ಬೆಂಗಳೂರು(ಫೆ. 04)   ಬೆಂಗಳೂರಿನ ಮಲ್ಲೇಶ್ವರ 7 ನೇ ಅಡ್ಡರಸ್ತೆಯಲ್ಲಿ ಗ್ಯಾಸ್ ಸೋರಿಕೆಯಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿ ಪರಿಹಾರ ಕಾರ್ಯದಲ್ಲಿ ತೊಡಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡಿದ್ದರಿಂದ ಭಾರೀ ದುರಂತ ತಪ್ಪಿದೆ.

ಗ್ಯಾಸ್ ಸೋರಿಕೆಯಾಗುತ್ತಿರುವುದು ತಿಳಿದ ತಕ್ಷಣ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಭಾರೀ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗುತ್ತಿರುವುದು ಗೊತ್ತಾಗಿದೆ. ಜಿಜಿಎಲ್ ಪೈಫ್ ಲೈನ್‌ನಿಂದ ಹೊರ ಬರುತ್ತಿರೋ ಗ್ಯಾಸ್ ವಿಚಾರ ಗೊತ್ತಾದ ತಕ್ಷಣ ಸುತ್ತಮುತ್ತಲೂ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು.

ರಸ್ತೆಯಲ್ಲಿ ಹಾಕಿದ್ದ ವಾಲ್ ಕಟ್ಟ್ ಆಗಿದ್ದು ಗ್ಯಾಸ್ ಸೋರಿಕೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಲೀಕ್ ಆಗ್ತಿದ್ದ ಜಾಗ ಗುರುತಿಸಿದ ಸಿಬ್ಬಂದಿ ಸೋರಿಕೆಯನ್ನು ತಕ್ಷಣ ಬಂದ್ ಮಾಡಿದ್ದಾರೆ. ಗ್ಯಾಸ್ ಪೈಪ್ ಲೈನ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ನಂತರ ಇನ್ನಷ್ಟು ಮಾಹಿತಿ ಗೊತ್ತಾಗಲಿದೆ.