ಬೆಂಗಳೂರು: ನಮ್ಮ ಮೆಟ್ರೋ ಆನ್‌ಲೈನ್ ಟಿಕೆಟ್‌ಗೆ ಭರ್ಜರಿ ರೆಸ್ಪಾನ್ಸ್..!
ಮೊದಲ ದಿನವೇ 1669 ಆನ್‌ಲೈನ್ ಟಿಕೆಟ್ ಖರೀದಿ, ಬೆಂಗಳೂರಲ್ಲೂ ದೆಹಲಿ ಮಾದರಿ ಆನ್‌ಲೈನ್ ಟಿಕೆಟ್ ಜಾರಿ
ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು(ನ.02): ಕೊರೋನಾ ಸಮಯದಲ್ಲಿ ನಷ್ಟದ ಸುಳಿಯಲ್ಲಿದ್ದ ನಮ್ಮ ಮೆಟ್ರೋ ಲಾಭದ ಕಡೆ ಮುಖ ಮಾಡಿದೆ. ಹೊಸ ಹೊಸ ಯೋಜನೆಗಳನ್ನ ಜಾರಿಗೊಳಿಸುವ ಮೂಲಕ ನಮ್ಮ ಮೆಟ್ರೋ ಜನರಿಗೆ ಇನ್ನಷ್ಟು ಹತ್ತಿರವಾಗಿದೆ. ಹೌದು, ನಮ್ಮ ಮೆಟ್ರೋ ನಿಗಮ ನಿನ್ನೆಯಿಂದ ಆನ್‌ಲೈನ್ ಟಿಕೆಟ್ ಜಾರಿಗೆ ತಂದಿದ್ದು, ಮೊದಲ ದಿನವೇ ಆನ್‌ಲೈನ್ ಟಿಕೆಟ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ನಮ್ಮ ಮೆಟ್ರೋ ಜೊತೆ ವಾಟ್ಸ್ಆಪ್ ಮೂಲಕ 14400 ಮಂದಿ ಆನ್‌ಲೈನ್ ಟಿಕೆಟ್ ಕುರಿತು ವಿಚಾರಣೆ ನಡೆಸಿದ್ದಾರೆ. ಇದರಲ್ಲಿ 1669 ಜನರು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿ ಮಾಡಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.
ಸರದಿ ಸಾಲು ತಪ್ಪಿಸಿ ಪ್ರಯಾಣಿಕರ ಸುಗಮ ಓಡಾಟಕ್ಕೆ ಆನ್‌ಲೈನ್ ಟಿಕೆಟ್ ಜಾರಿಗೆ ತಂದಿದೆ. ಈಗಾಗಲೇ ದೇಶದ ಹಲವು ಕಡೆ ಆನ್‌ಲೈನ್ ಟಿಕೆಟ್ ಜಾರಿಯಲ್ಲಿದ್ದು, ದೆಹಲಿ ಮಾದರಿಯಲ್ಲಿ ಆನ್‌ಲೈನ್ ಟಿಕೆಟ್ ಜಾರಿಗೆ ತರಲಾಗಿದ್ದು ಜನರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಮೆಟ್ರೋದ ‘ಮಿಯಾವಾಕಿ ಅರಣ್ಯ’ ಕನಸು ಭಗ್ನಗೊಳಿಸಿದ ಮಳೆರಾಯ..!
ಇಷ್ಟು ದಿನ ಟಿಕೆಟ್ ಖರೀದಿ ಮಾಡಲು ಜನ ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಹೋಗಬೇಕಿತ್ತು. ಇದರಿಂದ ಪ್ರಯಾಣಿಕರಿಗೆ ಸಮಯ ತೆಗೆದುಕೊಳ್ಳುತ್ತಿತ್ತು. ಇದೀಗ ನಮ್ಮ ಮೆಟ್ರೋ ಆನ್‌ಲೈನ್ ಟಿಕೆಟ್ ಜಾರಿಗೆ ತಂದಿರೋದ್ರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿದೆ.
ಏನಿದು ವಾಟ್ಸಆ್ಯಪ್ ಅಪ್ಲಿಕೇಶನ್ ಟಿಕೆಟ್ ಪಡೆಯೋದು ಹೇಗೆ?
ಬಿಎಂಆರ್‌ಸಿಎಲ್ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರಿಗೆ ಈ ನೂತನ ವ್ಯವಸ್ಥೆ ಜಾರಿಗೆ ತಂದಿದ್ದು, ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಲು ತಾವು ಇರುವ ಸ್ಥಳದಿಂದ ತಲುಪುವ ಸ್ಥಳ ವಾಟ್ಸಪ್‌ನಲ್ಲಿ ಚಾಟ್ ಮಾಡಿಕೊಂಡು ಆನ್‌ಲೈನ್ ಪೇಮೆಂಟ್ ಮಾಡಿ ಟಿಕೆಟ್ ಖರೀದಿ ಸಬಹುದಾಗಿದೆ. ನಮ್ಮ ಮೆಟ್ರೋ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಪ್ಲೇ ಸ್ಟೋರ್‌ನಲ್ಲಿ ನಮ್ಮ ಮೆಟ್ರೋ ಆ್ಯಪ್‌ನ ಡೌನ್ ಲೋಡ್ ಮಾಡಿಕೊಂಡು ಹೆಸರನ್ನ ನೋಂದಾಯಿಸಿ ಕ್ಯೂರ್ ಟಿಕೆಟ್ ಖರೀದಿಸಿ ಪ್ರಯಾಣಿಸಬಹುದು
ವಾಟ್ಸಪ್ ಮೂಲಕ ಟಿಕೆಟ್ ಪಡೆಯೋದು ಹೇಗೆ?
ಅಧಿಕೃತ ಬಿಎಂಆರ್‌ಸಿಎಲ್ ವಾಟ್ಸಪ್ ಮೊಬೈಲ್ ನಂ 8105556677 ನಂಬರನ್ನ ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳಬೇಕು. ನಂತರ ಹಾಯ್ ಎಂಬ ಸಂದೇಶ ಕಳುಹಿಸಬೇಕು. ಮೆಟ್ರೋದಿಂದ ಮರಳಿ ಬಂದ ಸಂದೇಶದಲ್ಲಿ ಕ್ಯೂ ಆರ್ ಟಿಕೆಟ್ ಆಯ್ಕೆ ಮಾಡಬೇಕು. ಬೈ ಟಿಕೆಟ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಬೆಂಗಳೂರು ಯಾವ ಮೆಟ್ರೋ ನಿಲ್ದಾಣದಿಂದ ಹೊರಡುತ್ತೀರಾ? ಇಲ್ಲವೇ ನಿಲ್ದಾಣದ ಹೆಸರನ್ನು ಟೈಪ್ ಮಾಡಿ ಕಳುಹಿಸಬಹುದು. ಬಳಿಕ ಎಲ್ಲಿಗೆ ತೆರಳಬೇಕು ಎಂದು ಹೆಸರು ಬರೆದು ಕಳುಹಿಸಬೇಕು ಅಥವಾ ನೀಡಿರುವ ಪಟ್ಟಿಯಲ್ಲಿ ನಿಲ್ದಾಣದ ಹೆಸರನ್ನು ಅಯ್ಕೆ ಮಾಡಿಕೊಳ್ಳಬಹುದು. ನಂತರ ಅಧಿಕೃತವಾಗಿ ಎಲ್ಲಿಂದ ಎಲ್ಲಿಯವರೆಗೆ ತೆರಳುವಿರಿ ಸಂಪೂರ್ಣ ಮಾಹಿತಿ ಮತ್ತು ದರದೊಂದಿಗೆ ಸಂದೇಶ ಬರುತ್ತದೆ. ಮುಂದುವರಿಯುವುದು ಎಂದು ಆಯ್ಕೆ ಮಾಡಿ ಬಳಿಕ ವಾಟ್ಸಪ್ ಪೇ ಮೂಲಕ ಅಥವಾ ಆನ್‌ಲೈನ್ ಪೇಮೆಂಟ್ ಮಾಡಿ ಟಿಕೆಟ್ ಪಡೆಯಬಹುದು.