ಚಿತ್ರದುರ್ಗ(ಜ.27): ಈಗೇನಿದ್ದರೂ ತಂತ್ರಜ್ಞಾನದ ಯುಗ. ಕೈಯಲ್ಲಿ ಒಂದು ಸ್ಮಾರ್ಟ್‌ಫೋನ್ ಇದ್ದರೆ ಸಾಕು ನಾವು ಎಲ್ಲಿದ್ದೇವೆ ಎಂಬುದನ್ನು ಸಹ ಗೂಗಲ್‌ ಮ್ಯಾಪ್‌ ಸಹಾಯದಿಂದ ತಿಳಿದುಕೊಳ್ಳಬಹುದಾಗಿದೆ. ಇದೇ ಗೂಗಲ್‌ಮ್ಯಾಪ್‌ನಿಂದ 30 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ತನ್ನೂರಿಗೆ ಬಂದ ಘಟನೆ ಭರಮಸಾಗರ ಹೋಬಳಿಯ ಹಂಪನೂರು ಗ್ರಾಮದಲ್ಲಿ ನಡೆದಿದೆ.

ಏನಿದು ಪ್ರಕರಣ: 

30 ವರ್ಷಗಳ ಹಿಂದೆ ಭರಮಸಾಗರ ಹೋಬಳಿಯ ಹಂಪನೂರು ಗ್ರಾಮದ ವಿರೂಪಾಕ್ಷಪ್ಪ ಎಂಬ ವ್ಯಕ್ತಿ ಕಾಣೆಯಾಗಿ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನೆಲೆಸಿದ್ದ. ಅಂದಿನಿಂದ ಇಂದಿನವರೆಗೂ ಬಂಧು ಬಳಗವನ್ನೇ ಮರೆತಿದ್ದ. ಆದರೆ, ಇದೀಗ ಗೂಗಲ್‌ ಮ್ಯಾಪ್‌ ಸಹಾಯದಿಂದ ವಿರೂಪಾಕ್ಷಪ್ಪ ತನ್ನ ಗ್ರಾಮಕ್ಕೆ ಮರಳಿದ್ದಾನೆ.

ವಿರೂಪಾಕ್ಷಪ್ಪ ಹಂಪನೂರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಆತನ ಕುಟುಂಬಸ್ಥರ ಸಂತೋಷಕ್ಕೆ ಪಾರವೆ ಇಲ್ಲದಂತಾಗಿದೆ. ಮನೆಗೆ ವಾಪಸಾದ ವ್ಯಕ್ತಿಯನ್ನ ಕಂಡು ಸಂಬಂಧಿಕರು ಸಂಭ್ರಮಪಟ್ಟಿದ್ದಾರೆ. ಸದ್ಯ ವಿರೂಪಾಕ್ಷಪ್ಪ ಮತ್ತೆ ವಾಪಾಸ್ ಹೈದರಾಬಾದ್‌ಗೆ ತೆರಳಿದ್ದಾನೆ. ಮುಂದಿನ ವಾರದಲ್ಲಿ ವಿರೂಪಾಕ್ಷಪ್ಪ ಮತ್ತೆ ಸ್ವ ಗ್ರಾಮಕ್ಕೆ ಆಗಮಿಸಲಿದ್ದಾನೆ.