Asianet Suvarna News Asianet Suvarna News

70ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಉಚಿತ ತಪಾಸಣೆ

ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹೆಲ್ತಕೇರ್‌ ಡಯಾಗ್ನೋಸ್ಟಿಕ್‌ ಲ್ಯಾಬ್‌ ಆಲೂರು ಮತ್ತು ಸಂಭವ್‌ ಫೌಂಡೇಶನ್‌ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ 70ಕ್ಕೂ ಹೆಚ್ಚು ಜನ ತಪಾಸಣೆ ಮಾಡಿಸಿಕೊಂಡಿದ್ದಾರೆ.

Free Eye Test at Alur near Hassan
Author
Bangalore, First Published Jul 19, 2019, 8:22 AM IST

ಹಾಸನ(ಜು.19): ಪಟ್ಟಣದ ಮಡಿವಾಳ ಸಮುದಾಯ ಭವನದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹೆಲ್ತಕೇರ್‌ ಡಯಾಗ್ನೋಸ್ಟಿಕ್‌ ಲ್ಯಾಬ್‌ ಆಲೂರು ಮತ್ತು ಸಂಭವ್‌ ಫೌಂಡೇಶನ್‌ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ಮಂದಿಗೆ ತಪಾಸಣೆ ನಡೆಸಲಾಯಿತು.

ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್‌.ಬಿ. ಧರ್ಮರಾಜ್‌ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ಟಿವಿ ಕಂಪ್ಯೂಟರ್‌ ಮೊಬೈಲ್‌ಗಳನು ನೋಡುವುದರಲ್ಲಿಯೇ ಕಾಲ ಕಳೆಯುತ್ತಿದ್ದು, ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಈ ಕಾರಣದಿಂದ ಕಣ್ಣಿನ ಮೇಲೆ ಒತ್ತಡ ಹೆಚ್ಚಾಗಿ ಕಣ್ಣಿನ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಕಣ್ಣಿನ ತಪಾಸಣೆ ನಡೆಸಿಕೊಳ್ಳಬೇಕು ಎಂದರು.

ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಕಣ್ಣೇ ಕಳೆದುಕೊಂಡರು : ಎಚ್ಚರ!

ಯೋಜನೆಯ ಪಾಳ್ಯ ವಲಯದ ಮೇಲ್ವಿಚಾರಕ ವಿಶ್ವನಾಥ್‌, ಆಲೂರು ಸಕಲೇಶಪುರ ಯೋಜನಾ ಲೆಕ್ಕ ಪರಿಶೋಧಕರಾದ ಸುಜಾತಾ, ಚಂದನ, ತಾಲೂಕು ಬಿಜೆಪಿ ಮಹಿಳಾ ಅಧ್ಯಕ್ಷೆ ಉಮಾ ರವಿಪ್ರಕಾಶ್‌, ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಗೋಪಿನಾಥ್‌, ಒಪಿಟಿ ಎಚ್‌ಎಂ ಹರ್ಷಿತಾ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಾದ ನಾಜಿರಾ, ನಾಗಮಣಿ ಇದ್ದರು.

Follow Us:
Download App:
  • android
  • ios