Asianet Suvarna News Asianet Suvarna News

ಮೋದಿ ಆಡಳಿತದಿಂದ ದೇಶ ಅಭಿವೃದ್ಧಿಯತ್ತ: ಮೋಹನ್‌

ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಡೀ ದೇಶದಲ್ಲಿ ಶಾಂತಿ ವ್ಯವಸ್ಥೆ ಹಾಗೂ ಅಭಿವೃದ್ಧಿಯತ್ತ ಭಾರತ ಸಾಗುತ್ತಿದೆ ಎಂದು ಸಂಸದ ಪಿ. ಸಿ ಮೋಹನ್‌ ತಿಳಿಸಿದರು.

 From Modi administration to country development  Mohan snr
Author
First Published Mar 19, 2023, 4:51 AM IST

  ಗುಬ್ಬಿ :  ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಡೀ ದೇಶದಲ್ಲಿ ಶಾಂತಿ ವ್ಯವಸ್ಥೆ ಹಾಗೂ ಅಭಿವೃದ್ಧಿಯತ್ತ ಭಾರತ ಸಾಗುತ್ತಿದೆ ಎಂದು ಸಂಸದ ಪಿ. ಸಿ ಮೋಹನ್‌ ತಿಳಿಸಿದರು.

ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಿಂದ ಬಸ್‌ ನಿಲ್ದಾಣದವರೆಗೆ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಡಿ.ಕೆ. ಶಿವಕುಮಾರ್‌ ಇಂಧನ ಸಚಿವರಾಗಿದ್ದರು. ಆದರೆ ಅವರ ಕಾಲದಲ್ಲಿ ವಿದ್ಯುತ್‌ ಕೊಡಲಿಲ್ಲ, ವಿದ್ಯುತ್‌ ನೀಡದೆ ಜನರನ್ನು ಸತಾಯಿಸಿದ ಇವರು ಗ್ಯಾರಂಟಿ ಕಾರ್ಡ್‌ನಲ್ಲಿ ಉಚಿತವಾಗಿ 200 ಯೂನಿಟ್‌ ವಿದ್ಯುತ್‌ ನೀಡುತ್ತೇವೆ ಎಂದು ಹೇಳುತ್ತಿರುವುದು ನೋಡಿದರೆ ಹಾಸ್ಯಾಸ್ಪದವಾಗಿದೆ. ಕೇಂದ್ರ ಸರ್ಕಾರ ಅಕ್ಕಿಯನ್ನು 35 ರುಪಾಯಿಗೆ ಖರೀದಿ ಮಾಡಿ ಸಾರ್ವಜನಿಕರಿಗೆ ನೀಡಿದರೆ, ಸಿದ್ದರಾಮಯ್ಯ ಸರ್ಕಾರ ಕೇವಲ ಬ್ಯಾಗ್‌ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದೆ. ಕಾಶ್ಮೀರದಲ್ಲಿ ಇದ್ದಂತಹ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ಅಲ್ಲಿನ ಜನರು ಸ್ವತಂತ್ರವಾಗಿ ಬದುಕಲು ಅನುವು ಮಾಡಿಕೊಟ್ಟಿದ್ದು ನಮ್ಮ ಸರ್ಕಾರ. ರಾಹುಲ್‌ ಗಾಂಧಿ ಜೋಡೋ ಯಾತ್ರೆ ಮಾಡಲು ಹೋಗಿದ್ದಾರೆ. ದೇಶವನ್ನು ವಿಭಜಿಸಿದವರಿಗೆ ಜೋಡೋ ಯಾತ್ರೆ ಮಾಡುವುದಕ್ಕೆ ಯಾವುದೇ ನೈತಿಕತೆಯೂ ಇಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದರು.

ಸಂಸದ ಜಿ.ಎಸ್‌.ಬಸವರಾಜು ಮಾತನಾಡಿ, ತುಮಕೂರು ಜಿಲ್ಲೆಗೆ ಬಿಜೆಪಿ ಸರ್ಕಾರ ಕೋಟ್ಯಂತರ ರುಪಾಯಿ ಅನುದಾನ ಕೊಟ್ಟಿದ್ದು, ಹೆಚ್ಚು ಕೆಲಸ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕೈಗಾರಿಕಾ ವಲಯ, ಹೇಮಾವತಿ ನೀರು, ಎಚ್‌ಎಎಲ್‌ ಘಟಕ, ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಹತ್ತು ಹಲವು ಕೆಲಸ ಮಾಡಿರುವುದು ನಮ್ಮ ಬಿಜೆಪಿ ಸರ್ಕಾರ. ಹಾಗಾಗಿ ಈ ಬಾರಿ ಸಂಪೂರ್ಣವಾಗಿ ಬಿಜೆಪಿ ಅಧಿಕಾರ ಹಿಡಿಯುತ್ತದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಡೀ ರಾಜ್ಯದಲ್ಲಿ ನೆಲೆಯ ಇಲ್ಲದೆ ಟೂರಿಂಗ್‌ ಟಾಕೀಸ್‌ನಂತೆ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಬಿಜೆಪಿ ಪರವಾಗಿ ಜನ ಬೆಂಬಲ ಇರುವುದರಿಂದ ಕಾಂಗ್ರೆಸ್‌ ಈಗಾಗಲೇ ಮುಳುಗಡೆಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪಂಚಾಕ್ಷರಿ, ಮುಖಂಡರಾದ ಜಿ.ಎನ್‌.ಬೆಟ್ಟಸ್ವಾಮಿ, ಎಸ್‌.ಡಿ. ದಿಲೀಪ್‌ಕುಮಾರ್‌, ಚಂದ್ರಶೇಖರ ಬಾಬು, ಎನ್‌.ಸಿ. ಪ್ರಕಾಶ್‌, ಜಿಲ್ಲಾ ಕಾರ್ಯದರ್ಶಿ ಭೈರಪ್ಪ, ಮುಖಂಡರಾದ ನಂಜೇಗೌಡ, ಅ ನಾ ಲಿಂಗಪ್ಪ, ಸೇರಿದಂತೆ ಬಿಜೆಪಿಯ ಮುಖಂಡರು, ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

ಗುಬ್ಬಿ ಕ್ಷೇತ್ರಕ್ಕೆ ಬಿಎಸ್‌ವೈ ಅವರು ಬರುವುದಕ್ಕೆ ಸಾಕಷ್ಟುಉತ್ಸಾಹತೆ ಹೊಂದಿದ್ದರು. ಆದರೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದ ಕಾರಣದಿಂದಾಗಿ ಸಮಯದ ಅವಕಾಶ ಕಡಿಮೆ ಇದ್ದ ಕಾರಣ ಬರಲು ಸಾಧ್ಯವಾಗಿಲ್ಲ. ಚುನಾವಣೆಗೆ ಇನ್ನೂ 45 ದಿನ ಬಾಕಿ ಇರುವುದರಿಂದ ಕ್ಷೇತ್ರಕ್ಕೆ 2 ರಿಂದ 3 ಬಾರಿ ಆಗಮಿಸಿ ಪಕ್ಷದ ಮತ್ತು ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತಾರೆ.

ಪಿ.ಸಿ. ಮೋಹನ್‌ ಸಂಸದ

Follow Us:
Download App:
  • android
  • ios