ಶಿವಮೊಗ್ಗ ಕಾರ್ಗಲ್‌ ರಸ್ತೆಯಲ್ಲಿ 'ದೆವ್ವ' ಅಡ್ಡ ಬಂದು ಆಕ್ಸಿಡೆಂಟ್: ದೆವ್ವದ ಫೋಟೋ ವೈರಲ್!

ಶಿವಮೊಗ್ಗದ ಸಾಗರ ತಾಲೂಕಿನಲ್ಲಿ ಬೈಕ್ ಸವಾರರಿಗೆ ದೆವ್ವ ಅಡ್ಡ ಬಂದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆವ್ವದ ಫೋಟೋ ಸಹ ವೈರಲ್ ಆಗಿದೆ.

Ghost spotted in Shivamogga near Kargal road and photo goes viral sat

ಶಿವಮೊಗ್ಗ (ಅ.30): ರಾಜ್ಯದ ಮಲೆನಾಡು ಶಿವಮೊಗ್ಗದ ಸಾಗರ ತಾಲೂಕಿನ ಕಾರ್ಗಲ್ ಬಳಿಯ ಕಂಚಿಕೈ ರಸ್ತೆಯಲ್ಲಿ ಮಧ್ಯರಾತ್ರಿ ವೇಳೆ ಬೈಕ್‌ಗೆ ದೆವ್ವ ಅಡ್ಡ ಬಂದಿದ್ದು, ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಬೈಕ್‌ ಸವಾರರು ಭಯಗೊಂಡು ಬಿದ್ದಿದ್ದಾರೆ. ಇನ್ನು ದೆವ್ವದ ಫೋಟೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ತಾವು ಬೀಳಲು ಇದೇ ದೆವ್ವ ಕಾರಣವೆಂದು ಹೇಳಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಹೌದು, ಶಿವಮೊಗ್ಗದಲ್ಲಿ ದೆವ್ವದ ಪೋಟೋ ಸಾಮಾಜಿಕ ‌ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೀವನದಲ್ಲಿ ಎಂದಿಗೂ ದೆವ್ವವನ್ನು ನೋಡದೇ ಕೇವಲ ಕಾಲ್ಪನಿಕವಾಗಿ ಊಹಿಸಿಕೊಳ್ಳುತ್ತಿದ್ದ ಜನರಿಗೆ ದೆವ್ವ ಎಂದರೆ ಹೀಗಿರುತ್ತದೆಯೇ ಎಂದು ಭಯಭೀತರಾಗುತ್ತಿದ್ದಾರೆ. ಆದರೆ, ದೆವ್ವದ ಕುರಿತು ಸುಳ್ಳು‌ ಪ್ರಚಾರ ಮಾಡಿದರೆ ಕಾನೂನು ಕ್ರಮ, ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಪೊಲೀಸರ ಎಚ್ಚರಿಕೆ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ದೆವ್ವ ಕಾಣಿಸಿಕೊಂಡಿದೆ ಎಂಬ ಸುದ್ದಿ ಮಾತ್ರ ಕಾಡ್ಗಿಚ್ಚಿನಂತ ಹಬ್ಬುತ್ತಿದೆ.

ಇದನ್ನೂ ಓದಿ: ರಾಷ್ಟ್ರದ್ರೋಹಿ ಜಮೀರ್ ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು, ಅಪ್ಪಿತಪ್ಪಿ ಹಿಂದುಸ್ತಾನದಲ್ಲಿ ಹುಟ್ಟಿದ್ದಾನೆ: ಈಶ್ವರಪ್ಪ

ವೈರಲ್ ಆಗುತ್ತಿರುವ ಸುದ್ದಿಯ ಸಾರಾಂಶವೇನು?
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಕಂಚಿಕೈ ರಸ್ತೆಯಲ್ಲಿ ದೆವ್ವ ಅಡ್ಡ ಬಂದಿದೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ದೆವ್ವ ಅಡ್ಡ ಬಂದ ಪರಿಣಾಮ ಇಬ್ಬರು ಬೈಕ್ ಸವಾರರ ಸ್ಥಿತಿ ಚಿಂತಾಜನಕವಾಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಾಗು ವಿಡಿಯೋ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಟೋದಲ್ಲಿ ತೀವ್ರ ಗಾಯಗೊಂಡ ವ್ಯಕ್ತಿಯ ಚಿತ್ರವಿದೆ. ಅ.27ರ ರಾತ್ರಿ ಸಮಯದಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿಸಲಾಗಿದೆ. 

ಘಟನೆಯಲ್ಲಿ ಗಾಯಗೊಂಡ ಒಬ್ಬರನ್ನು ಮಣಿಪಾಲ್ ಆಸ್ಪತ್ರೆಗೆ ಹಾಗೂ ಮತ್ತೊಬ್ಬರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಲಾಗಿದೆ. ಆದರೆ, ಪೊಲೀಸ್ ಇಲಾಖೆ ಇದನ್ನು ಪರಿಶೀಲಿಸಿದ್ದು, ಇದು ಸುಳ್ಳು ಸುದ್ದಿ ಆಗಿದೆ. ಅಂತಹ ಯಾವುದೇ ಘಟನೆ ನಡೆದಿರುವುದಿಲ್ಲ. ಸಾರ್ವಜನಿಕರನ್ನು ಹೆದರಿಸಲು ಸುಳ್ಳು ಮಾಹಿತಿ ಹಂಚಿಕೊಳ್ಳುವುದು ಅಪರಾಧವಾಗಿದೆ. ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ‌ಇಲಾಖೆ ಎಚ್ಚರಿಕೆ ನೀಡಿದೆ.

Latest Videos
Follow Us:
Download App:
  • android
  • ios