ಕೈಗೆ ಬಂದ ಹೆಸರು ಬೆಳೆ: ಖರೀದಿ ಕೇಂದ್ರ ಆರಂಭಿಸುವಂತೆ ರೈತರ ಒತ್ತಾಯ
ರೈತರು ಬೆಳೆದ ಬೆಳೆ ಬಹುತೇಕ ಹೆಸರು ಹಳದಿ ರೋಗಕ್ಕೆ ತುತ್ತಾಗಿದೆ.. ಕಪ್ಪುಗಟ್ಟಿದ ಪೈರಲ್ಲಿ ಅಷ್ಟಿಷ್ಟು ಕಾಳ ಬಂದಿದೆ.. ಅಳಿದುಳಿದ ಬೆಳೆಯಲ್ಲೇ ಕಾಳು ಮಾಡಿ ರೈತ್ರು ರಾಶಿ ಮಾಡಿಕೊಂಡಿದ್ದಾರೆ. ಸರ್ಕಾರ ಖರೀದಿ ಕೇಂದ್ರ ತೆರೆಯುವಂತೆ ರೈತರು ಒತ್ತಾಯಿಸಿದ್ದಾರೆ.
ಗದಗ (ಆ.16) : ಹೆಸರು ಬೆಳೆದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇನ್ನೇನು ಕಟಾವಿಗೆ ಬಂದ್ದಿದ್ದ ಹೆಸರು ಬೆಳೆ ನಿರಂತರ ಮಳೆಯಿಂದಾಗಿ ನಾಶವಾಗಿದೆ. ಅಲ್ಪಸ್ವಲ್ಪ ಬೆಳೆ ಕಟಾವಾಗಿ ಮಾರುಕಟ್ಟೆಗೆ ಬಂದಿದೆ. ಆದ್ರೆ, ಮಾರುಕಟ್ಟೆಯಲ್ಲೂ ಸಹ ಬೆಂಬಲ ಬೆಲೆಗಿಂತ ಬೆಲೆಗೆ ಹೆಸರು ಖರೀದಿ ಮಾಡ್ಲಾಗ್ತಿದೆ.. ಹೀಗಾಗಿ ಕೇಂದ್ರ ಆರಂಭಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ.
Chitradurga ರಾಗಿ ಖರೀದಿ ಕೇಂದ್ರ ಬಂದ್ ನಿಂದ ರೈತರು ಕಂಗಾಲು
ಗದಗ(Gadag) ಜಿಪ್ಲೆಯಲ್ಲಿ ಬೆಳೆದ ಬೆಳೆದ ಬಹುತೇಕ ಹೆಸರು ಹಳದಿ ರೋಗಕ್ಕೆ ತುತ್ತಾಗಿದೆ.. ಕಪ್ಪುಗಟ್ಟಿದ ಪೈರಲ್ಲಿ ಅಷ್ಟಿಷ್ಟು ಕಾಳ ಬಂದಿದೆ.. ಅಳಿದುಳಿದ ಬೆಳೆಯಲ್ಲೇ ಕಾಳು ಮಾಡಿ ರೈತ್ರು ರಾಶಿ ಮಾಡಿಕೊಂಡಿದ್ದಾರೆ. ಗದಗ ಜಿಲ್ಲೆಯಾದ್ಯಂತ ಸದ್ಯ ಇದೇ ದೃಶ್ಯ ಕಂಡು ಬರುತ್ತಿದೆ. ಕೃಷಿ ಕಾಯಕವನ್ನೇ ನಂಬಿ ಜೀವನ ನಡೆಸೋ ರೈತವರ್ಗಕ್ಕಂತೂ ಪ್ರಕೃತಿ ವಿಕೋಪ ಆಶಾಭಾವನೆಯನ್ನೇ ಕಸಿದುಕೊಂಡಿದೆ.
ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಗೆ ಗದಗ ತಾಲೂಕಿನ ಸಾವಿರಾರು ಎಕರೆಯಲ್ಲಿ ಬೆಳೆದ ಹೆಸರು ಬೆಳೆ ನಾಶವಾಗಿ ಅಲ್ಪಸ್ವಲ್ಪ ಬೆಳೆ ಕೈಗೆ ಬಂದಿದೆ. ಮಳೆ ಮಧ್ಯೆ ರೈತ್ರು ರಾಶಿ ಕಾರ್ಯದಲ್ಲಿ ನಿರತರಾಗಿದ್ದಾರೆ.. ಸರಿಯಾದ ಸಮಯದಲ್ಲಿ ಖರೀದಿ ಕೇಂದ್ರ ತೆರೆದ್ರೆ ರೈತರಿಗೆ ಅನುಕೂಲವಾಗಲಿದೆ.. ಇಲ್ಲವಾದಲ್ಲಿ ರೈತ್ರು ದಲ್ಲಾಳಿಗಳಿಗೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಲಿದೆ..
ಜಿಲ್ಲೆಯಲ್ಲಿ 3.17 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶ ಇದೆ.. 1.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದ್ದು, ಅಂದಾಜು 79 ಸಾವಿರ ಹೆಕ್ಟೇರ್ ಹೆಸರು ಬೆಳೆ ಮಳೆಯಿಂದ ನಾಶವಾಗಿದೆ. ಹೆಸರು ಬೆಳೆಗೆ ಹಳದಿ ರೋಗ ಅಂಟಿಕೊಂಡ ಪರಿಣಾಮ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಹೆಸರಿಗೆ 4500 ರೂಪಾಯಿಗೆ ಮಾರಾಟವಾಗುತ್ತಿದೆ. ಸರಕಾರದ 7250 ರೂಪಾಯಿ ಬೆಬಲ ಬೆಲೆ ಘೋಷಣೆ ಮಾಡಿದೆ.. ಇರುವುದರಿಂದ ಆದಷ್ಟು ಬೇಗ ಖರೀದಿ ಕೆಂದ್ರ ತೆರೆಯಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ.. ಆದಷ್ಟು ಬೇಗ ಖರೀದಿ ಕೇಂದ್ರ ಆರಂಭ ಮಾಡ್ತೀನಿ ಅಂತಾ ಹೇಳ್ತಿದ್ದಾರೆ..
ಧಾರವಾಡ ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಹಾನಿ: ಸಚಿವ ಹಾಲಪ್ಪ ಭೇಟಿ
ಒಂದೆಡೆ ಮಳೆ, ಇನ್ನೊಂದೆಡೆ ಬೆಲೆ ಕುಸಿತ, ಮತ್ತೊಂದೆಡೆ ಖರೀದಿ ಕೇಂದ್ರ ಇಲ್ಲವಾದ್ದರಿಂದ ಹೆಸರು ಬೆಳೆದ ರೈತರ ಸ್ಥಿತಿ ತೀರಾ ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ಜಿಲ್ಲಾಡಳಿತ ಮುತುವರ್ಜಿ ವಹಿಸಿ ಖರೀದಿ ಕೇಂದ್ರ ಆರಂಭಿಸಿದ್ರೆ ರೈತರಿಗೆ ಒಳಿತಾಗಲಿದೆ.