Tumakur : ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಜೆಡಿಎಸ್‌ಗೆ ಸೇರ್ಪಡೆ

ಜಾತ್ಯಾತೀತ ಜನತಾದಳ ಪಕ್ಷದ ಭದ್ರಕೋಟೆ ಕೊರಟಗೆರೆ ವಿಧಾನಸಭಾ ಕ್ಷೇತ್ರ. ನಮ್ಮ ಜೆಡಿಎಸ್‌ ಪಕ್ಷದಲ್ಲಿ ಸಾವಿರಾರು ಜನ ನಿಷ್ಠಾವಂತ ಮುಖಂಡರು ಮತ್ತು ಕಾರ್ಯಕರ್ತರ ಪಡೆ ಇದೆ. ತೋವಿನಕೆರೆ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಇನ್ನಷ್ಟುಶಕ್ತಿ ಬರಲಿದೆ ಎಂದು ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್‌.ಸುಧಾಕರಲಾಲ್‌ ತಿಳಿಸಿದರು

Grama Panchayat President And Vice President Joins JDS snr

 ಕೊರಟಗೆರೆ (a.30):  ಜಾತ್ಯಾತೀತ ಜನತಾದಳ ಪಕ್ಷದ ಭದ್ರಕೋಟೆ ಕೊರಟಗೆರೆ ವಿಧಾನಸಭಾ ಕ್ಷೇತ್ರ. ನಮ್ಮ ಜೆಡಿಎಸ್‌ ಪಕ್ಷದಲ್ಲಿ ಸಾವಿರಾರು ಜನ ನಿಷ್ಠಾವಂತ ಮುಖಂಡರು ಮತ್ತು ಕಾರ್ಯಕರ್ತರ ಪಡೆ ಇದೆ. ತೋವಿನಕೆರೆ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬರಲಿದೆ ಎಂದು ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್‌.ಸುಧಾಕರ ಲಾಲ್‌ ತಿಳಿಸಿದರು.

ಕೊರಟಗೆರೆ ಪಟ್ಟಣದ ಬೈಪಾಸ್‌  ರಸ್ತೆಯ (Road)  ನವೀನ್‌ ಕಂಪರ್ಚ್‌ ಸಭಾಂಗಣದಲ್ಲಿ ಜಾತ್ಯಾತೀತ ಜನತಾದಳ (JDS) ಪಕ್ಷದಿಂದ ಗುರುವಾರ ಏರ್ಪಡಿಸಲಾಗಿದ್ದ ತೋವಿನಕೆರೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ವಿಎಸ್‌ಎಸ್‌ಎನ್‌ ಅಧ್ಯಕ್ಷರ ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕರುನಾಡಿನ ಮಾಜಿ ಸಿಎಂ ಕುಮಾರಣ್ಣ ನೇತೃತ್ವದ ಜೆಡಿಎಸ್‌ ಪಕ್ಷ ಈಗಾಗಲೇ ಸದೃಢವಾಗಿದೆ. ಕರ್ನಾಟಕದಲ್ಲಿ ಮತ್ತೇ ಕುಮಾರಣ್ಣ ಮುಖ್ಯಮಂತ್ರಿ ಮಾಡೋದೇ ಜನತೆಯ ಬಹುದೊಡ್ಡ ಕನಸಾಗಿದೆ. ಕೊರಟಗೆರೆ ಕ್ಷೇತ್ರದ ಸಾವಿರಾರು ಜನ ಕಾರ್ಯಕರ್ತರು ಕಾಂಗ್ರೇಸ್‌ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್‌ ಪಕ್ಷಕ್ಕೆ ಆಗಮಿಸುತ್ತಿದ್ದಾರೆ. 2023ರಲ್ಲಿ ಕೊರಟಗೆರೆ ಕ್ಷೇತ್ರ ಜೆಡಿಎಸ್‌ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬಿತು ಆಗಲಿದೆ ಎಂದು ಹೇಳಿದರು.

ಕೊರಟಗೆರೆ ಜೆಡಿಎಸ್‌ ಪಕ್ಷದ ಕಾರ್ಯಧ್ಯಕ್ಷ ನರಸಿಂಹರಾಜು ಮಾತನಾಡಿ ಸಾವಿರಾರು ಜನ ಯುವ ಕಾರ್ಯಕರ್ತರು ಜೆಡಿಎಸ್‌ ಪಕ್ಷಕ್ಕೆ ಈಗಾಗಲೇ ಸೇರ್ಪಡೆ ಆಗಿದ್ದಾರೆ. 2023ಕ್ಕೆ ಕೊರಟಗೆರೆ ಕ್ಷೇತ್ರದಿಂದ ಸ್ನೇಹಜೀವಿ ಸುಧಾಕರಲಾಲ್‌ ಶಾಸಕರಾಗಿ ಆಯ್ಕೆ ಆಗುವುದು ಖಚಿತ. ಕೊರಟಗೆರೆ ಕ್ಷೇತ್ರದ ಪ್ರತಿ ಹಳ್ಳಿಯಲ್ಲಿ ಸುಧಾಕರಲಾಲ್‌ ಮಾಡಿದ ಅಭಿವೃದ್ದಿ ಕೆಲಸಕ್ಕೆ ಜನತೆಯಿಂದ ಈಗಾಗಲೇ ಆರ್ಶಿವಾದ ದೊರೆತಿದೆ ಎಂದು ತಿಳಿಸಿದರು.

ತೋವಿನಕೆರೆ ಗ್ರಾಪಂ ಅಧ್ಯಕ್ಷ ನಾಗರಾಜು ಮಾತನಾಡಿ, ನಾನೋರ್ವ ನಿಷ್ಠಾವಂತ ಜೆಡಿಎಸ್‌ ಕಾರ್ಯಕರ್ತ. 20ವರ್ಷದಿಂದ ನಾನು ಸತತವಾಗಿ ಜೆಡಿಎಸ್‌ ಪಕ್ಷಕ್ಕಾಗಿ ದುಡಿದಿದ್ದೇನೆ. ಕಾಂಗ್ರೇಸ್‌ ಪಕ್ಷದಲ್ಲಿ ಕಳೆದ 20ತಿಂಗಳಿಂದ ನನಗೇ ಉಸಿರುಗಟ್ಟುವ ವಾತವರಣ ಇತ್ತು. ಈಗ ಸ್ವಇಚ್ಚೆಯಿಂದ ಜೆಡಿಎಸ್‌ ಪಕ್ಷಕ್ಕೆ ಮರಳಿ ಗೂಡು ಸೇರಿದ್ದೇನೆ. ಕೊರಟಗೆರೆ ಕ್ಷೇತ್ರದಿಂದ 2023ಕ್ಕೆ ಸುಧಾಕರಲಾಲ್‌ ಶಾಸಕರಾಗಿ ಆಯ್ಕೆ ಆಗೋದು ಖಚಿತವಾಗಿದೆ ಎಂದು ಹೇಳಿದರು.

ತೋವಿನಕೆರೆ ಗ್ರಾಪಂ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಹನುಮಂತರಾಯಪ್ಪ, ವಿಎಸ್‌ಎಸ್‌ಎನ್‌ ಅಧ್ಯಕ್ಷ ನಾರಾಯಣ್‌, ಮುಖಂಡರಾದ ಕುಮಾರಣ್ಣ, ಮಂಜುನಾಥ, ಪ್ರಸನ್ನಕುಮಾರ್‌, ರಾಮಾಂಜನೇಯ ಸೇರಿದಂತೆ ಹತ್ತಾರು ಕಾಂಗ್ರೇಸ್‌ ಕಾರ್ಯಕರ್ತರು ಮತ್ತು ಮುಖಂಡರು ಕಾಂಗ್ರೇಸ್‌ ಪಕ್ಷವನ್ನು ತೊರೆದು ಜೆಡಿಎಸ್‌ ಪಕ್ಷಕ್ಕೆ ಕೊರಟಗೆರೆಯ ಮಾಜಿ ಶಾಸಕ ಪಿ.ಆರ್‌.ಸುಧಾಕರಲಾಲ್‌ ಸಮ್ಮುಖದಲ್ಲಿ ಸೇರ್ಪಡೆಯಾದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಕಾರ್ಯಧ್ಯಕ್ಷ ನರಸಿಂಹರಾಜು, ವಕ್ತಾರ ಲಕ್ಷಿತ್ರ್ಮೕಶ್‌, ಕೋಳಾಲ ಜಿಪಂ ಮಾಜಿ ಸದಸ್ಯ ಶಿವರಾಮಯ್ಯ, ಮಾಜಿ ತಾಪಂ ಸದಸ್ಯ, ಬೋರಣ್ಣ, ಎಲ್‌.ವಿ.ಪ್ರಕಾಶ್‌, ಪಪಂ ಸದಸ್ಯ ಲಕ್ಷಿತ್ರ್ಮೕನಾರಾಯಣ್‌, ಮುಖಂಡರಾದ ಸಿದ್ದಮಲ್ಲಪ್ಪ, ರಮೇಶ್‌, ಕಾಮರಾಜು, ವೀರಕ್ಯಾತರಾಯ, ಕಾಕಿಮಲ್ಲಯ್ಯ, ಸಾಕರಾಜು ಸೇರಿದಂತೆ ಇತರರು ಇದ್ದರು.

ಮರಳಿಗೂಡಿಗೆ ಹಳ್ಳಿಹಕ್ಕಿ  : 

ಬೆಂಗಳೂರು(ಅ.26): ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿ ಬಳಿಕ ಅಲ್ಲಿಂದಲೂ ಕಾಲ್ಕಿತ್ತು ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ಎಂಎಲ್‌ಸಿ ಎಚ್‌. ವಿಶ್ವನಾಥ್‌ ಮತ್ತೆ ಕಾಂಗ್ರೆಸ್‌ ಸೇರಲಿದ್ದಾರೆ ಅಂತ ಹೇಳಲಾಗುತ್ತಿದೆ. ಸದ್ಯ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾಧಾನದಿಂದ ವಿಶ್ವನಾಥ್‌ ಪಕ್ಷದಿಂದ ಹೊರಹೋಗಲು ಸಿದ್ದತೆ ನಡೆಸಿದ್ದಾರೆ. 

ಇದೀಗ ಮತ್ತೆ ಕಾಂಗ್ರೆಸ್ ಕದ ತಟ್ಟಲು ವಿಶ್ವನಾಥ್ ಮುಂದಾಗಿದ್ದಾರೆ. ಈಗಾಗಲೇ ಕಾಂಗ್ರೆಸ್‌ ಹೈಕಮಾಂಡ್ ಮಟ್ಟದ ನಾಯಕರ ಜೊತೆಗೂ ಮಾತುಕತೆ ಆಗಿದೆ. ಆದರೆ ಸಿದ್ದರಾಮಯ್ಯ ಒಬ್ಬರು ಮಾತ್ರ ಇನ್ನೂ ನೀಡಿಲ್ಲ ಗ್ರೀನ್ ಸಿಗ್ನಲ್ ಅಂತ ಹೇಳಲಾಗುತ್ತಿದೆ. 

ದಲಿತರ ಮನೆಗೆ ಸಿಎಂ, ಸಚಿವರ ಭೇಟಿಗೆ ಎಚ್ ವಿಶ್ವನಾಥ್ ಕಿಡಿ

ಈ ಹಿಂದೆ ವಿಶ್ವನಾಥ್ ಕಾಂಗ್ರೆಸ್‌ನಿಂದ ಜೆಡಿಎಸ್, ನಂತರ ಬಿಜೆಪಿ ಸೇರಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಮೇಲಿನ ಅಸಮಾಧಾದಿಂದ ಕಾಂಗ್ರೆಸ್ ತೊರೆದು, ಜೆಡಿಎಸ್ ಸೇರಿದ್ದರು. ಜೆಡಿಎಸ್‌ನಲ್ಲಿ ವಿಶ್ವನಾಥ್‌ಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಗಿತ್ತು. ನಂತರ ಆಪರೇಷನ್ ಕಮಲಕ್ಕೆ ತುತ್ತಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು.

ಬಿಜೆಪಿ ಸೇರಿದ ನಂತರ ಮೈಸೂರು ಜಿಲ್ಲೆಯ ಹುಣಸೂರು ಉಪಚುನಾವಣೆಯಲ್ಲಿ ಸೋತಿದ್ದರು. ಪರಾಭವ ಹೊಂದುವ ಮೂಲಕ ಮಂತ್ರಿಯಾಗಬೇಕು ಎಂಬ ಆಸೆ ಕೈಗೂಡಲಿಲ್ಲ. ಯಡಿಯೂರಪ್ಪ ಕೊಟ್ಟ ಮಾತಿನ ಪ್ರಕಾರ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಿದ್ದರು. ಆದರೆ‌ ಕೋರ್ಟ್ ತೀರ್ಪಿನ ಪ್ರಕಾರ ಸಚಿವ ಸ್ಥಾನ ನೀಡುವಂತಿರಲಿಲ್ಲ. ಹಾಗಾಗಿ ವಿಶ್ವನಾಥ್ ಪದೇ ಪದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದರು. ಇನ್ನೇನು ಮುಂದಿನ ವರ್ಷವೇ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಎಚ್‌. ವಿಶ್ವನಾತ್‌ ಅವರು ಇದೀಗ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲಿದ್ದಾರೆ ಅಂತ ಹೇಳಲಾಗುತ್ತಿದೆ.

Latest Videos
Follow Us:
Download App:
  • android
  • ios