ಆ್ಯಂಕರ್‌..ಸರ್ಕಾರಗಳಿಗೆ ರೈತರ ಬಗ್ಗೆ ಮಾತನಾಡುವ ಹಕ್ಕಿಲ್ಲ, ಕ್ವಿಂಟಾಲ್‌ ಕೊಬ್ಬರಿಗೆ 20ಸಾವಿರ ರೂ ಹೆಚ್ಚಿಸುವಂತೆ ಒತ್ತಾಯಿಸಿ ಟ್ರ್ಯಾಕ್ಟರ್‌ ಮೆರವಣಿಗೆ ಮೂಲಕ ಪ್ರತಿಭಟನೆ

 ತಿಪಟೂರು (ನ.06): ರೈತರ ಹೆಸರೇಳಿಕೊಂಡು ಅಧಿಕಾರದ ಗದ್ದುಗೆ ಹಿಡಿಯುವ ಸರ್ಕಾರಗಳಿಗೆ ರೈತರ ಕಷ್ಟಅರ್ಥವಾಗುತ್ತಿಲ್ಲ. ಅಗತ್ಯವಸ್ತುಗಳ ಬೆಲೆ ಏರಿಕೆಯ ನಡುವೆ ಬದುಕು ಸವೆಸುತ್ತಿರುವ ಇಲ್ಲಿನ ರೈತರ ಜೀವನಾಧಾರ ವಾಣಿಜ್ಯ ಬೆಳೆಯಾದ ಕೊಬ್ಬರಿ ಬೆಲೆ ಏಕಾಏಕಿ ಕಡಿಮೆಯಾಗುವ ಮೂಲಕ ತೆಂಗು ಬೆಳೆಗಾರರು ಮತ್ತಷ್ಟುಸಂಕಷ್ಟಕ್ಕೆ ಸಿಲುಕಿದ್ದು, ರೈತರ ಬಗ್ಗೆ ಮಾತನಾಡುವ ಹಕ್ಕನ್ನು ಈ ಸರ್ಕಾರ ಕಳೆದುಕೊಂಡಿದೆ ಎಂದು ಕಾಂಗ್ರೆಸ್‌ ಮುಖಂಡ ಕೆ.ಟಿ. ಶಾಂತಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಗರದ ಎಪಿಎಂಸಿ ಮಾರುಕಟ್ಟೆಆವರಣದಿಂದ ತಾಲೂಕು ಆಡಳಿತಸೌಧದವರೆಗೆ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್‌ ಮೆರವಣಿಗೆ ಮೂಲಕ ಆಯೋಜಿಸಿದ್ದ ತೆಂಗು ಬೆಳೆಗಾರರ ಬೃಹತ್‌ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕಳೆದ ವರ್ಷ ರು. 19ಸಾವಿರÜ ಗಡಿಯಲ್ಲಿದ್ದ ಕೊಬ್ಬರಿ ಬೆಲೆ ಇದೀಗ ರು.13ಸಾವಿರಕ್ಕೆ ಕುಸಿದಿರುವುದು ತೆಂಗು ಬೆಳೆಗಾರರಲ್ಲಿ ಆಘಾತವುಂಟುಮಾಡಿದೆ. ಸದ್ಯ ಸರ್ಕಾರದ ಬೆಂಬಲ ಬೆಲೆ ಕ್ವಿಂಟಾಲ್‌ಗೆ 10 ಸಾವಿರವಿದ್ದು ಕೂಡಲೆ ಅದನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರು.20ಸಾವಿರಕ್ಕೆ ನಿಗದಿ ಪಡಿಸುವಂತೆ. 1 ಕ್ವಿಂಟಾಲ್‌ ಕೊಬ್ಬರಿ ಬೆಳೆಯಲು 17ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತಿದ್ದು, ಬೆಳೆಗಾರರಿಗೆ ಕನಿಷ್ಠವೆಂದರೂ ರೂ 20ಸಾವಿರವಾದರೂ ಬೆಲೆ ಸಿಕ್ಕರೆ ಮಾತ್ರ ವೈಜ್ಞಾನಿಕ ಬೆಲೆ ಸಿಕ್ಕಿದಂತಾಗುತ್ತದೆ. ಆದರೆ ಸದ್ಯದ ಮಾರುಕಟ್ಟೆಹರಾಜು ಧಾರಣೆ ಬಹಳ ಕಡಿಮೆಯಾಗುತ್ತಿದ್ದು, ಮುಂದೆ ಮತ್ತಷ್ಟುದರ ಕುಸಿಯುವ ಸಾಧ್ಯತೆಗಳೇ ಹೆಚ್ಚು ಇದ್ದಂತೆ ಕಾಣುತ್ತಿದೆ. ಈಗಾಗಲೆ ತೆಂಗು ಬೆಳೆಗಾರರು ಪ್ರಕೃತಿ ವಿಕೋಪ, ಕಪ್ಪುತಲೆ ಹುಳುರೋಗ, ರಸ ಸೋರಿಕೆ, ಗರಿ, ನುಸಿ ರೋಗಗಳು ಬಿಟ್ಟೂಬಿಡದೆ ಕಾಡುತ್ತಿದ್ದು ಇಳುವರಿ ತೀರಾ ಕುಂಠಿತವಾಗಿದೆ. ಇಷ್ಟಾದರೂ ಈವರೆವಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊಬ್ಬರಿ ಬೆಳೆಗಾರರ ಸಂಕಷ್ಟಗಳ ಬಗ್ಗೆ ಕಿಂಚಿತ್ತೂ ಗಮನಹರಿಸದಿರುವುದು ಬೆಳೆಗಾರರ ದುರಂತವೇ ಸರಿ. ಕೂಡಲೆ ತೆಂಗುಬೆಳೆಗಾರರ ಸಹಾಯಕ್ಕೆ ಬರದಿದ್ದರೆ ತೆಂಗು ಸಂಪೂರ್ಣ ನಾಶವಾಗಲಿದ್ದು ಇದಕ್ಕೆ ಸರ್ಕಾರದ ಧೋರಣೆಯೇ ಕಾರಣವಾಗಲಿದೆ ಎಂದರು.

ಸಚಿವರಿಗೆ ರೈತರ ಕಷ್ಟತಿಳಿಯುತ್ತಿಲ್ಲ : ಇಲ್ಲಿನ ಸಚಿವರಿಗೆ ರೈತರ ಕಷ್ಟಅರ್ಥವಾಗುತ್ತಿಲ್ಲ. ಅವರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಭಾಗದ ರೈತರಿಗೆ ಕೊಬ್ಬರಿಯೇ ಜೀವನಾಧಾರವಾಗಿದ್ದು ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚು ಇತರೆ ಖರ್ಚುವೆಚ್ಚಗಳಿಗೇ ಕೊಬ್ಬರಿಯನ್ನೇ ನಂಬಿಕೊಂಡಿದ್ದಾರೆ. ಹೊರರಾಜ್ಯಗಳಲ್ಲಿ ಕೊಬ್ಬರಿಗೆ ಉತ್ತಮ ಬೆಲೆಯಿದ್ದರೂ, ರೈತರಿಂದ ಖರೀದಿಸುವ ಬೆಲೆ ತುಂಬಾ ಕಡಿಮೆ ಇದೆ. ಹಾಗಾಗಿ ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕಿ ಕೊಬ್ಬರಿ ಬೆಲೆ ಸ್ಥಿರವಾಗಿರುವಂತೆ ಗಮನಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನಂತರ ಎಪಿಎಂಸಿ ಕಾರ್ಯದರ್ಶಿಗಳಿಗೆ ಹಾಗೂ ತಹಸೀಲ್ದಾರ್‌ ಚಂದ್ರಶೇಖರ್‌ಗೆ ಟ್ರ್ಯಾಕ್ಟರ್‌ ಮೆರವಣಿಗೆ ಮೂಲಕವೇ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಪ್ರಕಾಶ್‌, ಮುಖಂಡರಾದ ಗೊರಗೊಂಡನಹಳ್ಳಿ ಸುದರ್ಶನ್‌, ಮೋಹನ್‌ಬಾಬು, ಹೇಮಂತ್‌, ರೈತ ಮುಖಂಡರಾದ ಲಕ್ಷ್ಮೀ ಪುರದ ಬಸವ ರಾಜು, ಆಲ್ದಹಳ್ಳಿ ಚನ್ನೇಗೌಡ, ಬಜಗೂರು ವಸಂತ್‌, ಗಿರೀಶ್‌, ಈಶ್ವರ್‌, ಪ್ರಭು ವಾಸುದೇವರಹಳ್ಳಿ, ಚಂದ್ರಶೇಖರ್‌, ರೇಣುಕಯ್ಯ ಸೇರಿದಂತೆ ನೂರಾರು ಸಂಖ್ಯೆಯಲ್ಲಿ 35ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ವಿವಿಧ ಹಳ್ಳಿಗಳಿಂದ ರೈತರು ಭಾಗವಹಿಸಿದ್ದರು.

ರೈತರ ಹೆಸರೇಳಿಕೊಂಡು ಅಧಿಕಾರದ ಗದ್ದುಗೆ ಹಿಡಿಯುವ ಸರ್ಕಾರಗಳಿಗೆ ರೈತರ ಕಷ್ಟಅರ್ಥವಾಗುತ್ತಿಲ್ಲ

ಅಗತ್ಯವಸ್ತುಗಳ ಬೆಲೆ ಏರಿಕೆಯ ನಡುವೆ ಬದುಕು ಸವೆಸುತ್ತಿರುವ ಇಲ್ಲಿನ ರೈತರ ಜೀವನಾಧಾರ ವಾಣಿಜ್ಯ ಬೆಳೆಯಾದ ಕೊಬ್ಬರಿ ಬೆಲೆÜ ಏಕಾಏಕಿ ಕಡಿಮೆ ಯಾಗುವ ಮೂಲಕ ತೆಂಗು ಬೆಳೆಗಾರರು ಮತ್ತಷ್ಟುಸಂಕಷ್ಟಕ್ಕೆ