Asianet Suvarna News Asianet Suvarna News

ಗ್ರಾಮ ಪಂಚಾಯತ್ ಸದಸ್ಯೆ ನಾಪತ್ತೆಗೆ ಟ್ವಿಸ್ಟ್ : ಒಂದೇ ಜಾಗದಲ್ಲಿ ಇಬ್ಬರ ಮೃತದೇಹ ಪತ್ತೆ

  • ಮಡಿಕೇರಿಯ ಚೆಂಬು ಗ್ರಾಮ ಪಂಚಾಯತ್ ಸದಸ್ಯೆ ನಾಪತ್ತೆ ಪ್ರಕರಣಕ್ಕೆ ಇದೀಗ ಬೇರೆ ಟ್ವಿಸ್ಟ್ ಸಿಕ್ಕಿದೆ. 
  • ಒಂದೇ ಜಾಗದಲ್ಲಿ ಪತ್ತೆಯಾಗಿವೆ ಎರಡು ಮೃತದೇಹ 
Grama Panchayat woman leader commits suicide in kodagu   snr
Author
Bengaluru, First Published Sep 16, 2021, 12:47 PM IST
  • Facebook
  • Twitter
  • Whatsapp

ಕೊಡಗು (ಸೆ.16): ಮಡಿಕೇರಿಯ ಚೆಂಬು ಗ್ರಾಮ ಪಂಚಾಯತ್ ಸದಸ್ಯೆ ನಾಪತ್ತೆ ಪ್ರಕರಣಕ್ಕೆ ಇದೀಗ ಬೇರೆ ಟ್ವಿಸ್ಟ್ ಸಿಕ್ಕಿದೆ. 

ಗ್ರಾಮ ಪಂಚಾಯತ್ ಸದಸ್ಯೆ ಕಮಲಾ (35) ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿಂದು ಪತ್ತೆಯಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ದಬ್ಬಡ್ಕದಲ್ಲಿ ಪತ್ತೆಯಾಗಿದೆ. 

ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಆತ್ಮಹತ್ಯೆ

ಕಮಲಾ(35)ಹಾಗೂ ಮುತ್ತು(50) ಎಂಬಾತ ಒಂದೇ ಮರದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಬುಧವಾರ ಸಂಜೆಯಿಂದ ಇಬ್ಬರೂ ನಾಪತ್ತೆಯಾಗಿದ್ದು ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ದೊರೆತಿದೆ. 
  
ಕಮಲಾ ಬುಧವಾರ ಸಂಜೆಯಿಂದ ಮನೆಯಲ್ಲಿ ಕಾಣಿಸದ್ದರಿಂದ ಎಲ್ಲೆಡೆ ಹುಡುಕಾಟ ನಡೆಸಲಾಗಿತ್ತು. ಆದರೆ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

Follow Us:
Download App:
  • android
  • ios