ರಾಮ​ನ​ಗರ [ಅ.06]: ಡ್ರಾಪ್‌ ಮಾಡುವ ನೆಪ​ದಲ್ಲಿ ಅಮಾಯಕರ ಸುಲಿಗೆ ಮಾಡು​ತ್ತಿದ್ದ ಮೂವರು ಖದೀಮರ ಗ್ಯಾಂಗ್‌ ಅನ್ನು ಬಿಡದಿ ಠಾಣೆ ಪೊಲೀ​ಸರು ಬಂಧಿ​ಸಿ​ದ್ದಾರೆ. 

ಬೆಂಗ​ಳೂರಿನ ಚಂದ್ರ​ಲೇ​ಔಟ್‌ ನಿವಾಸಿ ಸಲೀಂ ಪಾಷ, ಓಕ​ಳಿ​ಪುರಂ ನಿವಾಸಿ ಅಬ್ದುಲ್‌ ಸುಲೆ​ಮಾನ್‌, ಪಶ್ಚಿಮ ಬಂಗಾಳ ಮೂಲದ ರಾಜೇಶ್‌ ರಾಯ್‌ ಬಂಧಿತರು. 

ಬೆಂಗ​ಳೂರಿನ ಸಿದ್ದಾ​ಪುರ, ಜಯ​ನ​ಗರ, ಬ್ಯಾಟ​ರಾ​ಯ​ನ​ಪುರ ಠಾಣೆ ವ್ಯಾಪ್ತಿ​ಯಲ್ಲಿ ಮಾಡಿದ್ದ ದರೋಡೆ ಪ್ರಕ​ರ​ಣಗಳಲ್ಲಿ ಬಂಧಿಸಲ್ಪಟ್ಟಿದ್ದ ಇವರು ಜಾಮೀ​ನಿನ ಮೇಲೆ ಹೊರ ಬಂದ ನಂತರವೂ ದರೋಡೆ, ಸುಲಿಗೆ ಮಾಡು​ತ್ತಿ​ದ್ದರು. ಬಿಡದಿ ಮತ್ತು ಸಂಪಿ​ಗೆ​ಹಳ್ಳಿ ಪೊಲೀಸ್‌ ಠಾಣೆ​ಯ​ಲ್ಲಿ​ಯೂ ಇವರ ವಿರುದ್ಧ ಪ್ರಕ​ರ​ಣ​ಗಳು ದಾಖ​ಲಾ​ಗಿ​ವೆ.

ಆರೋಪಿಗಳು ಶನಿವಾರ ಬೆಳ​ಗಿನ ಜಾವ ನಾಗ​ರಾಜ್‌ ಎಂಬುವರನ್ನು ಕೆ.ಆರ್‌.ಪು​ರಂನಿಂದ ಅಪ​ಹ​ರಿಸಿ ಕಾರಿ​ನ​ಲ್ಲಿ ಹೊರ​ಟಿದ್ದಾಗ ಬಿಡ​ದಿಯ ಬೈರ​ಮಂಗಲ ಕ್ರಾಸ್‌ ಚೆಕ್‌ಪೋಸ್ಟ್‌ನಲ್ಲಿ ಬಳಿ ಬಿಡದಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.