ಬೀದರ್- ಯಶವಂತಪುರ ರೈಲು ಸಂಚಾರಕ್ಕೆ ಹಸಿರು ನಿಶಾನೆ
ಸದ್ಯ ವಾರಕೊಮ್ಮೆ ಚಲಿಸುವ ಈ ರೈಲು ಮುಂದಿನ ಕೆಲವೆ ಕೆಲವು ದಿನಗಳಲ್ಲಿ ವಾರಪೂರ್ತಿ ಚಲಿಸುತ್ತದೆ, ಈ ಕೆಲಸವು ಪ್ರಕ್ರಿಯೆಯಲ್ಲಿದೆ ಜೊತೆಗೆ ತಮ್ಮೇಲ್ಲರ ಆಸೆಯಂತೆ ಹೆಚ್ಚಿನ ಬದಲಾವಣೆಗಳು ಈ ರೈಲಿನಲ್ಲಿ ಆಗಲಿವೆ: ಕೇಂದ್ರ ಸಚಿವ ಭಗವಂತ ಖೂಬಾ
ಕಲಬುರಗಿ(ಅ.18): ಕಲಬುರಗಿ ಹಾಗೂ ಬೀದರ್ ಜನತೆಯ ಬೇಡಿಕೆಯಂತೆ ಬೀದರ್-ಯಶವಂತಪುರ ವಾಯಾ ಕಲಬುರಗಿ, ಹುಮನಾಬಾದ ಮಾರ್ಗವಾಗಿ ರೈಲು ಮಂಜೂರಾತಿಯಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವರವರಿಗೆ ಧನ್ಯವಾದಗಳು ತಿಳಿಸಿದ್ದಾರೆ.
ಸದ್ಯ ವಾರಕೊಮ್ಮೆ ಚಲಿಸುವ ಈ ರೈಲು ಮುಂದಿನ ಕೆಲವೆ ಕೆಲವು ದಿನಗಳಲ್ಲಿ ವಾರಪೂರ್ತಿ ಚಲಿಸುತ್ತದೆ, ಈ ಕೆಲಸವು ಪ್ರಕ್ರಿಯೆಯಲ್ಲಿದೆ ಜೊತೆಗೆ ತಮ್ಮೇಲ್ಲರ ಆಸೆಯಂತೆ ಹೆಚ್ಚಿನ ಬದಲಾವಣೆಗಳು ಈ ರೈಲಿನಲ್ಲಿ ಆಗಲಿವೆ ಎಂದಿದ್ದಾರೆ.
ಕಲಬುರಗಿ- ಮಂಗಳೂರು ವಿಮಾನ ಸಂಚಾರ ಬಗ್ಗೆ ಚರ್ಚಿಸುವೆ: ಶೋಭಾ ಕರಂದ್ಲಾಜೆ
ಸದ್ಯ ಈ ಹೊಸ ರೈಲು ಪ್ರತಿ ಶನಿವಾರ ರಾತ್ರಿ 11.15ಕ್ಕೆ ಯಶವಂತಪೂರನಿಂದ ಹೊರಟು ಯಲಹಂಕ, ಗೌರಿಬಿದನೂರ, ಗುಂತ್ಕಲ್, ಮಂತ್ರಾಲಯಂ ರೊಡ್, ರಾಯಚೂರ, ಯಾದಗಿರಿ, ಕಲಬುರಗಿ, ಕಮಲಾಪೂರ, ಹುಮನಾಬಾದ ಮಾರ್ಗವಾಗಿ ಮರುದಿನ ಮಧ್ಯಾಹ್ನ 01.30ಕ್ಕೆ ಬೀದರ್ ತಲುಪಲಿದೆ. ಅದೇ ದಿನ ಮಧ್ಯಾಹ್ನ 2.30ಕ್ಕೆ ಬೀದರ್‌ನಿಂದ ಹೊರಟು ಬಂದ ಮಾರ್ಗವಾಗಿಯೇ ಸೋಮವಾರ ನಸುಕಿನ ಜಾವ 4ಕ್ಕೆ ಯಶವಂತಪೂರ ತಲುಪಲಿದೆ. ರೈಲ್ವೆ ಇಲಾಖೆಯ ಈ ನಿರ್ಧಾರಕ್ಕೆ ಸಂಸದ ಖೂಬಾ ಅವರು ಸಂತಸ ವ್ಯಕ್ತಿಪಡಿಸಿದ್ದಾರೆ.