ಒಂದು ವಾರ ಖಾಸಗಿ ಬಸ್‌ಗಳ ಉಚಿತ ಸಂಚಾರ
ಉಡುಪಿಯಲ್ಲಿ ಸೋಮವಾರದಿಂದ ಖಾಸಗಿ ಸಿಟಿ ಬಸ್‌ಗಳ ಓಡಾಟ ಆರಂಭವಾಗಲಿದ್ದು, ಮೇ 31ರವರೆಗೆ ಆಯ್ದ 12 ಬಸ್‌ಗಳಲ್ಲಿ ಪ್ರಯಾಣಿಕರಿಗೆ ಉಚಿತ ಸೇವೆ ನೀಡಲು ಮಾಲೀಕರು ನಿರ್ಧರಿಸಿದ್ದಾರೆ.
ಉಡುಪಿ(ಮೇ 25): ಉಡುಪಿಯಲ್ಲಿ ಸೋಮವಾರದಿಂದ ಖಾಸಗಿ ಸಿಟಿ ಬಸ್‌ಗಳ ಓಡಾಟ ಆರಂಭವಾಗಲಿದ್ದು, ಮೇ 31ರವರೆಗೆ ಆಯ್ದ 12 ಬಸ್‌ಗಳಲ್ಲಿ ಪ್ರಯಾಣಿಕರಿಗೆ ಉಚಿತ ಸೇವೆ ನೀಡಲು ಮಾಲೀಕರು ನಿರ್ಧರಿಸಿದ್ದಾರೆ. ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು ಆಸರೆ ಚಾರಿಟೇಬಲ್ ಟ್ರಸ್ವ್ ಸಹಯೋಗದೊಂದಿಗೆ ಈ ಉಚಿತ ಸೇವೆಯನ್ನು ಪ್ರಾಯೋಜಿಸುತ್ತಿದ್ದಾರೆ.
ಈ ಉಚಿತ ಸೇವೆ ಪಡೆಯಲು ಪ್ರಯಾಣಿಕರಿಗೆ ಚಲೋ ಟ್ರಾವೆಲ್ ಕಾರ್ಡ್‌ನ್ನು ನೀಡಲಾಗುತ್ತದೆ. ಇದನ್ನು ತೋರಿಸಿ ಉಚಿತವಾಗಿ ಈ ಸಿಟಿ ಬಸ್‌ಗಳನ್ನು ಪ್ರಯಾಣಿಸಬಹುದಾಗಿದೆ.
ಸೋಂಕಿತನ ಮೊಬೈಲ್ ಮುಟ್ಟಿದ ಪೊಲೀಸ್‌ಗೂ ಕೊರೋನಾ ಸೋಂಕು..!
ಈಗಾಗಲೇ ಸರ್ಕಾರದ ಸೂಚನೆಯಂತೆ ಸರ್ಕಾರಿ ಬಸ್‌ಗಳ ಓಡಾಟ ಆರಂಭವಾಗಿದ್ದರೂ, ಖಾಸಗಿ ಬಸ್ ಮಾಲೀಕರು ಬಸ್‌ಗಳನ್ನು ರಸ್ತೆಗಿಳಿಸಿರಲಿಲ್ಲ. ಕಳೆದ ವಾರದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಜನ ಸಂಚಾರ ತೀರಾ ವಿರಳವಾಗಿದ್ದರೂ, ಈ ವಾರ ಜನರು ಸರ್ಕಾರಿ ಬಸ್‌ಗಳನ್ನು ಬಳಸಲಾರಂಭಿಸುತ್ತಿದ್ದಂತೆ ಖಾಸಗಿ ಬಸ್‌ಗಳು ಉಚಿತ ಪ್ರಯಾಣದ ಸೇವೆಯನ್ನು ನೀಡಿ ಜನರನ್ನು ಸೆಳೆಯುವ ಉಪಾಯವನ್ನು ಹೂಡಿದ್ದಾರೆ. ಆದರೆ ಇದು ಮೇ 31ರವರೆಗೆ ಮತ್ತು ಕೆಲವೇ ಮಾರ್ಗಗಳಲ್ಲಿ, ಕೆಲವೇ ಬಸ್ಸುಗಳಲ್ಲಿ ಮಾತ್ರ. ನಂತರ ಪ್ರಯಾಣಿಕರು ಟಿಕೇಟು ದರವನ್ನು ತೆರಲೇಬೇಕಾಗಿದೆ.