Gadag; ಸಭೆಯಲ್ಲೇ ಗಳಗಳನೇ ಅತ್ತ ನಗರಸಭೆ ಅಧ್ಯಕ್ಷೆ! 

ನಿಮಗೆ ಎಷ್ಟು ಜನ ಪಿಎಗಳು ಅಂತಾ ಕೇಳಿದ್ದಕ್ಕೆ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷ ಅಸಾದರ್ ಅವರು ಸಭೆಯಲ್ಲೇ ಗಳಗಳನೆ ಅತ್ತ ಘಟನೆ ನಡೆದಿದೆ.

Gadag Betageri Municipality president  cried  in the meeting gow

ಗದಗ (ಜು.6): ನಿಮಗೆ ಎಷ್ಟು ಜನ ಪಿಎಗಳು ಅಂತಾ ಕೇಳಿದ್ದಕ್ಕೆ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷ ಅಸಾದರ್ ಅವರು ಸಭೆಯಲ್ಲೇ ಗಳಗಳನೆ ಅತ್ತ ಘಟನೆ ನಡೆದಿದೆ. ಉಷಾ ದಾಸರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಗರಸಭೆಯ ವಿಶೇಷ ಸಾಮಾನ್ಯ ಸಭೆ ನಡೀಯಿತು. ನಿಗದಿಯಂತೆ ಸಭೆಯಲ್ಲಿ, ಸ್ಥಾಯಿ ಸಮೀತಿ ಆಯ್ಕೆ ಹಾಗೂ ನಗರಸಭೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಹೈಸ್ಕೂಲ್ ಸಮಿತಿ ಸದಸ್ಯರ ಆಯ್ಕೆ ಮಾಡುವ ಕುರಿತು ಚರ್ಚೆ ಮಾಡ್ಬೇಕಿತ್ತು.  

ಆರಂಭದಲ್ಲೇ ಆಕ್ಷೇಪವ್ಯಕ್ತ ಪಡಿಸಿದ ವಿರೋಧ ಪಕ್ಷದ ನಾಯಕ ಎಲ್ ಡಿ ಚೆಂದಾವರಿ, ಸಭೆ ನೋಟಿಸ್ ನಲ್ಲಿ ಎಷ್ಟು ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ಎಂಬ ಬಗ್ಗೆ ಪ್ರಸ್ತಾಪ ಮಾಡಿಲ್ಲ ಅಂತಾ ಮಾತು ಆರಂಭಿಸಿದ್ರು. ನಂತ್ರ ಸಫಾಯಿ ಕರ್ಮಚಾರಿಗಳ ಬಿಲ್ ಸಹಿ ಮಾಡದೆ ವಿಳಂಭದೋರಣೆ ತಾಳಿದ ಅಧ್ಯಕ್ಷರ ನಡೆಯನ್ನ ಚಂದಾವರಿ ಪ್ರಶ್ನಿಸಿದ್ರು. ಮುಂದುವರೆದು ನಿಮಗೆಷ್ಟು ಪಿಎ ಗಳಿದ್ದಾರೆ ಅಂತಾ ಚೇಡಿಸಿದ್ರು.

ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಮುಗಿಸಿ ತೆರಳುವಾಗ ನಿಡಸೋಸಿ ಮಠದ ಸ್ವಾಮೀಜಿ ಕಾರು ಅಪಘಾತ

ಸಿಎಂ ಬೊಮ್ಮಾಯಿಗೂ ನಿಮಷ್ಟು ಪಿಎಗಳಿಲ್ಲ ಅಂತಾ ಕಿಚಾಯಿಸಲು ಮುಂದಾದ್ರು. ಇದ್ರಿಂದ ವಿಚಲಿತರಾದ ಅಧ್ಯಕ್ಷೆ ಉಷಾ ದಾಸರ್ ಗಳಗಳನೆ ಅತ್ತು ಸಭಾ ತ್ಯಾಗಕ್ಕೂ ಮುಂದಾಗಿದ್ರು.  ಆದ್ರೆ, ಸಭೆಯಲ್ಲಿದ್ದ ಬಿಜೆಪಿ ಸದಸ್ಯರು ಅಧ್ಯಕ್ಷರನ್ನ ಸಂತೈಸೋದಕ್ಕೆ ಮುಂದಾದ್ರು.. ಉತ್ತರ ಕೊಡೋಣ ಸಭಾತ್ಯಾಗ ಮಾಡಬೇಡಿ ಅಂತಾ ಮನವೊಲಿಸಿದ್ರು. 

ಚರ್ಚೆ ವಿಚಾರ ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳಬೇಡಿ..!
ಸಭೆಯಲ್ಲಿ ಮಹಿಳೆಯರ ಬಗ್ಗೆ ಗೌರವ ಇದೆ.. ನಗರಸಭೆಯ ಕಡತಗಳನ್ನ ಸರ್ಕಾರೇತರ ವ್ಯಕ್ತಿಗಳು ನೋಡಲು ಬರಲ್ಲ. ನಗರಸಭೆ ವತಿಯಿಂದ ಪಿಎ ನೇಮಿಸಿಕೊಳ್ಳಬಹುದು ಅಂತಾ ವಿರೋಧ ಪಕ್ಷದ ನಾಯಕ ಎಲ್ ಡಿ ಚೆಂದಾವರಿ ಸಲಹೆ ನೀಡಿದ್ರು..

ನಗರಸಭೆ ಅಧ್ಯಕ್ಷರು ಕಿರಿಯ ವಯಸ್ಸಿನವರಾಗಿದ್ದಾರೆ..  ಆಡಳಿದ ಬಗ್ಗೆ ತಿಳಿದುಕೊಳ್ಳಲು ಸಲಹೆ ನೀಡಿಲು ಕೆಲ ಆಪ್ತರು ಅವರ ಜೊತೆಗಿದ್ದಾರೆ.. ಹಾಗಂತ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ ಅಂತಾ ಬಿಜೆಪಿ ಸದಸ್ಯ ರಾಘವೇಂದ್ರ ಯಳವತ್ತಿ ತಿಳಿಸಿದ್ದಾರೆ.

ಮಳೆಗಾಗಿ ಗೊಂಬೆಗಳ ಮದುವೆ ಮಾಡುವ ಸಂದರ್ಭದಲ್ಲಿ ಬಂದ ಮೇಘರಾಜ

ಇಂದಿನ ಸಾಮಾನ್ಯ ಸಭೆ ಚುರುಕು ಚರ್ಚೆ ಕೆಲ ಆಕ್ಷೇಪಣೆಯ ಮಧ್ಯೆ ಜೋರಾಗಿ ನಡೆದಿದೆ. ಬರುವ ಸಭೆಗಳಲ್ಲಿ ಅನಾವಶ್ಯಕ ಚರ್ಚೆ ಬಿಟ್ಟು ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಜನರ ಸಮಸ್ಯೆಗಳು ಚರ್ಚೆಯಾಗ್ಲಿ ಅನ್ನೋದು ಜನರ ಒತ್ತಾಯವಾಗಿದೆ. 

Latest Videos
Follow Us:
Download App:
  • android
  • ios