ಹುಬ್ಬಳ್ಳಿ, (ಡಿ.15): ತಾಲೂಕಿನ ನೂಲ್ವಿ ಗ್ರಾಮ ಪಂಚಾಯಿತಿಯ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್.ಹೆಚ್.ರಾಠೋಡ್ ನಿಧನರಾಗಿದ್ದಾರೆ.

ಆನಂದನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್.ಹೆಚ್.ರಾಠೋಡ್ ರನ್ನು ನೂಲ್ವಿ ಗ್ರಾಮ ಪಂಚಾಯಿತಿ ಸಹಾಯಕ ಚುನಾವಣೆ ಅಧಕಾರಿಯಾಗಿ ನೇಮಿಸಲಾಗಿತ್ತು. 

ಅದರಂತೆ ಇಂದು (ಮಂಗಳವಾರ) ಬೆಳಿಗ್ಗೆ‌ 10 ಗಂಟೆಗೆ ಚುನಾವಣೆ ಕರ್ತವ್ಯಕ್ಕೆ ತೆರಳುವ ವೇಳೆ ಉಣಕಲ್ ಬಸ್ ನಿಲ್ದಾಣದಲ್ಲಿ ಮೂರ್ಛೆ ಹೋಗಿ ಕುಸಿದು ಬಿದ್ದಿದ್ದರು. ನಂತರ ಕಿಮ್ಸ್ ಆಸ್ಪತ್ರೆ ಸಾಗಿಸುವ ದಾರಿ ಮಧ್ಯದಲ್ಲಿಯೇ ಕೊನೆಯುಸೆರೆಳೆದಿದ್ದಾರೆ.

ರೈತ ಹೋರಾಟದಲ್ಲಿ 'ಕೈ' ಹಗರಣ ಘಾಟು, 7 ಉದ್ಯಮಿಗಳ ಜೇಬು ತುಂಬಿಸಿದ ನೋಟು; ಡಿ.15ರ ಟಾಪ್ 10 ಸುದ್ದಿ! 

ನೂಲ್ವಿ ಗ್ರಾ.ಪಂ.ಚುನಾವಣೆ ಅಧಿಕಾರಿ ಉಪನ್ಯಾಸಕ ಅಶೋಕ ಎಸ್.‌ಗಡಾದ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ.

ಗ್ರಾಮೀಣ ತಹಶೀಲದಾರ ಪ್ರಕಾಶ್ ನಾಶಿ ಹಾಗೂ ನಗರ ತಹಶೀಲದಾರ ಶಶಿಧರ ಮಾಡ್ಯಳ ಅವರು ಕಿಮ್ಸ್ ಆಸ್ಪತ್ರೆಗೆ ತೆರಳಿ‌ ಮೃತರ ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು. ಚುನಾವಣೆ ತುರ್ತು ಕಾರ್ಯದ ನಿಮಿತ್ತ ದೈಹಿಕ ಶಿಕ್ಷಕ ರಾಜೇಸಾಬ ನದಾಫ ಅವರನ್ನು ಸಹಾಯಕ ಚುನಾವಣಾ ಅಧಿಕಾರಿಯಾಗಿ ನೇಮಿಸಲಾಗಿದೆ.