ಗಂಗಾವತಿ: ಭೋಗಾಪುರೇಶ ಕೆರೆಗೆ ಗವಿ ಶ್ರೀಗಳಿಂದ ಬಾಗಿನ ಅರ್ಪಣೆ
ದೇವರು ಕೊಟ್ಟ ಬುದ್ದಿಯಿಂದ ಮನುಷ್ಯತ್ವ ಹೊಂದಬೇಕು. ಮನುಷ್ಯನಿಗೆ ಬದುಕಿಗೆ ಬೆಲೆ ಬರಬೇಕಾದರೆ ಉತ್ತಮ ಗುಣ ತುಂಬಿರಿ ಎಂದ ಗವಿಸಿದ್ದೇಶ್ವರ ಮಹಾಸ್ವಾಮೀಜಿ.
ರಾಮಮೂರ್ತಿ ನವಲಿ
ಗಂಗಾವತಿ(ಮಾ.31): ಸಮೀಪದ ನವಲಿ ಶ್ರೀ ಭೋಗಾಪುರೇಶ ದೇವಸ್ಥಾನದ ಆವರಣದಲ್ಲಿರುವ ನೂತನ ಕೆರೆಗೆ ಕೊಪ್ಪಳ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಬಾಗಿನ ಅರ್ಪಿಸಿದರು.
ನಂತರ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದ ಶ್ರೀಗಳು, ದೇವರ ಕೊಟ್ಟ ಕೈ ಒಳ್ಳೆದಕ್ಕೆ ಬಳಸಬೇಕು. ಕೆಟ್ಟದಕ್ಕೆ ಉಪಯೋಗಿಸಬಾರದು. ವಿಶೇಶ್ವರಯ್ಯ ನಂತವರು ತಮ್ಮ ಬುದ್ದಿಯಿಂದ ಕಂನ್ನಂಬಾಡಿ ಆಣೆಕಟ್ಟು ನಿರ್ಮಿಸಿದರು. ಯುವಕರು ದುಶ್ಚಟಗಳಿಗೆ ಬಲಿಯಾಗದೇ ಒಳ್ಳೆಯ ಹವ್ಯಾಸಗಳಿಗೆ ಮಾರು ಹೋಗಿರಿ ಎಂದರು. ದೇವರು ಕೊಟ್ಟ ಬುದ್ದಿಯಿಂದ ಮನುಷ್ಯತ್ವ ಹೊಂದಬೇಕು. ಮನುಷ್ಯನಿಗೆ ಬದುಕಿಗೆ ಬೆಲೆ ಬರಬೇಕಾದರೆ ಉತ್ತಮ ಗುಣ ತುಂಬಿರಿ ಎಂದರು.
ಗಂಗಾವತಿ: ಭೋಗಾಪುರೇಶ ನೂತನ ಕೆರೆಗೆ ಗವಿಶ್ರೀ, ಮಂತ್ರಾಲಯ ಶ್ರೀಗಳಿಂದ ಬಾಗಿನ ಅರ್ಪಣೆ
ನಂತರ ಶ್ರಿಗಳಿಗೆ ಶ್ರೀಭೋಗಾಪುರೇಶ ಕೆರೆ ಅಭಿವೃದ್ಧಿ ಸಮಿತಿ ಮತ್ತು ಗ್ರಾಮ ಪಂಚಾಯಿತಿಯಿಂದ ಸನ್ಮಾನಿಸಿ ಗೌರವಿಸಿದರು. ಇದಕ್ಕಿಂತ ಪೂರ್ವದಲ್ಲಿ ಶ್ರೀಭೋಗಾಪುರೇಶ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ದಡೇಸೂಗೂರು, ಮಾಜಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಡಾ.ಸಿ.ಮಹಾಲಕ್ಷ್ಮೀ ಕೇಸರಹಟ್ಟಿ ಸಂಗಡಿಗರಿಂದ ದಾಸವಾಣಿ, ವಚನ ಗಾಯನ ಪ್ರಸ್ತುತ ಪಡಿಸಿದರು.