Ganeshotsav 2022: ಹುಬ್ಬಳ್ಳಿ ಈದ್ಗಾ‌ ಮೈದಾನದಲ್ಲಿ ಕೇಸರಿ ಕಲರವ: 3 ದಿನದ ಗಣೇಶೋತ್ಸವಕ್ಕೆ ಅದ್ಧೂರಿ ತೆರೆ..!

ಈ ಬಾರಿಯ ಗಣೇಶೋತ್ಸವ ಯಶಸ್ವಿಯಾಗಿದೆ. ಲಕ್ಷಾಂತರ ಜನರ ಭಕ್ತಿ ಭಾವನೆಗಳಿಗೆ ಸರ್ಕಾರ, ಕೋರ್ಟ್, ಮೇಯರ್ ಈ ಕಾರ್ಯ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಹಿಂದೂಪರ ಸಂಘಟನೆಗಳಿಂದ ಧನ್ಯವಾದ ಅಭಿನಂದನೆಗಳು: ಮುತಾಲಿಕ್‌ 

Ganeshotsav Successfully in Hubballi Idgah Maidan Says Pramod Mutalik grg

ಹುಬ್ಬಳ್ಳಿ(ಸೆ.02): ಐತಿಹಾಸಿಕವಾದ ಈದ್ಗಾ ಮೈದಾನದ ಗಣೇಶೋತ್ಸವ ಅತ್ಯಂತ ಯಶಸ್ವಿಯಾಗಿ ನೇರವೇರಿದೆ. ವಿರೋಧಿಗಳು ಎಷ್ಟೇ ಅಡ್ಡಿ ಮಾಡಲು ತಂತ್ರ ರೂಪಿಸಿದರು ಗಣೇಶನ ಆರ್ಶೀವಾದ ನಮಗೆ ಸಿಕ್ಕಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ‌

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾದ ಗಣೇಶ ಮೂರ್ತಿಯ ವಿಸರ್ಜನೆ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಈ ವರ್ಷದ ಮೂರು ದಿನದ ಗಣೇಶೋತ್ಸವ ಕಾರ್ಯಕ್ರಮ ಹಿಂದೂ ಸಂಘಟನೆಗಳು, ಎಲ್ಲ ಗಣೆಶ ಮಂಡಳಿಗಳ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿದೆ.‌ ಲಕ್ಷಾಂತರ ಜನರ ಭಕ್ತಿ ಭಾವನೆಗಳಿಗೆ ಸರ್ಕಾರ, ಕೋರ್ಟ್, ಮೇಯರ್ ಈ ಕಾರ್ಯ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಹಿಂದೂಪರ ಸಂಘಟನೆಗಳಿಂದ ಧನ್ಯವಾದ ಅಭಿನಂದನೆಗಳು ಎಂದರು.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶನ ದರ್ಶನ ಪಡೆದ ಮುಸ್ಲಿಂ ಕುಟುಂಬ

ಈದ್ಗಾ ಮೈದಾನದಲ್ಲಿ ಈ ಬಾರಿ ಮೂರೇ ದಿನ ಕಾರ್ಯಕ್ರಮ ಮಾಡಲಾಗಿದೆ. ಮುಂದೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಕಾರ್ಯಕ್ರಮ ಮಾಡೋಣ. ವಿರೋಧಿಗಳು ಇದನ್ನು ತಡೆಯಲು ಹಲವಾರು ತಂತ್ರಗಳನ್ನು ರೂಪಿಸಿದರು. ಆದರೂ ಗಣೇಶ ನಮಗೆ ಬಲ ಕೊಟ್ಟು ಯಾವ ಶಕ್ತಿ ತಡೆಯಲು ಬಿಡಲಿಲ್ಲ. ಹೀಗಾಗಿ ನಮಗೆ ಗಣೇಶನ ಆರ್ಶೀವಾದ ದೊರೆತಿದೆ ಎಂದರು.

ನಾವು 75 ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಇದ್ದೇವಿ. ಆದರೆ ನಮ್ಮ ನೆಲದಲ್ಲಿ ಗಣೇಶೋತ್ಸವ ಆಚರಣೆ ಮಾಡಲು ನ್ಯಾಯಾಲಯದ ಕಟ್ಟೆಗೆ ಹೋಗಬೇಕು. ಇದೀಗ ಹಿಂದೂಗಳು ಒಂದಾಗಿದ್ದೇವೆ. ಇದಕ್ಕೆ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ನಡೆದ ಗಣೇಶೋತ್ಸವ ಸಾಕ್ಷಿ. ಈವರೆಗೆ ಎಲ್ಲ ಶಾಂತಿಯಿಂದ ಗಣೇಶ ಚತುರ್ಥಿ ಆಚರಣೆ ಮಾಡಿದ್ದೇವೆ ಅದರಂತೆ ವಿಸರ್ಜನೆ ಕಾರ್ಯಕ್ರಮವನ್ನು ಶಾಂತಿಯಿಂದ ನೇರವೇರಿಸೋಣ ಎಂದು ಪ್ರಮೋದ್ ಮುತಾಲಿಕ್ ಮನವಿ ಮಾಡಿದರು.

ಮುರುಘ ಶ್ರೀ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕ್ರಮ

ಇನ್ನು ಚಿತ್ರದುರ್ಗದ ಮುರುಘಾಮಠದ ಶರಣರ ಬಂಧನದ ಕುರಿತು ಮಾತನಾಡಿದ ಅವರು, ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಶ್ರೀಗಳ ಕಡೆಯವರು ಇದೊಂದು ಷಢ್ಯಂತ್ರ ಅಂತಾರೆ. ಸಂತ್ರಸ್ತರ ಕಡೆಯವರು ಪ್ರಕರಣ ದಾಖಲಿಸಿದ್ದಾರೆ. ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ ಎಂದರು.
 

Latest Videos
Follow Us:
Download App:
  • android
  • ios