Chikkamagaluru: ಹತ್ತಾರು ವರ್ಷಗಳಿಂದಿದ್ದ ಈಚಲು ಮರದಲ್ಲಿ ವಿಘ್ನೇಶ್ವರ ಪ್ರತ್ಯಕ್ಷ
ವಿಘ್ನ ನಿವಾರಕ ಗಣೇಶ ಎಲ್ಲಾ ಕಡೆ ಇದ್ದಾನೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ವಿಘ್ನೇಶ್ವರ ಈಚಲು ಮರದಲ್ಲೂ ಉದ್ಭವನಾಗಿದ್ದಾನೆ. ಜನಮರುಳೋ... ಜಾತ್ರೆ ಮರುಳೋ ಎಂಬಂತೆ ಈಚಲು ಮರದ ಗಣಪನಿಗೆ ಭಕ್ತರು ಪೂಜೆ ಮಾಡಿ, ಕೈಮುಗಿಯುತ್ತಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜೂ.25): ವಿಘ್ನ ನಿವಾರಕ ಗಣೇಶ ಎಲ್ಲಾ ಕಡೆ ಇದ್ದಾನೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ವಿಘ್ನೇಶ್ವರ ಈಚಲು ಮರದಲ್ಲೂ ಉದ್ಭವನಾಗಿದ್ದಾನೆ. ಜನಮರುಳೋ... ಜಾತ್ರೆ ಮರುಳೋ ಎಂಬಂತೆ ಈಚಲು ಮರದ ಗಣಪನಿಗೆ ಭಕ್ತರು ಪೂಜೆ ಮಾಡಿ, ಕೈಮುಗಿಯುತ್ತಿದ್ದಾರೆ.
ಈಚಲು ಮರದ ಬುಡದಲ್ಲಿ ವಿಘ್ನ ನಿವಾರಕ: ಚಿಕ್ಕಮಗಳೂರು ನಗರದ ಶಂಕರಪುರ ಬಡಾವಣೆಯ ಹೊರವಲಯದಲ್ಲಿ ಈಚಲು ಮರವೊಂದು ಇದೆ. ಇದಕ್ಕೆ ಇಲ್ಲಿನ ಜನರು ಅಷ್ಟೇನು ಮಹತ್ವವನ್ನು ನೀಡಿರಲಿಲ್ಲ, ಆದ್ರೆ ಕಳೆದ ಒಂದು ವಾರದಿಂದ ಪವಾಡ ಎನ್ನುವಂತೆ ವಿಘ್ನೇಶ್ವರ ಈ ಮರದಲ್ಲಿ ಪ್ರತ್ಯಕ್ಷನಾಗಿದ್ದಾನೆ. ಹತ್ತಾರು ವರ್ಷಗಳಿಂದಿದ್ದ ಈಚಲು ಮರದಲ್ಲಿ ಏನೂ ವಿಶೇಷತೆ ಇರಲಿಲ್ಲ. ಆದ್ರೆ, ಸಾಮಾನ್ಯವಾಗಿದ್ದ ಮರದಲ್ಲೀಗ ವಿಘ್ನ ನಿವಾರಕ ವಿಘ್ನೇಶ್ವರ ಪ್ರತ್ಯಕ್ಷನಾಗಿ ಬಿಟ್ಟಿದ್ದಾನೆ.ಈ ಈಚಲು ಮರದಲ್ಲಿ ಮೂಡಿರೋ ಉದ್ಭವ ಗಣಪತಿಗೆ ಇಲ್ಲಿನ ಜನರು ಇದೀಗ ಜನಮರುಳೋ... ಜಾತ್ರೆ ಮರುಳೋ ಎಂಬಂತೆ ಈಚಲು ಮರದ ಗಣಪನಿಗೆ ಪೂಜೆ ಮಾಡಿ, ಭಕ್ತರು ಕೈಮುಗಿಯುತ್ತಿದ್ದಾರೆ.
Chikkamagaluru; 30 ವರ್ಷಗಳ ದೀರ್ಘಕಾಲದ ಸಮಸ್ಯೆಗೆ ಕೇವಲ 7 ದಿನಗಳಲ್ಲಿ ಪರಿಹಾರ!
ದೂರದಿಂದ ನೋಡಿದರೆ ಅದೊಂದು ಮಾಮೂಲಿ ಮರ ಅಷ್ಟೆ. ಹತ್ತಿರ ಹೋಗಿ ನೋಡಿದ್ರೆ ಬುಡದಲ್ಲಿ ವಿಘ್ನ ನಿವಾರಕ ಆಕಾರ ಮೂಡಿದೆ. ಈಚಲು ಮರದಲ್ಲಿ ಉದ್ಭವವಾಗಿರೋ ಗಣಪನನ್ನ ಕಂಡು ಎಲ್ಲರೂ ಮೂಕವಿಸ್ಮಿತರಾಗಿದ್ದಾರೆ. ಗಣಪನನೇ ಹೋಲುವ ಸೊಂಡಿಲು, ಕಣ್ಣು, ಕೈಗಳು, ದೇಹ ಎಲ್ಲವನ್ನೂ ಕಂಡ ಜನ ಈಚಲು ಮರದಲ್ಲಿ ಗಣಪ ದರ್ಶನ ಕೊಟ್ಟಿರುವುದನ್ನ ಕಂಡು ಸಂತಸಗೊಂಡು ಎಲ್ಲರಿಗೂ ಹೇಳುತ್ತಿದ್ದಾರೆ. ವಿಷಯ ತಿಳಿದವರು ಎಲ್ಲರೂ ಬಂದು ಈ ಈಚಲು ಮರದ ಗಣಪನನ್ನ ನೋಡಿ ಕೈಮುಗಿದು ಬೇಡಿಕೊಳ್ತಿದ್ದಾರೆ ಎಂದು ಸ್ಥಳೀಯರಾದ ಬಂಗಾರು ರಮೇಶ್ ಅಭಿಪ್ರಾಯಿಸಿದ್ದಾರೆ.
ಈಚಲು ಮರದ ಗಣಪನಿಗೆ ಭಕ್ತರಾಗಿರುವ ಜನರು: ನಗರದಲ್ಲಿ ನಾಲ್ಕೈದು ಗಣಪತಿ ದೇವಸ್ಥಾನಗಳಿದ್ದರೂ ಕೂಡ ಎಲ್ಲವೂ ಪಶ್ಚಿಮ ದಿಕ್ಕಿಗೆ ಮುಖ ಮಾಡಿವೆ. ಆದರೆ, ಈ ಈಚಲು ಮರದ ಉದ್ಭವ ಗಣಪತಿ ಪೂರ್ವ ದಿಕ್ಕಿಗೆ ಮುಖ ಮಾಡಿ ಹುಟ್ಟಿರೋದು ಸ್ಥಳೀಯರು ಹಾಗೂ ಆಸ್ತಿಕರ ತೀವ್ರ ತರವಾದ ಭಕ್ತಿಗೆ ಕಾರಣವಾಗಿದೆ. ಹೊಲದಲ್ಲಿರುವ ಈಚಲು ಮರದಲ್ಲಿ ಗಣೇಶ ದರ್ಶನ ಕೊಟ್ಟಿರುವುದು ಸ್ಥಳೀಯರಿಗೆ ಅಚ್ಚರಿ ತಂದಿದೆ. ಗಣೇಶನಿಗೆ ಕೈ ಮುಗಿಯಬೇಕು ಅಂತ ದೇವಸ್ಥಾನ ಹುಡುಕಿಕೊಂಡು ಹೋಗುತ್ತಿದ್ದವರಿಗೆ ಇದೀಗ ಈಚಲು ಮರದ ಗಣೇಶನ ಸ್ಥಳ ಅಚ್ಚರಿ ಜೊತೆಗೆ ಸಂತಸ ತಂದಿದೆ.
Chikkamagaluru ಕಾಮಗಾರಿ ನಡೆಸದೇ ಬಿಲ್ ಪಾಸ್ ,ಕೆರೆ ಅಭಿವೃದ್ಧಿಯಲ್ಲಿ ಗೋಲ್ಮಾಲ್
ಕಂಪ್ಲೀಟ್ ಗಣೇಶನನ್ನೇ ಹೋಲುವ ಮೂರ್ತಿಯನ್ನ ನೋಡಿ ಜನ ನಾ ಮುಂದು-ತಾ ಮುಂದು ಅಂತ ಗಣಪನಿಗೆ ಪೂಜೆ ಸಲ್ಲಿಸಿ ಬೇಡಿಕೊಳ್ತಿದ್ದಾರೆ. ಒಟ್ಟಾರೆ, ಕೆಲ ವರ್ಷಗಳ ಹಿಂದೆ ಗಣಪ ಹಾಲು ಕುಡಿಯುತ್ತಿದ್ದಾನೆ. ಕಣ್ಣನ್ನ ಮುಚ್ಚಿ-ಬಿಡುತ್ತಿದ್ದಾನೆ ಅಂತೆಲ್ಲಾ ಭಕ್ತರು ಮಾತನಾಡಿಕೊಳ್ತಿದ್ರು. ಇದೀಗ ಈಚಲು ಮರದಲ್ಲಿ ಗಣಪನನ್ನೇ ಹೋಲುವ ಆಕೃತಿ ಪತ್ತೆಯಾಗಿದ್ದು, ಸ್ಥಳೀಯರು ದಿನನಿತ್ಯ ಪೂಜೆ-ಪುನಸ್ಕಾರ ಮಾಡಿ ನಮಿಸುತ್ತಿದ್ದಾರೆ.