ತುಮಕೂರು(ಸೆ.07): ಕಾನೂನು ಸಚಿವ ಮಾಧುಸ್ವಾಮಿ ಅವರು ತುಮಕೂರಿನಲ್ಲಿ ಫ್ರೆಂಡ್‌ಶಿಪ್ ಹಾಗೂ ಪಾಲಿಟಿಕ್ಸ್‌ ಬಗ್ಗೆ ಮಾತನಾಡಿದ್ದಾರೆ. ಹೊಸ ಟ್ರಾಫಿಕ್ ರೂಲ್ಸ್‌ ಬಗ್ಗೆ ಮಾತನಾಡಿದ ಅವರು  ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಬಂಧನದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ಅರೆಸ್ಟ್ ಆಗೋ ದಿನ ಅರ್ಧ ಗಂಟೆ ಮಾತಾಡಿದ್ವಿ:

ರಮೇಶ್ ಜಾರಕಿಹೊಳಿ ಡಿಕೆಶಿಯನ್ನ ಭೇಟಿ ಮಾಡೋ ವಿಚಾರವಾಗಿ ಪ್ರತಿಕ್ರಿಯಿಸಿ, ಗೆಳೆತನ ಬೇರೆ ಪಾಲಿಟಿಕ್ಸ್ ಬೇರೆ, ಅವರು ಅರೆಸ್ಟ್ ಆಗೋದಿನ ನನ್ನ ಬಳಿ ಅರ್ಧಗಂಟೆ ಮಾತಾಡಿದ್ರು. ಕರ್ನಾಟಕ ಭವನದಲ್ಲಿ ಸುಮಾರು ಅರ್ಧಗಂಟೆಗಳ ಕಾಲ ನಾವಿಬ್ಬರೂ ಮಾತನಾಡಿದ್ದೆವು ಎಂದು ಅವರು ಹೇಳಿದ್ದಾರೆ.

50, 100 ದಂಡ ಕಟ್ಟಿ ಮತ್ತೆ ತಪ್ಪು ಮಾಡೋರಿಗಾಗಿ ಹೊಸ ಟ್ರಾಫಿಕ್ ರೂಲ್ಸ್‌: ಮಾಧುಸ್ವಾಮಿ

ಕಷ್ಟದಲ್ಲಿರೋರನ್ನ ಮಾತಾಡ್ಸೋದ್ರಲ್ಲಿ ಯಾವುದೇ ತಪ್ಪಿಲ್ಲ. ರಮೇಶ್ ಜಾರಕಿಹೊಳಿಯವರಿಗೂ ಡಿಕೆಶಿಗೂ ಯಾವುದೋ ವಿಚಾರವಾಗಿ ಭಿನ್ನಾಭಿಪ್ರಾಯ ಇದ್ದಿರಬಹುದು.ಹಾಗೆಂದು ಮಾತನಾಡಿಸೋದು ಬೇಡ್ವಾ ಎಂದವರು ಪ್ರಶ್ನಿಸಿದ್ದಾರೆ.