ಮೇಲ್ವಿಚಾರಕ ಗದರಿದ್ದಕ್ಕೆ ನೇಣಿಗೆ ಶರಣಾದ ವಿದ್ಯಾರ್ಥಿನಿ!

ಜ್ಞಾನದ ಜೊತೆಗೆ ಧೈರ್ಯವನ್ನೂ ಕೊಡದಾದ ಇಂದಿನ ಆಧುನಿಕ ಶಿಕ್ಷಣ, ಮಾನಸಿಕವಾಗಿ ದುರ್ಬಲವಾದ ಪೀಳಿಗೆಯೊಂದನ್ನು ಸೃಷ್ಟಿಸುತ್ತಿದೆಯೇ ಎಂಬ ಭಯ ಕಾಡತೊಡಗಿದೆ. ಪರೀಕ್ಷೆ ವೇಳೆ ಮೇಲ್ವಿಚಾರಕ ಗದರಿದ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದರೆ, ನಾಗರಿಕ ಸಮಾಜವೊಂದು ಚಿಂತಿಸಬೇಕಾದ ಸಮಯ ಬಂದಿದೆ ಎಂತಲೇ ಅರ್ಥ.   

Girl commit suicide after Teacher scold her in classroom

ಚಿತ್ರದುರ್ಗ(ಜು.28): ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕ ಬೈದ ಕಾರಣಕ್ಕೆ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.

ಇಲ್ಲಿನ ಬಬ್ಬೂರು ಗ್ರಾಮದ ತೋಟಗಾರಿಕಾ ಕಾಲೇಜಿನ ೧೯ ವರ್ಷದ ಅನುರೂಪ ಎಂಬ ವಿದ್ಯಾರ್ಥಿನಿಯೇ  ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಹರಿಹರಪುರ ಗ್ರಾಮ ನಿವಾಸಿಯಾಗಿರುವ ಅನುರೂಪ, ಜಾನಕಿ ಮತ್ತು ರಾಮಮೂರ್ತಿ ಅವರ ಮಗಳು.   

ಪರೀಕ್ಷೇ ವೇಳೆ ಮೇಲ್ವಿಚಾರಕ ಬಸವಲಿಂಗಯ್ಯ ಎಂಬುವವರು ಡೆಸ್ಕ್ ಮೇಲೆ ಪೆನ್ನಿನಲ್ಲಿ ಬರೆದಿದ್ದ ಅನುರೂಪಳನ್ನು ಗದರಿಸಿದ್ದರು. ಅಧ್ಯಾಪಕರ ಮಗಳಾಗಿ ಈ ರೀತಿ ಮಾಡೋಕೆ ನಾಚಿಕೆಯಾಗಲ್ವ ಅಂತಾ ಬಸವಲಿಂಗಯ್ಯ ಗದರಿದ್ದರು ಎನ್ನಲಾಗಿದೆ.

ಇದರಿಂದ ಮನನೊಂದ ಅನುರೂಪ ಹಾಸ್ಟೇಲ್ ಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಿನ್ನೆ ಸಂಜಯೇ ಅನುರೂಒಪ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

Girl commit suicide after Teacher scold her in classroom

ದ್ವೀತಿಯ ವರ್ಷದ ಹಾರ್ಟಿಕಲ್ಚರ್ ವ್ಯಾಸಂಗ ಮಾಡುತ್ತಿದ್ದ ಮೃತ ವಿಧ್ಯಾರ್ಥಿನಿ ಅನುರೂಪ, ನೇಣು ಬಿಗಿಸುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios