ. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿರುವುದು, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಜೆಡಿಎಸ್‌ನ ಪ್ರಚಾರದ ಸಂಪೂರ್ಣ ಹೊಣೆಗಾರಿಕೆ ಹೊತ್ತಿರುವುದು ಮತ್ತು ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್‌ ಅವರು ಹಳೆ ಮೈಸೂರು ಭಾಗದಲ್ಲಿ ಪಕ್ಷದ ಜವಾಬ್ದಾರಿ ಹೊತ್ತಿರುವ ಕಾರಣ ಜಿಲ್ಲೆಯ ರಾಜಕಾರಣ ರಾಜ್ಯದ ಗಮನ ಸೆಳೆದಿದೆ. 

ನಾಲ್ಕು ವಿಧಾ​ನ​ಸಭಾ ಕ್ಷೇತ್ರ​ಗ​ಳನ್ನು ಹೊಂದಿ​ರುವ ಜಿಲ್ಲೆ​ಯಲ್ಲಿ ಒಕ್ಕ​ಲಿಗರು, ದಲಿ​ತರು ಹಾಗೂ ಮುಸ್ಲಿಮರ ಮತಗಳೇ ನಿರ್ಣಾ​ಯ​ಕ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳ ಪೈಕಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಗೆದ್ದಿದ್ದರು. ಮಾಗಡಿಯಲ್ಲಿ ಜೆಡಿಎಸ್‌ನ ಎ.ಮಂಜುನಾಥ್‌, ಕನಕಪುರದಲ್ಲಿ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಗೆಲುವು ಸಾಧಿಸಿದ್ದರು. ಕುಮಾರಸ್ವಾಮಿಯವರು ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡಿದ್ದರಿಂದ ರಾಮನಗರದಲ್ಲಿ ಉಪಚುನಾವಣೆ ನಡೆದು, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಜಯಭೇರಿ ಬಾರಿಸಿದರು.

Ticket Fight: ಬಿಜೆಪಿ ಪಾರುಪಾತ್ಯಕ್ಕೆ ಬ್ರೇಕ್‌ ಹಾಕುತ್ತಾ ಕಾಂಗ್ರೆಸ್‌?

1.ರಾಮನಗರ: ನಿಖಿಲ್‌ ಹೆಸರೂ ಚಾಲ್ತಿಯಲ್ಲಿ
ರಾಜ್ಯಕ್ಕೆ ಮೂವರು ಸಿಎಂಗಳನ್ನು ನೀಡಿದ ಕ್ಷೇತ್ರವಿದು. ಮತ್ತೊಮ್ಮೆ ಈ ಕ್ಷೇತ್ರದಿಂದ ಸ್ಪರ್ಧಿ​ಸಲು ಪಟ್ಟು ಹಿಡಿ​ದಿ​ರುವ ಹಾಲಿ ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಪರ​ವಾಗಿ ಸ್ವ ಪಕ್ಷ​ದ​ವ​ರಲ್ಲಿಯೇ ಒಲ​ವಿಲ್ಲ. ಕುಮಾ​ರ​ಸ್ವಾಮಿಗೆ ಕುಟುಂಬ​ದ​ವ​ರನ್ನು ಹೊರತುಪಡಿಸಿ ಬೇರೆ​ಯ​ವ​ರಿಗೆ ಮಣೆ ಹಾಕಲು ಇಷ್ಟ​ವಿಲ್ಲ. ಹಾಗಾಗಿ, ಜೆಡಿ​ಎಸ್‌ ಯುವ ಘಟಕದ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿಯ ಹೆಸರೂ ಪ್ರಮುಖವಾಗಿ ಚಾಲ್ತಿ​ಯ​ಲ್ಲಿ​ದೆ. ಕೊನೆ ಘಳಿ​ಗೆ​ಯಲ್ಲಿ ಕುಮಾ​ರ​ಸ್ವಾಮಿಯೇ ಅಭ್ಯ​ರ್ಥಿ​ಯಾದರೆ ಅಚ್ಚರಿ ಇಲ್ಲ. ಕುಮಾರಸ್ವಾಮಿಗೆ ಸವಾಲು ಒಡ್ಡಲು ಕಾಂಗ್ರೆಸ್‌ನಿಂದ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಸಜ್ಜಾ​ಗಿ​ದ್ದಾರೆ. ಸಂಸದ ಡಿ.ಕೆ.ಸುರೇಶ್‌ ಹೆಸರೂ ಚಾಲ್ತಿಗೆ ಬರುತ್ತಿದೆ. ಬಿಜೆಪಿಯಿಂದ ರಾಜ್ಯರೇಷ್ಮೆ ಉದ್ಯ​ಮ​ಗಳ ನಿಗಮದ ಅಧ್ಯಕ್ಷ ಗೌತಮ್‌ ಮರಿ​ಲಿಂಗೇ​ಗೌಡ, ಗ್ರೇಟರ್‌ ಬೆಂಗ​ಳೂರು-ಬಿಡದಿ ಸ್ಮಾರ್ಚ್‌ ಸಿಟಿ ಯೋಜನಾ ಪ್ರಾಧಿ​ಕಾರದ ಅಧ್ಯಕ್ಷ ವರ​ದ​ರಾ​ಜ​ಗೌಡ ಹಾಗೂ ರಾಮ​ನ​ಗರ ನಗ​ರಾ​ಭಿ​ವೃದ್ಧಿ ಪ್ರಾಧಿ​ಕಾರದ ನಿರ್ದೇ​ಶಕ ಡಿ.ನ​ರೇಂದ್ರ ಹೆಸರುಗಳು ಚಾಲ್ತಿಯಲ್ಲಿವೆ.

2.ಚನ್ನಪಟ್ಟಣ: ಎಚ್‌ಡಿಕೆ ವಿರುದ್ಧ ಮತ್ತೆ ಯೋಗೇಶ್ವರ್‌ ಕಣಕ್ಕೆ
ಚನ್ನ​ಪ​ಟ್ಟಣ, ದೇವೇ​ಗೌ​ಡರ ಕುಟುಂಬ​ದೊಂದಿಗೆ ಅವಿ​ನಾ​ಭಾವ ಸಂಬಂಧ ಹೊಂದಿ​ರುವ ಕ್ಷೇತ್ರ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಪೈಪೋಟಿ ಇದ್ದ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಕೂಡ ಎರಡೂ ಪಕ್ಷಗಳಿಗೆ ಟಾಂಗ್‌ ಕೊಡಲು ಹೊರಟಿದೆ. ಮುಖ್ಯ​ಮಂತ್ರಿ ಹುದ್ದೆಯ ಆಕಾಂಕ್ಷಿ​ಯಾ​ಗಿ​ರುವ ಕುಮಾ​ರ​ಸ್ವಾಮಿ, ಈ ಬಾರಿ ಚನ್ನ​ಪ​ಟ್ಟಣ ಕ್ಷೇತ್ರ​ದಿಂದಲೇ ಅದೃಷ್ಟಪರೀಕ್ಷೆಗೆ ಮುಂದಾಗಲು ನಿರ್ಧ​ರಿ​ಸಿ​ದ್ದಾ​ರೆ. ಇನ್ನು, ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಮೂಲಕ ಹಳೆ ಮೈಸೂರು ಪ್ರಾಂತ್ಯದಲ್ಲಿ ಪ್ರಾಬಲ್ಯ ಮೆರೆ​ಯಲು ಬಿಜೆಪಿ ಕಾತರವಾಗಿದೆ. ಈ ನಡುವೆ, ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಡಿಕೆ ಸಹೋ​ದ​ರರು ಮುಂದಾಗಿದ್ದಾರೆ. ಡಿಕೆ ಸಹೋ​ದ​ರರ ಸೋದರ ಸಂಬಂಧಿ ಶರತ್‌ ಚಂದ್ರ, ಪ್ರಸನ್ನ ಪಿ.ಗೌಡ ಸೇರಿ​ದಂತೆ 8 ಮಂದಿ ಕೆಪಿ​ಸಿ​ಸಿಗೆ ಅರ್ಜಿ ಸಲ್ಲಿ​ಸಿ​ದ್ದಾ​ರೆ.

3.ಮಾಗಡಿ: ಕೈ ಟಿಕೆಟ್‌ ಮೇಲೆ ರೇವಣ್ಣ-ಬಾಲಕೃಷ್ಣ ಕಣ್ಣು

Latest Videos
Follow Us:
Download App:
  • android
  • ios