ಒಳ್ಳೆ ಚಿಂತನೆ, ಸಜ್ಜನರ ಸಹವಾಸದಿಂದ ಎಲ್ಲರೂ ನಮ್ಮವರೇ ಎಂಬ ಭಾವನೆ

ಒಳ್ಳೆಯ ಚಿಂತನೆ ಹಾಗೂ ಸಜ್ಜನರ ಸಹವಾಸ ಎಲ್ಲರೂ ನಮ್ಮವರೇ ಎಂಬ ಭಾವನೆ ಮನುಷ್ಯನನ್ನು ಸತ್ಯದ ಮಾರ್ಗದಲ್ಲಿ ಮುನ್ನಡೆಸಲಿದೆ. ಸತ್ಯವನ್ನು ಹುಡುಕವಂತ ಪ್ರಯತ್ನವೇ ಸತ್ಸಂಗ. ಎಲ್ಲರೂ ನಮ್ಮವರೇ ಎಂಬ ಭಾವನೆಯಿಂದ ಮನುಷ್ಯ ಬದುಕಬೇಕಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

Good thinking, the feeling that everyone is ours with the company of gentlemen snr

  ಶಿರಾ :  ಒಳ್ಳೆಯ ಚಿಂತನೆ ಹಾಗೂ ಸಜ್ಜನರ ಸಹವಾಸ ಎಲ್ಲರೂ ನಮ್ಮವರೇ ಎಂಬ ಭಾವನೆ ಮನುಷ್ಯನನ್ನು ಸತ್ಯದ ಮಾರ್ಗದಲ್ಲಿ ಮುನ್ನಡೆಸಲಿದೆ. ಸತ್ಯವನ್ನು ಹುಡುಕವಂತ ಪ್ರಯತ್ನವೇ ಸತ್ಸಂಗ. ಎಲ್ಲರೂ ನಮ್ಮವರೇ ಎಂಬ ಭಾವನೆಯಿಂದ ಮನುಷ್ಯ ಬದುಕಬೇಕಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ಅವರು ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀಮಠದಲ್ಲಿ ಪೌರ್ಣಿಮೆ ದೀಪೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಮನುಷ್ಯನ ಬದುಕಿನ ಮೌಲ್ಯಗಳ ಬಗ್ಗೆ ಭಕ್ತರಿಗೆ ಆರ್ಶೀವಚನ ನೀಡಿದರು.

ದೇವರಲ್ಲಿ ಪರಿಪರಿಯಾಗಿ ಬೇಡಿ ಪಡೆದದ್ದು ಮನುಷ್ಯ ಜನ್ಮ. ತಾಯಿಯ ಗರ್ಭದಲ್ಲಿ ಜನಿಸಿದ ನಂತರ, ಸ್ವ-ಇಚ್ಛೆಯಿಂದ ಧ್ಯಾನಿಸಿ, ಮೋಹಿಸಿ, ಪ್ರೇಮಿಸಿ ಮತ್ತೆ ನಿನ್ನನ್ನೇ ಪಡೆಯುತ್ತೇನೆ ಎಂಬ ಅದಮ್ಯ ದೃಢಸಂಕಲ್ಪದೊಂದಿಗೆ ಮಾನವ ಜನ್ಮ ತಾಳಿದ್ದು. ಭಗವಂತನ ಸ್ಮರಣೆಯಿಂದ ಮಾತ್ರ ಬದುಕು ಬಂಗಾರವಾಗಲು ಸಾಧ್ಯ, ಅದನ್ನು ಅರಿಯದ ಮನುಷ್ಯ ತನ್ನಲ್ಲಿರುವ ಆಸೆಗಳ ಬೆನ್ನು ಹತ್ತಿ ದುಃಖ ಪಡುತ್ತಾನೆ.

ಭಕ್ತರಿಗೆ ಆಧ್ಯಾತ್ಮಿಕತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಪ್ರತಿ ಮಾಸದ ಪೌರ್ಣಿಮೆ ದಿನ ಸತ್ಸಂಗ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಹಲವಾರು ವಿಚಾರಗಳ ಮೇಲೆ ಶ್ರೀ ಮಠ ಬೆಳಕು ಚೆಲ್ಲಲಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಭಕ್ತರಾದ ತಮ್ಮಣ್ಣ, ನಿರಂಜನ್, ಮಂಜುನಾಥ ಗುಪ್ತ, ಕಿಶೋರ್ ಸೇರಿದಂತೆ ಹಲವಾರು ಭಕ್ತರು ಹಾಗೂ ಶ್ರೀ ಮಠದ ವಿದ್ಯಾರ್ಥಿಗಳು ಹಾಜರಿದ್ದರು.

ಗಣೇಶನ ನೈವೇದ್ಯಕ್ಕೆ ಫುಲ್ ಡಿಮ್ಯಾಂಡ್

ತುಮಕೂರು (ಸೆ.22): ಗಣೇಶನ ಹಬ್ಬದ ಪ್ರಯುಕ್ತ ಪ್ರಯುಕ್ತ ಪಾವಗಡ ನಗರದ ಕಲ್ಮನ್ ಚೆರುವು ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾದ ಗಣೇಶನ ದೇವಸ್ಥಾನದ ಬಳಿ ಗುರುವಾರ ಸಂಜೆ ವಿಶೇಷ ಲಡ್ಡು ಪ್ರಸಾದ ಹರಾಜು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರತಿ ವರ್ಷ ಗಣೇಶನ ನೈವೇದ್ಯಕ್ಕಾಗಿ ತಯಾರಿಸಲಾಗುವ ಲಡ್ಡನ್ನು ಹಜಾರು ಹಾಕುವುದು ವಾಡಿಕೆ. ಗಣೇಶನ ಪ್ರತಿಷ್ಟಾಪನೆ ದಿನ ಈ ಲಡ್ಡು ತಯಾರಿಸಿ ಗಣೇಶನಿಗೆ ನೈವೇದ್ಯಕ್ಕೆ ಇಡಲಾಗುತ್ತದೆ.‌ 

ಪ್ರತಿದಿನ ಗಣೇಶ ಹಾಗೂ ನೈವೇದ್ಯಕ್ಕೆ ಪೂಜೆ ಸಲ್ಲಿಸಿಕೊಂಡು ಬಂದು, ಗಣೇಶನ ವಿಸರ್ಜನೆಯ ದಿನ ಈ ಲಡ್ಡನ್ನು ಹರಾಜು ಹಾಕಲಾಗುತ್ತದೆ.‌ ಗಣೇಶನ‌ ಪೂಜೆಯಲ್ಲಿ ಪಾಲ್ಗೊಳ್ಳುವ ಕಲ್ಮನ್ ಚೆರುವು ಪ್ರದೇಶದ ಜನರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಲಡ್ಡಿನ ದರವನ್ನು ಕೂಗುತ್ತಾರೆ. ಗಣೇಶ‌ನ ಲಡ್ಡನ್ನು ಪಡೆಯಲು ಪೈಪೋಟಿ ಮೇಲೆ ಹರಾಜು ಕೂಗಲಾಗುತ್ತದೆ.

ಪಾಕಿಸ್ತಾನದ ಲಾಹೋರ್‌ನಲ್ಲಿ ಗಣೇಶ ಪ್ರತಿಷ್ಠಾಪಿಸುತ್ತೇವೆ: ಶಾಸಕ ಬಸನಗೌಡ ಯತ್ನಾಳ್‌

ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಗಣೇಶನ ನೈವೇದ್ಯದ ಲಡ್ಡು 32,700 ರೂಪಾಯಿಗೆ ಬಿಕರಿಯಾಗಿದೆ. ಸ್ಥಳೀಯ ನಿವಾಸಿಗಳಾದ ಗೋಪಾಲಪ್ಪ ಎಂಬುವರಿಗೆ ಲಡ್ಡು ಲಭಿಸಿದೆ. 32,700 ರೂಪಾಯಿ ಹಣವನ್ನು ನೀಡಿ  ಗೋಪಾಲಪ್ಪ ಲಡ್ಡನ್ನು ತಗೆರುಕೊಂಡಿದ್ದಾರೆ.‌ ನಿನ್ನೆ ಮಧ್ಯರಾತ್ರಿ 2 ಗಂಟೆವರೆಗೂ ಹಜಾರು ನಡೆದಿದೆ.‌ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತಕ್ಕೆ ಗಣೇಶನ ನೈವೇದ್ಯದ ಲಡ್ಡು ಹರಾಜಾಗಿದೆ.‌ ಇನ್ನು ಇದರಲ್ಲಿ ಜಯಗಳಿಸಿದ ಗೋಪಾಲಪ್ಪ ಅವರನ್ನು ಗಣೇಶ ಕಮಿಟಿ ವತಿಯಿಂದ ಸನ್ಮಾನಿಸಿದ್ದಾರೆ.

Latest Videos
Follow Us:
Download App:
  • android
  • ios