ರಾಮನಗರ [ನ.30]: ಬಿಡದಿ ಪೀಠದ ನಿತ್ಯಾನಂದ ಸ್ವಾಮೀಜಿ ಬಂಧನಕ್ಕೆ ಗುಜರಾತ್ ಪೊಲೀಸರು ಸ್ಕೆಚ್ ಹಾಕಿದ್ದಾರೆ. ಗುಜರಾತ್ ಪೊಲೀಸರ ಯತ್ನಕ್ಕೆ ಕರ್ನಾಟಕ ಪೊಲೀಸರು ಸಾಥ್ ನೀಡಿದ್ದಾರೆ. 
 
ಕರ್ನಾಟಕಕ್ಕೆ‌ ಆಗಮಿಸಿರುವ ಗುಜರಾತ್ ಪೊಲೀಸರು ಮಾಹಿತಿ ಕಲೆ ಮಾಹಿತಿ ಪಡೆದುಕೊಂಡು ಕರ್ನಾಟಕ ಪೊಲೀಸರಿಂದ ಸಹಕಾರ ಕೋರಿದ್ದಾರೆ.

ನಿತ್ಯಾನಂದ ಆಶ್ರಮದಲ್ಲಿ ಯುವತಿಯರನ್ನು ಹಿಡಿದಿಟ್ಟುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ಕೇಳಿದ್ದು, ಈ ಬಗ್ಗೆ ರಾಮನಗರ ಪೊಲೀಸರನ್ನ ಸಂಪರ್ಕಿಸಿದ್ದಾರೆ. ನಿತ್ಯಾನಂದ ಸ್ವಾಮಿ ವಿರುದ್ಧ ಇರುವ ಎಲ್ಲಾ ರೀತಿಯ ಪ್ರಕರಣಗಳ ಬಗ್ಗೆಯೂ ಕೂಡ ಮಾಹಿತಿ ಸಂಗ್ರಹಿಸುತ್ತಿದ್ದಾರೆ. 

ಬಿಡದಿ ಠಾಣೆಯಲ್ಲಿ ನಿತ್ಯಾನಂದ ಸ್ವಾಮೀಜಿ ವಿರುದ್ದ ಹಲವು ರೀತಿಯ ಪ್ರಕರಣಗಳು ದಾಖಲಾಗಿದ್ದು, ನಾಲ್ವರು ಅಧಿಕಾರಿಗಳ ತಂಡ ರಾಮನಗರ ಎಸ್ಪಿ ಸಂಪರ್ಕಿಸಿ ಮಾತುಕತೆ ನಡೆಸಿದೆ.

ನಾನು ಶಿವ, ನೀನು ಪಾರ್ವತಿ ಎಂದು ಅತ್ಯಾಚಾರ: ನಿತ್ಯಾನಂದ ವಿರುದ್ಧ ಸಿಡಿದೆದ್ದ 'ಶಿಷ್ಯೆ'!...

ಕಳೆದ ಒಂದು ವರ್ಷದ ಹಿಂದೆಯೇ ಭಾರತ ಬಿಟ್ಟು ನಿತ್ಯಾನಂದ ಪರಾರಿಯಾಗಿದ್ದು, ಪಾಸ್ ಪೋರ್ಟ್ ಅವಧಿ ಮುಕ್ತಾಯವಾದರೂ ದೇಶಬಿಟ್ಟು ಪರಾರಿಯಾಗಿದ್ದು,  ನೇಪಾಳಕ್ಕೆ ತೆರಳಿ ನಕಲಿ ಪಾಸ್ಪೋರ್ಟ್ ಮೂಲಕ ಇಕ್ವೇಡಾರ್ ದೇಶಕ್ಕೆ ಪರಾರಿ ಆಗಿರುವ ಶಂಕೆ ವ್ಯಕ್ತವಾಗಿದೆ. 
ನಿತ್ಯಾನಂದ ಆಶ್ರಮದ ‘ಹಿಂಸೆ’ ಬಿಚ್ಚಿಟ್ಟ ಬಾಲಕಿ!...  
ಜನಾರ್ದನ್ ಶರ್ಮಾ ಎನ್ನುವವರು ನೀಡಿದ ದೂರಿನ ಆಧಾರದಲ್ಲಿ ಗುಜರಾತ್ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದು, ಅವರ  ಇಬ್ಬರು ಹೆಣ್ಣುಮಕ್ಕಳು ನಿತ್ಯಾನಂದನ ವಶದಲ್ಲಿರುವ ಬಗ್ಗೆ ಆರೋಪ ಮಾಡಲಾಗಿದೆ. 

ಈ ನಿಟ್ಟಿನಲ್ಲಿ ಇದೀಗ ಕರ್ನಾಟಕ ಪೊಲೀಸರೊಂದಿಗೆ ಸೇರಿ ಗುಜರಾತ್ ಪೊಲೀಸರು ನಿತ್ಯಾನಂದನ ಬಂಧನಕ್ಕೆ ಸ್ಕೆಚ್ ಹಾಕಿದ್ದಾರೆ.