Ballari: ವಿದ್ಯತ್ ಬಿಲ್ ಕೇಳಿದ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ: ₹ 9 ಸಾವಿರ ವಿದ್ಯುತ್ ಬಿಲ್ ಬಾಕಿ
ಹಲವು ತಿಂಗಳಿಂದ ಬೇಕಾಬಿಟ್ಟಿಯಾಗಿ ವಿದ್ಯುತ್ ಉಪಯೋಗಿಸಿ, ಮಾಸಿಕ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾನೆ. ಕರೆಂಟ್ ಬಿಲ್ ಪಾವತಿಸಿಕೊಳ್ಳಲು ಬಂದಿದ್ದ ಜೆಸ್ಕಾಂ ಅಧಿಕಾರಿಗಳ ಮೇಲೆ ಗ್ರಾಹಕನೊಬ್ಬ ಮನಸೋ ಇಚ್ಛೆ ಹಲ್ಲೆ ಮಾಡಿರುವುದು ಕಂಡುಬಂದಿದೆ.
![GESCOM staff assaulted asking for electricity bill 9 thousand Rs electricity bill pending sat GESCOM staff assaulted asking for electricity bill 9 thousand Rs electricity bill pending sat](https://static-gi.asianetnews.com/images/01gqpra6d3aq4e11p77mtpr2as/ballari_363x203xt.jpg)
ಬಳ್ಳಾರಿ (ಜ.26): ಕಳೆದ ಹಲವು ತಿಂಗಳಿಂದ ಬೇಕಾಬಿಟ್ಟಿಯಾಗಿ ವಿದ್ಯುತ್ ಉಪಯೋಗಿಸಿ, ಮಾಸಿಕ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾನೆ. ಕರೆಂಟ್ ಬಿಲ್ ಬರೋಬ್ಬರಿ 9 ಸಾವಿರ ರೂ.ಗೆ ತಲುಪಿದ್ದು, ಅದನ್ನು ಪಾವತಿಸಿಕೊಳ್ಳಲು ಬಂದಿದ್ದ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿ. (ಜೆಸ್ಕಾಂ) ಅಧಿಕಾರಿಗೆ ಗ್ರಾಹಕನೊಬ್ಬ ಮನಸೋ ಇಚ್ಛೆ ಹಲ್ಲೆ ಮಾಡಿರುವುದು ಕಂಡುಬಂದಿದೆ.
ರಾಜ್ಯದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗದಮ ವಿಭಾಗಗಳಿಂದ ಪ್ರಾದೇಶಿಕವಾಗಿ ಪ್ರತಿ ಮನೆ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿ, ವಿದ್ಯುತ್ ಬಳಸಿದ್ದಕ್ಕಾಗಿ ಮಾಸಿಕ ಬಿಲ್ ಪಾವತಿಸಿಕೊಳ್ಳಲಾಗುತ್ತದೆ. ಆದರೆ, ಬಳ್ಳಾರಿಯ ಮಿಲ್ಲರ್ ಪೇಟೆಯ ಮನೆಯೊಂದರಲ್ಲಿ ಜೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡು ಬೇಕಾಬಿಟ್ಟಿಯಾಗು ಉಪಯೋಗ ಮಾಡಿಕೊಂಡಿದ್ದಾನೆ. ಮಾಸಿಕವಾಗಿ ಪಾವತಿಸಬೇಕಾದ ಕರೆಂಟ್ ಬಿಲ್ ಅನ್ನು ಪಾವತಿಸದೇ ಬಾಕಿ ಉಳಿಸಿಕೊಂಡು ಒಂಭತ್ತು ಸಾವಿರ ರೂ. ಬಿಲ್ ಆಗುವರೆಗೂ ಸುಸ್ತಿದಾರ ಆಗಿದ್ದಾನೆ. ಈಗ ಹಣ ಕೇಳಲು ಬಂದ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ್ದಾನೆ.
Kodagu: ಮನೆ ಮಂಜೂರಾತಿಗೆ ತಡೆ: ಪಂಚಾಯಿತಿ ಅಧಿಕಾರಿಯನ್ನು ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು
ಬಿಲ್ ಪಾವತಿಸದೇ ಕಳ್ಳಾಟ: ಈ ಘಟನೆ ಬಳ್ಳಾರಿಯ ಮಿಲ್ಲರ್ ಪೇಟೆಯ ನಿವಾಸಿ ಗಿರೀಶ್ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯಾಗಿದ್ದಾನೆ. ಇನ್ನು ಜೆಸ್ಕಾಂ ಸಿಬ್ಬಂದಿ ಪರ್ವತೇಶ್ ಗೌಡನ ಹಲ್ಲೆಗೆ ಒಳಗಾಗಿದ್ದಾರೆ. ಹಲವು ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸದೇ ಬರೋಬ್ಬರಿ 9 ಸಾವಿರ ರೂ. ವಿದ್ಯುತ್ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದಾನೆ. ಈ ವೇಳೆ ವಿದ್ಯುತ್ ಬಿಲ್ ಪಾವತಿಯ ಗಡುವು ಮುಗಿದ ಹಿನ್ನೆಲೆಯಲ್ಲಿ ಜೆಸ್ಕಾಂ ಸಿಬ್ಬಂದಿ ಮನೆಯ ಬಳಿ ಬಂದು ಬಿಲ್ ಪಾವತಿಸಿಕೊಳ್ಳಲು ಮುಂದಾಗಿದ್ದಾರೆ. ಆಗ, ಮನೆಯ ಮಾಲೀಕ ಗಿರೀಶ್ ಇಲ್ಲದ ಕಾರಣ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಿ ಹೋಗಿದ್ದಾರೆ.
ಫ್ಯೂಸ್ ಕಿತ್ತು ಹೋದರೆ ಅನಧಿಕೃತ ಸಂಪರ್ಕ: ವಿದ್ಯುತ್ ಬಿಲ್ ಪಾವತಿಸದ ಕಾರಣಕ್ಕಾಗಿ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಫ್ಯೂಸ್ ಕಿತ್ತುಕೊಂಡು ಹೋಗುತ್ತಿದ್ದರು. ಆದರೆ, ಪುನಃ ಅಧಿಕಾರಿಗಳ ಕಣ್ಣು ತಪ್ಪಿಸಿ ಮನೆಯ ನಿವಾಸಿ ಗಿರೀಶ್ ಅಕ್ರಮವಾಗಿ ಮತ್ತೆ ಪ್ಯೂಸ್ ಸಂಪರ್ಕ ಮಾಡಿಕೊಂಡು ವಿದ್ಯುತ್ ಬಳಕೆ ಮಾಡುತ್ತಿದ್ದನು. ಮನೆಯ ನಿವಾಸಿ ಗಿರೀಶ್ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡುವುದನ್ನು ಕಂಡು ಇಬ್ಬರು ಜೆಸ್ಕಾಂ ಅಧಿಕಾರಿಗಳು ಆತನ ಮನೆಯ ಬಳಿ ಹೋಗಿದ್ದಾರೆ. ಬ್ಯಾಲೆನ್ಸ್ ಕ್ಲಿಯರ್ ಮಾಡುವಂತೆ ಕೇಳಿದಾಗ ಗಿರೀಶ್ ಕೆಂಡಾಮಂಡಲ ಆಗಿದ್ದಾನೆ.
Davanagere: ಹಣಕಾಸಿನ ಜಗಳ ಮಧ್ಯೆ ಪ್ರವೇಶಿಸಿದ ಪೊಲೀಸರ ಮೇಲೆ ಹಲ್ಲೆ: ಯುವತಿಯರು ಸೇರಿ ನಾಲ್ವರ ಬಂಧನ
ವಿದ್ಯುತ್ ಬಿಲ್ ಕೇಳಿದ್ದಕ್ಕೆ ಹಲ್ಲೆ: ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಬಿಲ್ ಪಾವತಿಸುವಂತೆ ಗಿರೀಶ್ ಅವರ ಮನೆಯ ಮುಂದೆ ಪಟ್ಟು ಹಿಡಿದು ಕೇಳಿದಾಗ, ಅವರೊಂದಿಗೆ ವಾಗ್ವಾದ ನಡೆಸಿದ್ದಾನೆ. ನಂತರ ಜೆಸ್ಕಾಂನ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಜೆಸ್ಕಾಂನ ಮೀಟರ್ ರೀಡರ್ ಸಿಬ್ಬಂದಿ ಪರ್ವತೇಶ್‌ಗೌಡ ಎಂಬುವವರ ಕಣ್ಣಿಗೆ ಗಿರೀಶ್ ಗುದ್ದಿದ್ದು, ಅವರ ಕಣ್ಣಿನ ಭಾಗ ಊದಿಕೊಂಡಿದೆ. ರಕ್ತಸ್ರಾವ ಉಂಟಾಗಿದೆ. ಇನ್ನು ಜೆಸ್ಕಾಂ ಅಧಿಕಾರಿ ನವೀನ್ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ತೀವ್ರ ರಕ್ತ ಸ್ರವಾವಾಗಿ ಉಂಟಾಗಿ ಬಳಲುತ್ತಿದ್ದ ಜೆಸ್ಕಾಂ ಸಿಬ್ಬಂದಿ ಪರ್ವತೇಶ್ ಗೌಡ ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬಳ್ಳಾರಿಯ ಬ್ರೂಸ್ ಪೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://static-gi.asianetnews.com/v1/images/left-arrow.png)
![](https://static-gi.asianetnews.com/v1/images/right-arrow.png)