ರೈತರಿಗೆ ತ್ವರಿತವಾಗಿ ಸಾಗುವಳಿ ಪತ್ರ ನೀಡಿ : ಶಾಸಕ ರಾಜಣ್ಣ

ಬಗರ್‌ ಹುಕುಂ ಜಮೀನು ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಿ ನಂತರ ವಿನಾಕಾರಣ ನೆಪವೂಡ್ಡಿ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವುದನ್ನು ನಾನು ಸಹಿಸುವುದಿಲ್ಲ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಎನ್‌.ರಾಜಣ್ಣ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

Give cultivation certificate to farmers quickly: MLA Rajanna snr

  ಮಧುಗಿರಿ :  ಬಗರ್‌ ಹುಕುಂ ಜಮೀನು ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಿ ನಂತರ ವಿನಾಕಾರಣ ನೆಪವೂಡ್ಡಿ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವುದನ್ನು ನಾನು ಸಹಿಸುವುದಿಲ್ಲ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಎನ್‌.ರಾಜಣ್ಣ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಬುಧವಾರ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರೈತರು ಸರ್ಕಾರದಿಂದ ಜಮೀನು ಪಡೆದು ಉಳಿಮೆ ಮಾಡಿಕೊಂಡು ಅಲ್ಲೇ ಮನೆ, ನಿರ್ಮಿಸಿಕೊಂಡು ಜೀವನವನ್ನು ಕಟ್ಟಿಕೊಂಡು ಕುಟುಂಬ ಸಮೇತರಾಗಿ ಜೀವನ ನಡೆಸುತ್ತಿದ್ದು, ಅಂಥವರನ್ನು ಖಾಲಿ ಮಾಡಿಸುವುದು ಸರಿಯಲ್ಲ ಎಂದರು.

ತಾಲೂಕಿನ ದೊಡ್ಡೇರಿ ಹೋಬಳಿ ಎಎಂ ಕಾವಲ್‌ನಲ್ಲಿ ಸಾಗುವಳಿಗೆ ಜಮೀನುಗಳ ಪ್ರಕರಣಗಳಿದ್ದು, ಈ ಕುರಿತು ರೈತರಿಗೆ ಅನುಕೂಲವಾಗುವ ರೀತಿ ಸೂಕ್ರ ಕ್ರಮ ಕೈಗೊಳ್ಳಿ. ತಾಲೂಕಿನ ವಿವಿಧ ಭಾಗಗಳಲ್ಲಿ ಸರ್ಕಾರದ ಭೂಮಿ ಕಬಳಿಕೆಯಾಗಿದ್ದು, ಇದರ ಬಗ್ಗೆಯೂ ಅಧಿಕಾರಿಗಳು ಎಚ್ಚತ್ತು ಸರ್ಕಾರಿ ಭೂಮಿ ಉಳಿಸಲು ಮುಂದಾಗಬೇಕು ಎಂದರು.

ತಾಲೂಕು ಕಚೇರಿಗೆ ಬರುವ ಅಹವಾಲುಗಳು ಮತ್ತು ವಿಲೇವಾರಿ ಪ್ರಕರಣಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳುವಂತೆ ಸಲಹೆ ನೀಡಿದರು. ಜನ ಸಂಪರ್ಕ ಸಭೆಗಳನ್ನು ಹೋಬಳಿ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಆಯೋಜಿಸಿ ನಾಗರೀಕ ಸೇವೆಗೆ ಈಗಲೇ ಮುಂದಾಗಿ. ಸಾಗುವಳಿ ನೀಡಿರುವ ರೈತರಿಗೆ ಶೀಘ್ರವಾಗಿ ಪಹಣಿ ನೀಡುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆ ಅಧಿಕಾರಿಗಳು ಓದುವ ಮಕ್ಕಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕಚೇರಿಗಳಿಗೆ ಅಲೆಸದೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನೀಡುವ ವ್ಯವಸ್ಥೆ ಮಾಡಿ ಮಕ್ಕಳ ಶಿಕ್ಷಣಕ್ಕೆ ಅಧಿಕ ಒತ್ತು ನೀಡುವಂತೆ ತಿಳಿಸಿದರು. ಆಹಾರ ಇಲಾಖೆ ಅಧಿಕಾರಿಗಳು ಪಡಿತರ ಚೀಟಿ ರದ್ದುಪಡಿಸುವಾಗ ಮುತುವರ್ಜಿ ವಹಿಸಿ ವಜಾ ಮಾಡಿ, ಇದರಿಂದ ಅರ್ಹ ಫಲಾನುಭವಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಸೂಚನೆ ನೀಡಿದರು.

ತಾಲೂಕಿನ ವಿವಿಧೆಡೆ ನಾಡ ಕಚೇರಿಗಳಿಗೆ ಸ್ವಂತ ಕಟ್ಟಡವಿದಿರುವುದನ್ನು ಗಮನಕ್ಕೆ ತಂದ ಅಧಿಕಾರಿಗಳಿಗೆ, ಶಾಸಕ ರಾಜಣ್ಣ ಉತ್ತರಿಸಿ ಕಟ್ಟಡ ನಿರ್ಮಾಣಕ್ಕೆ ಅತಿ ಶೀಘ್ರವಾಗಿ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.

ತಹಸೀಲ್ದಾರ್‌ ಸಿಗ್ಬತ್‌ ಉಲ್ಲಾ ಮಾತನಾಡಿ, ಇಲ್ಲಿನ ಶಾಸಕರ ನಿರ್ದೇಶನದಂತೆ ಉತ್ತಮ ಆಡಳಿತ ನೀಡಲು ಎಲ್ಲ ಅಧಿಕಾರಿಗಳು ಶ್ರಮ ವಹಿಸಿ ರೈತರ,ಬಡವರ ಕೆಲಸ ಮಾಡಿಕೊಡಲು ಮುಂದಾಗಬೇಕು ಎಂದರು. ಸಭೆಯಲ್ಲಿ ಡಿವೈಎಸ್‌ಪಿ ಕೆ.ಎಸ್‌.ವೆಂಕಟೇಶನಾಯ್ಡು, ಆಹಾರ ಶಿರಸ್ತೇದಾರ್‌ ಗಣೇಶ್‌ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ರೈತರಿಗೆ ಅನುಕೂಲವಾಗುವ ರೀತಿ ಸೂಕ್ರ ಕ್ರಮ ಕೈಗೊಳ್ಳಿ. ತಾಲೂಕಿನ ವಿವಿಧ ಭಾಗಗಳಲ್ಲಿ ಸರ್ಕಾರದ ಭೂಮಿ ಕಬಳಿಕೆಯಾಗಿದ್ದು, ಇದರ ಬಗ್ಗೆಯೂ ಅಧಿಕಾರಿಗಳು ಎಚ್ಚತ್ತು ಸರ್ಕಾರಿ ಭೂಮಿ ಉಳಿಸಲು ಮುಂದಾಗಬೇಕು.ರೈತರಿಗೆ ಸಾಗುವಳಿ ಪತ್ರ ನೀಡಿ ನಂತರ ವಿನಾಕಾರಣ ನೆಪವೂಡ್ಡಿ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವುದನ್ನು ನಾನು ಸಹಿಸುವುದಿಲ್ಲ

ಕೆ.ಎನ್‌ ರಾಜಣ್ಣ, ಶಾಸಕ

Latest Videos
Follow Us:
Download App:
  • android
  • ios