ಕುರುಬ ಸಮಾಜದ ಮಿತ್ರರು ನನ್ನ ಪರವಾಗಿ ಪ್ರಚಾರ ಮಾಡಲಿದ್ದಾರೆ : ಸಾ.ರಾ. ಮಹೇಶ್‌

ಕುರುಬ ಸಮಾಜದ ಮಿತ್ರರು ನನ್ನ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

Friends of the Kuruba Samaj will campaign on my behalf in the elections snr

  ಭೇರ್ಯ :  ಕುರುಬ ಸಮಾಜದ ಮಿತ್ರರು ನನ್ನ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಭರವಸೆಯ ಹಾದಿಯಲ್ಲಿ ಹೊಸ ಭವಿಷ್ಯದ ಬೆಳಕು ಕೈಪಿಡಿ ಪುಸ್ತಕ ಹಾಗು ಸಂಕ್ರಾಂತಿ ಬಾಗಿನ ವಿತರಿಸಲು ಬುಧವಾರ ಕೆ.ಆರ್‌. ನಗರ ಹೊಸ ಅಗ್ರಹಾರ ಹೋಬಳಿಯ ಕಂಚಿನಕೆರೆ ಗ್ರಾಮಕ್ಕೆ ಶಾಸಕರು ಆಗಮಿಸಿದಾಗ ಜೆಡಿಎಸ್‌ ಕುರುಬ ಸಮಾಜದ ಮುಖಂಡರು ಪುಷ್ಪಾರ್ಚನೆ ಮಾಡುವ ಮೂಲಕ ಅಭೂತಪೂರ್ವ ಮಹೇಶ್ಗೆ ಸ್ವಾಗತ ಕೋರಿದರು.

ನಂತರ ಅವರು ಮಾತನಾಡಿ, ನನ್ನನ್ನು ಯಾರು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ ಅವರಿಗೆ ನಾನು ಚಿರಋುಣಿಯಾಗಿರುತ್ತೇನೆ ಎಂದರು.

ಕೆ.ಆರ್‌. ನಗರ ಮತ್ತು ಸಾಲಿಗ್ರಾಮ ಆವಳಿ ತಾಲೂಕಿನ 60 ಸಾವಿರ ಕುಟುಂಬಗಳಿಗೆ ಸಂಕ್ರಾಂತಿ ಬಾಗಿನ ಜೊತೆಗೆ ಎರಡು ತಾಲೂಕಿಗೆ ನನ್ನ ಶಾಸಕತ್ವ ಅವಧಿಯಲ್ಲಿ ಏನೇನೂ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಲ್ಲವನ್ನೂ ಜನರಿಗೆ ಮನದಟ್ಟು ಮಾಡಲು ಭರವಸೆಯ ಹಾದಿಯಲ್ಲಿ ಹೊಸ ಭವಿಷ್ಯದ ಬೆಳಕು ಎಂಬ ಕಿರು ಹೊತ್ತಿಗೆ ಕೈಪಿಡಿಯನ್ನು ಪ್ರತಿ ಮನೆಗೂ ವಿತರಣೆ ಮಾಡಲಾಗುತ್ತಿದೆ, ನೀವು ಕೊಟ್ಟಅಧಿಕಾರವನ್ನು ಯಾವತ್ತು ದುರ್ಬಾಳಕೆ ಮಾಡಿಕೊಳ್ಳದೆ ಅವಳಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಈ ಭಾಗದ ಜೆಡಿಎಸ್‌ ಕುರುಬ ಸಮಾಜದ ಮುಖಂಡರ ನೇತೃತ್ವದಲ್ಲಿ ಜೆಡಿಎಸ್‌ ಮುಖಂಡರು, ಗ್ರಾಪಂ ಸದಸ್ಯರು, ಸಾ.ರಾ. ಮಹೇಶ್‌ ಅಭಿಮಾನಿಗಳು ಶಾಸಕರಿಗೆ ಕ್ರೇನ್‌ ಮೂಲಕ ಭಾರೀ ಗಾತ್ರದ ಗುಲಾಬಿ ಹಾರ ಹಾಕಿ ಪುಷ್ಪಾರ್ಚನೆ ಮಾಡಿ ತಮ್ಮ ಪ್ರೀತಿಯ ಅಭಿಮಾನ ಮೆರೆದರು.

ಗ್ರಾಪಂ ಅಧ್ಯಕ್ಷೆ ಆಶಾದೇವು, ಗ್ರಾಪಂ ಸದಸ್ಯರಾದ ಮಂಜು, ಬಸವರಾಜು, ಅನಿತಾ ಚಿತ್ರಶೇಖರ್‌, ತಾಲೂಕು ಯುವ ಜೆಡಿಎಸ್‌ ಅಧ್ಯಕ್ಷ ಡಿ.ವಿ. ಗುಡಿ ಯೋಗೇಶ್‌ ಇದ್ದರು.

ಬದುಕು ಕಟ್ಟಿಕೊಳ್ಳಲು ರಾಜಕೀಯಕ್ಕೆ ಬಂದಿಲ್ಲ

 ಸಾಲಿಗ್ರಾಮ/ಕೆ.ಆರ್‌. ನಗರ :  ನಮ್ಮ ರಾಜಕೀಯ ಜೀವನ ಉದ್ಯೋಗವಲ್ಲ ಅದು ಸೇವೆ. ಇನ್ನೊಬ್ಬರ ಬದುಕು ಕಟ್ಟಿಕೊಡಲು ರಾಜಕಾರಣ ಮಾಡಬೇಕೆ ಹೊರತು ನಮ್ಮ ಬದುಕು ಕಟ್ಟಿಕೊಳ್ಳಲು ಅಲ್ಲ ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಹೇಳಿರುವ ಮಾತು ನನ್ನ ರಾಜಕೀಯ ಬದುಕಿಗೆ ಸ್ಫೂರ್ತಿ ಆದರ್ಶವಾಗಿದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಈ ಬಾರಿ ನಾನು ಶಾಸಕನಾಗದೇ ಹೋದರೆ ಮುಳುಗಿ ಹೋಗುತ್ತೇವೆ ಎಂದು ಇದೀಗ ಮನೆಮನೆಗೆ ತೆರಳಿ ಕೈ ಮುಗಿಯುವ ಅಪ್ಪ-ಮಕ್ಕಳು ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಏನು? ಎಂದು ಕಾಂಗ್ರೆಸ್‌ ಮುಖಂಡ ಡಿ. ರವಿಶಂಕರ್‌ ವಿರುದ್ದ ಹರಿಹಾಯ್ದರು.

ಚುಂಚನಕಟ್ಟೆಸಮೀಪದ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನನ್ನ 15 ವರ್ಷ ಶಾಸಕ, 12 ತಿಂಗಳು ಮಂತ್ರಿ ಮಾಡಿದ ನನ್ನ ಮತ ಕ್ಷೇತ್ರದ ಅಭಿವೃದ್ಧಿಗೆ ಸುಮಾರು . 924 ಕೋಟಿಗೂ ಅಧಿಕ ಅನುದಾನ ಅಭಿವೃದ್ಧಿಯ ಜತೆಗೆ ಯಾವುದೇ ಜಾತಿ, ಪಕ್ಷ ಭೇದ ಮಾಡದೆ ತಾಲೂಕಿನ ರೈತರ ಸುಮಾರು . 100 ಕೋಟಿ ಸಾಲವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮನ್ನಾ ಮಾಡಿದ್ದಾರೆ ಎಂದು ಹೇಳಿದರು.

ಹಂತ ಹಂತವಾಗಿ ಹೋರಾಟ ಮಾಡಿದ ಫಲವಾಗಿ ಭಾನುವಾರ ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭವಾಗಿದೆ. ಅಲ್ಲಿ ಒಂದೇ ಜಾತಿ, ಪಕ್ಷದವರು ಕೆಲಸ ಮಾಡುತ್ತಿಲ್ಲ. ಎಲ್ಲಾ ವರ್ಗದವರು ಕೆಲಸ ಮಾಡುತ್ತಿದ್ದು ನಾನು ಯಾವುದೇ ಜಾತಿಗೆ ಸೀಮಿತವಾಗಿ ಕೆಲಸಗಳನ್ನಾಗಲಿ ಅಭಿವೃದ್ಧಿಯನ್ನಾಗಲಿ ತಾಲೂಕಿನಲ್ಲಿ ಮಾಡಿದವನಲ್ಲ ಎಂದರು. ಈ ತಾಲೂಕಿನಲ್ಲಿ 2 ಬಾರಿ ಜಿಪಂ ಸದಸ್ಯರಾಗಿ ಆಯ್ಕೆಯಾದಾಗ ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಷ್ಟುಅನುದಾನ ತಂದು ಕ್ಷೇತ್ರ ಉದ್ದಾರ ಮಾಡಿದ್ದೀರಿ ಜನರಿಗೆ ಹೇಳಿ ನಂತರ ಮತ ಕೇಳಿ ಎಂದರು.

ಕ್ಷೇತ್ರದಲ್ಲಿ ಇಷ್ಟುದಿನ ಶಾಂತಿಯಿಂದ ನಮ್ಮ ಕಾರ್ಯಕರ್ತರು ಸುÜು್ಮನಿದ್ದು ಅವರನ್ನು ಕೆಣಕುವ ಕೆಲಸ ಮಾಡುತ್ತಿದ್ದು ಇಂದಿನ ಸಭೆಯಲ್ಲಿ ಸೇರಿರುವ ಜನಸಾಗರದಿಂದ ಕ್ಷೇತ್ರದಲ್ಲಿ ಸಂಚು ಮಾಡಿ ಕೆರಳಿಸುತ್ತಿರುವವರಿಗೆ ಸಂದೇಶ ರವಾನೆ ಆಗಿದ್ದು ಜೆಡಿಎಸ್‌ ಕಾರ್ಯಕರ್ತರು ಸಿಡಿದೆದ್ದರೆ ಅವರು ಹೂತು ಹೋಗಲಿದ್ದಾರೆ ಎಂದು ಫ್ಲೆP್ಸ… ಹರಿದ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಗುಡುಗಿದರು.

ನಿಮ್ಮ ಸರ್ಕಾರ ಇದ್ದಾಗ ಆಯ್ಕೆಯಾದ ನಿಮ್ಮ ಕ್ಷೇತ್ರಕ್ಕೆ ಕೋಟಿಗಟ್ಟಲೆ ಅನುಧಾನ ತಂದು ಕೆಲಸ ಮಾಡಬಹುದಿತ್ತು ಅಲ್ಲವೇ? ನಿಮ್ಮ ಕುಟುಂಬಕ್ಕೆ 3 ಬಾರಿ ಜಿಪಂ ಸದಸ್ಯರನ್ನಾಗಿ ಆಯ್ಕೆ ಮಾಡಿರುವ ಈ ತಾಲೂಕಿಗೆ ನಿಮ್ಮ ಕೊಡುಗೆ ಏನು? ನಿಮ್ಮ ಬದುಕು ಕಟ್ಟಿಕೊಳ್ಳಲು ತಾಲೂಕಿನಲ್ಲಿ ರಾಜಕೀಯ ಮಾಡುತ್ತಿದ್ದೀರಿ ಎಂದು ವಿರೋಧ ಪಕ್ಷದವರನ್ನು ಪ್ರಶಿಸಿದ ಅವರು ಇಡೀ ರಾಜ್ಯದಲ್ಲಿ 224 ಕ್ಷೇತ್ರದ ಜನರು ಕುಮಾರಣ್ಣ ಅವರನ್ನು ಹೇಗೆ ಗೌರವಿಸುತ್ತಾರೋ ಹಾಗೆ ಕೂಡ ನನ್ನ ತಾಲೂಕಿನ ಜನರು ಕೂಡ ನನ್ನನ್ನು ಪ್ರೀತಿಯಿಂದ ಗೌರವದಿಂದ ಕಾಣುತ್ತಿದ್ದಾರೆ ಎಂದು ಹೇಳಿದರು.

ಇದಕ್ಕೂ ಮೊದಲು ಚುಂಚನಕಟ್ಟೆಹೋಬಳಿ ಜೆಡಿಎಸ್‌ ಕಾರ್ಯಕರ್ತರೊಂದಿಗೆ ಶಾಸಕ ಸಾ.ರಾ. ಮಹೇಶ್‌ ಅವರು ಶ್ರೀರಾಮ ದೇಗುಲದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ತಾಲೂಕಿನ ವಿವಿಧ ಗ್ರಾಮಗಳ ಹಾಗೂ ಚುಂಚನಕಟ್ಟೆಹೋಬಳಿಯ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮಾಯಿಗೌಡನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ವೇದಿಕೆವರೆಗೂ ಬೈಕ್‌ ರಾರ‍ಯಲಿಯೊಂದಿಗೆ ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆಯ ಮೂಲಕ ಶಾಸಕ ಸಾ.ರಾ. ಮಹೇಶ್‌ ಅವರನ್ನು ಕರೆದೊಯ್ದರು.

ಈ ವೇಳೆ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮಾತನಾಡಿದರು. ಜಿಪಂ ಮಾಜಿ ಸದಸ್ಯ ದ್ವಾರಕೀಶ್‌, ತಾಲೂಕು ಅಧ್ಯಕ್ಷ ಮೆಡಿಕಲ್‌ ರಾಜಣ್ಣ, ಹಂಪಾಪುರ ಕುಮಾರ್‌, ಮುಖಂಡ ಹಳೆಯೂರು ಮಧುಚಂದ್ರ, ಎಪಿಎಂಸಿ ಮಾಜಿ ನಿರ್ದೇಶಕ ಬಂಡಳ್ಳಿ ಕುಚೇಲ್‌, ಹೊಸೂರು ಕೀರ್ತಿ ನಾಗರಾಜ್‌, ತಾಲೂಕು ಯುವ ಅಧ್ಯಕ್ಷ ಮಧು, ಕಾರ್ಯದರ್ಶಿ ಸಾಲಿಗ್ರಾಮ ರಾಜು, ಗ್ರಾಪಂ ಅಧ್ಯಕ್ಷ ಎಚ್‌.ಆರ್‌. ದಿನೇಶ್‌, ಗ್ರಾಪಂ ಮಾಜಿ ಅಧ್ಯಕ್ಷ ಎಚ್‌.ಆರ್‌. ಮಹೇಶ್‌, ಎಸ್‌.ಆರ್‌. ಪ್ರಕಾಶ್‌, ಶ್ರೀರಾಮಪುರ ಸಂತೋಷ್‌, ಹೊಸೂರು ಕೀರ್ತಿ, ಆಯಾಜ್‌ ಪಾಷಾ, ಲಾಲು ಸಾಬ್‌, ದೊಡ್ಮನೆ ಮಂಜು, ಹಳೆಯೂರು ಶ್ರೀಧರ ಮಿರ್ಲೆ, ತುಕಾರಾಮ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

  

 

Latest Videos
Follow Us:
Download App:
  • android
  • ios