ಬೆಂಗಳೂರು(ಫೆ.15): ಮೂರು ದಿನಗಳ ಹಿಂದೆ ಮನೆ ಬಾಡಿಗೆದಾರನಿಂದ ಮಾರಣಾಂತಿಕ ಹಲ್ಲೆಗೊಳಾಗಿದ್ದ ಬಾಲಕಿ ಚೈತ್ರಾ (15) ಚಿಕಿತ್ಸೆ ಫಲಿಸದೆ ಮಾಗಡಿ ರಸ್ತೆಯ ಸುಮನಹಳ್ಳಿ ಜಂಕ್ಷನ್‌ ಸಮೀಪ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ.

ಹೆಗ್ಗನಹಳ್ಳಿ ನಿವಾಸಿ ಚೈತ್ರಾ, ತಾಯಿ ಜತೆ ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ತಮ್ಮ ಮನೆ ಬಾಡಿಗೆದಾರ ರಂಗಧಾಮಯ್ಯನಿಂದ ಹಲ್ಲೆಗೊಳಗಾಗಿದ್ದಳು. ಬಳಿಕ ಸುಮನಹಳ್ಳಿ ಜಂಕ್ಷನ್‌ ಸಮೀಪ ಲಕ್ಷ್ಮೀ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ನಸುಕಿನ 4ಕ್ಕೆ ಮೃತಪಟ್ಟಿದ್ದಾಳೆ. ಇನ್ನು ಇದೇ ಘಟನೆಯಲ್ಲಿ ಹಲ್ಲೆಗೊಳಗಾಗಿರುವ ಮೃತಳ ತಂದೆ ಶಿವರಾಜ್‌ ಪರಿಸ್ಥಿತಿ ಸಹ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೇಮಿಗಳ ದಿನದಂದೇ ಹಾರಂಗಿಗೆ ಹಾರಿದ ಪ್ರೇಮಿಗಳು...!

ಅನೈತಿಕ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ರೊಚ್ಚಿಗೆದ್ದ ರಂಗಧಾಮಯ್ಯ, ತನ್ನ ಪ್ರಿಯತಮೆ ಲಕ್ಷ್ಮೀ ಕುಟುಂಬದ ಹತ್ಯೆಗೆ ಸೋಮವಾರ ರಾತ್ರಿ ಯತ್ನಿಸಿದ್ದ. ಈ ವೇಳೆ ತೀವ್ರ ಹಲ್ಲೆಗೊಳಗಾಗಿ ಲಕ್ಷ್ಮೀ ಸ್ಥಳದಲ್ಲೇ ಮೃತಪಟ್ಟಿದ್ದಳು.

ಆದರೆ ಪೆಟ್ಟು ತಿಂದಿದ್ದ ಮೃತ ಮಗಳು ಮತ್ತು ಪತಿಯನ್ನು ಪೊಲೀಸರು ಆಸ್ಪತ್ರೆ ದಾಖಲಿಸಿದ್ದರು. ಈ ಕೃತ್ಯ ಎಸಗಿದ ರಂಗಧಾಮಯ್ಯ, ಚಾಕುವಿನಿಂದ ಇರಿದುಕೊಂಡು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗ್ಗೆ ರಾಜಗೋಪಾಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.