Asianet Suvarna News Asianet Suvarna News

ಸರ್ಕಾರ ಟೇಕ್‌ ಆಫ್‌ ಅಲ್ಲ, ಸತ್ತೇ ಹೋಗಿದೆ, ಸಿಎಂ ಸುಳ್‌ ಹೇಳ್ಕೊಂಡ್ ತಿರುಗ್ತಾರೆ: ಸಿದ್ದು

ಈ ಸರ್ಕಾರ ಟೇಕ್‌ ಆಫ್‌ ಹಂತ ತಲುಪುವುದು ಬಿಡಿ, ಸತ್ತೇ ಹೋಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

 

Govt has dead says siddaramaiah in mysore
Author
Bangalore, First Published Jan 21, 2020, 2:58 PM IST
  • Facebook
  • Twitter
  • Whatsapp

ಮೈಸೂರು(ಜ.21): ಈ ಸರ್ಕಾರ ಟೇಕ್‌ ಆಫ್‌ ಹಂತ ತಲುಪುವುದು ಬಿಡಿ, ಸತ್ತೇ ಹೋಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

26ನೇ ತಾರೀಕಿಗೆ ಬಿಜೆಪಿ ಅಧಿಕಾರಕ್ಕೆ ಬಂದು 6 ತಿಂಗಳಾಗುತ್ತದೆ. ಆದರೆ ರಾಜ್ಯದಲ್ಲಿ ಸರ್ಕಾರವೇ ಇಲ್ಲವೇನೋ ಎಂಬಂಥ ಪರಿಸ್ಥಿತಿ ಇದೆ. ಮುಖ್ಯಮಂತ್ರಿ ಅವರು ಜನರಿಗೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಇನ್ನೂ ಪೂರ್ಣ ಪ್ರಮಾಣದ ಮಂತ್ರಿಮಂಡಲವೇ ರಚನೆಯಾಗಿಲ್ಲ. ಹೀಗಾದರೆ ಅಭಿವೃದ್ಧಿ ಕೆಲಸ ಆಗುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ತುಮಕೂರು: ಗದ್ದುಗೆಯಲ್ಲಿ ಶ್ರೀಗಳ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ

ಮಂತ್ರಿಮಂಡಲ ರಚನೆಗೆ ಸಂಬಂಧಿಸಿದಂತೆ ಮಾತುಕತೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಭೇಟಿ ಮಾಡಲು ಅಮಿತ್‌ ಷಾ ಅವಕಾಶವನ್ನೇ ನೀಡುತ್ತಿಲ್ಲ. ಅಂದು ಯಡಿಯೂರಪ್ಪ ನಾನು ಪ್ರಮಾಣವಚನ ಸ್ವೀಕರಿಸಿದ ದಿನವೇ ನಿಮ್ಮನ್ನು ಮಂತ್ರಿ ಮಾಡ್ತೀನಿ ಎಂದು ಅತೃಪ್ತರಿಗೆ ಹೇಳಿದ್ದರು. ಅಧಿಕಾರದಾಸೆಗೆ ಪಕ್ಷ ಬಿಟ್ಟು ಈಗ ಅತಂತ್ರರಾಗಿರುವವರನ್ನು ನೋಡಿದರೆ ಅಯ್ಯೋ ಎನಿಸುತ್ತೆ. ಅವರ ಸ್ಥಿತಿ ಅಂತರಪಿಶಾಚಿಯಂತಾಗಿದೆ. ರಾಜ್ಯ ಸರ್ಕಾರದ ಹಲವು ಇಲಾಖೆಗಳು ಮಂತ್ರಿಗಳಿಲ್ಲದೆ ನಿಷ್ಕಿ್ರಯವಾಗಿವೆ. ಜನರ ಕಷ್ಟಕೇಳಲು ಜಿಲ್ಲಾ ಉಸ್ತುವಾರಿ ಮಂತ್ರಿಗಳು ತಮ್ಮ ಜಿಲ್ಲೆ ಕಡೆಗೆ ತಲೆ ಹಾಕುತ್ತಿಲ್ಲ. ಪ್ರವಾಹ ಬಂದು ಇಷ್ಟುಸಮಯವಾದ್ರೂ ಇನ್ನೂ ಜನ ಬೀದಿಬದಿಯಲ್ಲೇ ವಾಸಿಸುತ್ತಾ ಇದ್ದಾರೆ ಎಂದಿದ್ದಾರೆ.

ಬೆಳೆಗೆ ಬೆಂಕಿ: ನಂದಿಸಲು ಹೋದ ರೈತ ಸಜೀವ ದಹನ

ಹುಬ್ಬಳ್ಳಿಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅಲ್ಲಿನ ಮಹದಾಯಿ ಸಮಸ್ಯೆ ಬಗ್ಗೆ ಮಾತನಾಡೋದು ಬಿಟ್ಟು ಪಾಕಿಸ್ತಾನದ ಬಗ್ಗೆ ಮಾತಾಡುತ್ತಾರೆ. ಇದರಿಂದ ಹುಬ್ಬಳ್ಳಿ ಜನರ ಕಷ್ಟದೂರಾಗುತ್ತದೆಯೇ? ಪ್ರವಾಹ ಬಂದಾಗ ರಾಜ್ಯದ ಕಡೆ ಕಣ್ಣೆತ್ತಿ ನೋಡದ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಈಗ ಏಕೆ ಬಂದಿದ್ದಾರೆ? ಬಂದವರು ಜನರ ಸಮಸ್ಯೆಗೆ ಪರಿಹಾರ ಹೇಳಿದ್ದಾರಾ? ದೇಶದ 13 ರಾಜ್ಯಗಳು ಸಿಎಎ, ಎನ್‌ಆರ್‌ಸಿ ಜಾರಿ ಮಾಡಲ್ಲ ಎಂದು ಹೇಳುತ್ತಿವೆ. ಈ ಎಲ್ಲ ರಾಜ್ಯ ಸರ್ಕಾರಗಳನ್ನು ಕೇಂದ್ರ ಸರ್ಕಾರ ವಜಾ ಮಾಡುತ್ತಾ? ಎಂದು ಪ್ರಶ್ನಿಸಿದರು.

ನಿತೀಶ್‌ಕುಮಾರ್‌ ವಿರುದ್ಧ ಕ್ರಮವಿದೆಯೇ?

ಸಿಎಎ ಜಾರಿ ಮಾಡಿ ಎಂದು ರಾಜ್ಯಪಾಲರು ಸರ್ಕಾರಕ್ಕೆ ನಿರ್ದೇಶನ ನೀಡುವುದು ಅಸಂವಿಧಾನಿಕ. ರಾಜ್ಯಪಾಲರು ಚುನಾಯಿತ ಸರ್ಕಾರದ ಮುಖ್ಯಸ್ಥರಲ್ಲ, ಅವರ ಮಾತನ್ನು ಸರ್ಕಾರ ಕೇಳಲೇಬೇಕೆಂಬ ನಿಯಮವೂ ಇಲ್ಲ. ಬಿಹಾರದಲ್ಲಿ ಬಿಜೆಪಿಯ ಸಮ್ಮಿಶ್ರ ಸರ್ಕಾರವಿದ್ದರೂ ಸಿಎಎ, ಎನ್‌ಆರ್‌ಸಿ ಜಾರಿ ಮಾಡಲ್ಲ ಎಂದು ಅಲ್ಲಿನ ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಾದರೆ ಬಿಜೆಪಿಯವರು ಅಲ್ಲಿನ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್‌ ಪಡೆಯಲಿ ನೋಡೋಣ. ಬಿಜೆಪಿ ಸರ್ಕಾರ ಇರುವಲ್ಲೇ ಈ ಕಾಯ್ದೆ ಜಾರಿಯಾಗುತ್ತಿಲ್ಲ, ಬೇರೆ ಕಡೆಯದು ಆಮೇಲಿನ ಮಾತು ಎಂದು ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟದ್ದು

ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು. ಯಾರು ಆಗಬೇಕು ಎಂಬುದನ್ನು ಅವರು ನಿರ್ಧರಿಸುತ್ತಾರೆ. ಬೇಗನೆ ನೇಮಕವಾಗಲಿ ಅಂತ ನಾನೂ ಹೇಳುತ್ತೇನೆ. ಹಾಗಂತ ಯಾರು ನೇಮಕವಾಗಬೇಕು ಅಂತ ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ಇದು ದೊಡ್ಡ ವಿಚಾರವಲ್ಲ, ಇದಕ್ಕಿಂತ ದೊಡ್ಡ ವಿಚಾರ ಮಂತ್ರಿ ಮಂಡಲ ವಿಚಾರ. ಒಂದು ವೇಳೆ ಸಚಿವ ಸಂಪುಟ ವಿಸ್ತರಣೆಯಾದರೆ ಸ್ಫೋಟವಾಗುತ್ತದೆ. ಮಂತ್ರಿಸ್ಥಾನ ಕೊಡದಿದ್ದರೆ ನೋಡಿಕೊಳ್ಳಿ ಅಂತ ಈಗಾಗಲೇ ವಿಶ್ವನಾಥ್‌ ಹೇಳಿದ್ದಾರೆ. ಮುಂದೆ ನೀವೆ ನೋಡಿ ಎಂದು ಹೊಸ ಬಾಂಬ್‌ ಎಸೆದರು.

Follow Us:
Download App:
  • android
  • ios