ಗ್ರಾಮಾಂತರಕ್ಕೆ ಉಚಿತವಾಗಿ ವಿದ್ಯುತ್‌ ಸಂಪರ್ಕ

ಬಡವರ ಮನೆಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸುವುದು ಸರ್ಕಾರದ ಸಾಮಾಜಿಕ ಜವಾಬ್ದಾರಿಯಾಗಿದ್ದು, ವಿದ್ಯುತ್‌ ಸಂಪರ್ಕವಿಲ್ಲದ ಬಡವರ ಮನೆಗಳಿಗೆ ಅರ್ಜಿ ಕೊಟ್ಟಲ್ಲಿ ದೀನದಯಾಳ್‌ ಉಪಾಧ್ಯಯ ಗ್ರಾಮೀಣ ಯೋಜನೆಯಡಿ ಉಚಿತವಾಗಿ ಸಂಪರ್ಕ ನೀಡಲಾಗುವುದು ಎಂದು ಸೆಸ್‌್ಕ ವ್ಯವಸ್ಥಾಕ ನಿರ್ದೇಶಕ ಜಯವಿಭವಸ್ವಾಮಿ ಹೇಳಿದರು

Free electricity connection to rural areas snr

 ನಂಜನಗೂಡು :  ಬಡವರ ಮನೆಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸುವುದು ಸರ್ಕಾರದ ಸಾಮಾಜಿಕ ಜವಾಬ್ದಾರಿಯಾಗಿದ್ದು, ವಿದ್ಯುತ್‌ ಸಂಪರ್ಕವಿಲ್ಲದ ಬಡವರ ಮನೆಗಳಿಗೆ ಅರ್ಜಿ ಕೊಟ್ಟಲ್ಲಿ ದೀನದಯಾಳ್‌ ಉಪಾಧ್ಯಯ ಗ್ರಾಮೀಣ ಯೋಜನೆಯಡಿ ಉಚಿತವಾಗಿ ಸಂಪರ್ಕ ನೀಡಲಾಗುವುದು ಎಂದು ಸೆಸ್‌್ಕ ವ್ಯವಸ್ಥಾಕ ನಿರ್ದೇಶಕ ಜಯವಿಭವಸ್ವಾಮಿ ಹೇಳಿದರು.

ತಾಲೂಕಿನ ಕೂಡ್ಲಾಪುರ ಗ್ರಾಮದಲ್ಲಿ ಸೆಸ್‌್ಕನಿಂದ ಏರ್ಪಡಿಸಿದ್ದ ವಿದ್ಯುತ್‌ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ 50 ವರ್ಷಗಳ ಹಿಂದೆ ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇದ್ದು, ಈಗ ವಿದ್ಯುತ್‌ ಕ್ಷೇತ್ರದಲ್ಲಿ ಅಪಾರ ಅಭಿವೃದ್ದಿಯಾಗಿದ್ದು, ವಿದ್ಯುತ್‌ ಕೊರತೆಯಿಲ್ಲ, ಗುಣಮಟ್ಟದ ವಿದ್ಯುತ್‌ ಒದಗಿಸುವಲ್ಲಿ ಸಂಸ್ಥೆ ಸಿದ್ದವಾಗಿದೆ. ಗ್ರಾಹಕರು ಅಕ್ರಮವಾಗಿ, ಕಳ್ಳತನದಿಂದ ವಿದ್ಯುತ್‌ ಉಪಯೋಗಿಸಬೇಡಿ, ಇದರಿಂದ ಸಂಸ್ಥೆ ಆರ್ಥಿಕವಾಗಿ ನಷ್ಟವಾಗಲಿದೆ.

ಕಳೆದ 7 ವರ್ಷಗಳಿಂದ ಸುಮಾರು 730 ಕೋಟಿ ನಷ್ಟದಲ್ಲಿತ್ತು. ಕಳೆದ ವರ್ಷ 422 ಕೋಟಿ ನಷ್ಟದಲ್ಲಿದೆ. ಸಂಸ್ಥೆ ನಷ್ಟಕ್ಕೊಳಗಾದಲ್ಲಿ ಆರ್ಥಿಕ ಹೊರೆ ಗ್ರಾಹಕರಿಗೆ ಬೀಳಲಿದೆ. ಆದ್ದರಿಂದ ರೈತರು ಪಂಪ್‌ಸೆಟ್‌ಗಳಿಗೆ ಅಕ್ರಮವಾಗಿ ವಿದ್ಯುತ್‌ ಎಳೆದುಕೊಂಡಿದ್ದರೂ ಸಹ 15 ಸಾವಿರ ಕಟ್ಟಿಸಕ್ರಮಗೊಳಿಸಿಕೊಳ್ಳಿ ಇದರಿಂದ ಸರ್ಕಾರ ಪ್ರತಿ ಪಂಪ್‌ಸೆಟ್‌ಗೆ ವಾರ್ಷಿಕವಾಗಿ 48 ಸಾವಿರ ಸಬ್ಸಿಡಿ ನೀಡಲಿದೆ. ಎಸ್ಸಿ, ಎಸ್ಟಿಜನಾಂಗದ ಬಿಪಿಎಲ್‌ ಕುಟುಂಬಗಳಿಗೆ 75 ಯುನಿಟ್‌ ವಿದ್ಯುತ್‌ ಉಚಿತವಾಗಿ ಸಿಗಲಿದ್ದು, ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳುವ ಜೊತೆಗೆ ಸಂಸ್ಥೆ ಆರ್ಥಿಕವಾಗಿ ಸ್ವಾವಲಂಬಿಯಾಗಿ ಅಭಿವೃದ್ದಿಯಾಗಲು ಕಷ್ಟವೂ ಸುಖವೂ ಸಕಾಲದಲ್ಲಿ ವಿದ್ಯುತ್‌ ಬಿಲ್‌ ಪಾವತಿಸಿ ಸಾಮಾಜಿಕ ಬದ್ದತೆ ತೋರಿಸಬೇಕು ಎಂದು ಮನವಿ ಮಾಡಿದರು.

ದೀನದಯಾಳ್‌ಉಪಾಧ್ಯಾಯ ಗ್ರಾಮೀಣ ಯೋಜನೆಯಡಿ ಬಿಪಿಎಲ್‌ ಕಾರ್ಡ್‌ ಹೊಂದಿರುವ ಬಡವರಿಗೆ ಉಚಿತವಾಗಿ ವಿದ್ಯುತ್‌ ಸಂಪರ್ಕ ನೀಡಲಾಗುವುದು. ಕೈ ಬಿಟ್ಟುಹೋಗಿರುವ, ವಿದ್ಯುತ್‌ ಸಂಪರ್ಕವಿಲ್ಲದ ಬಡವರು ಅರ್ಜಿ ಕೊಟ್ಟಲ್ಲಿ ತಕ್ಷಣವೇ ಸಂಪರ್ಕ ಒದಗಿಲಾಗುವುದು. ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ 83 ಮನೆಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ. ಅಲ್ಲದೆ ಬೆಳಕು ಯೋಜನೆಯಡಿಯಲ್ಲೂ ಸಹ ಸಾವಿರಾರು ಮನೆಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ ಎಂದರು.

ವಿದ್ಯುತ್‌ ಸಮಸ್ಯೆಗಳನ್ನು ಅಧಿಕಾರಿಗಳು ತಿಂಗಳುಗಳಾದರೂ ಪರಿಹರಿಸುವುದಿಲ್ಲ ಎಂಬ ದೂರಿದೆ. ವಿದ್ಯುತ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು 1912ಗೆ ಕರೆ ಮಾಡಿ ದೂರು ನೀಡಿದ್ದಲ್ಲಿ 24 ಗಂಟೆಗಳೊಳಗೆ ಸಮಸ್ಯೆ ಪರಿಹಾರವಾಗಲಿದೆ. ಒಂದು ವೇಳೆ ಸಿಬ್ಬಂದಿಗಳು ಬೇಜವಾಬ್ದಾರಿ ತೋರಿದಲ್ಲಿ ಅದು ಉನ್ನತ ಅಧಿಕಾರಿಗಳಿಗೆ ರವಾನೆಯಾಗಲಿದ್ದು. ಶೀಘ್ರವೇ ಪರಿಹಾರ ಸಿಗಲಿದೆ. ರೈತರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ವಿದ್ಯುತ್‌ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಕರೆ ನೀಡಿದರು.

ಸಭೆಯಲ್ಲಿ ಕೂಡ್ಲಾಪುರ ರಾಜು ಮಾತನಾಡಿ, ಬೆಳಕು ಯೋಜನೆಯಡಿ ಸಂಪರ್ಕ ನೀಡಲು ಗುತ್ತಿಗೆದಾರರು ಮೂರು ಸಾವಿರ ಲಂಚ ತೆಗೆದುಕೊಂಡಿದ್ದಾರೆ. ಅಲ್ಲದೆ ಭಾಗ್ಯಜ್ಯೋತಿ ಕುಟೀರ ಜ್ಯೋತಿ ಯೋಜನೆಗಳಿಗೆ ಹಲವಾರು ವರ್ಷಗಳಿಂದ ಬಿಲ್‌ ನೀಡದೆ. ಈಗ ಏಕಾಏಕಿ 20 ರಿಂದ 30 ಸಾವಿರ ವಿದ್ಯುತ್‌ಬಿಲ್‌ ನೀಡಲಾಗಿದೆ ಎಂದು ದೂರಿದರು.

ಆರ್‌ಇಸಿ ಯೋಜನೆಯ ರಾಮಸ್ವಾಮಿ, ಸೌಮ್ಯಕಾಂತ್‌, ಕಾರ್ಯನಿರ್ವಾಹಕ ಎಂಜಿಯರ್‌ ಹರ್ಷಕುಮಾರ್‌, ಸಹಾಯಕ ಕಾರ್ಯನಿರ್ವಾಕ ಎಂಜಿಯರ್‌ಗಳಾದ ದೇವರಾಜು, ಕಿರಣ್‌ಕುಮಾರ್‌, ಲೆಕ್ಕಾಧಿಕಾರಿ ವೇದಾವತಿ, ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷ ಗುರುಪ್ರಸಾದ್‌, ಜೆಇಗಳಾದ ರಂಗಸ್ವಾಮಿ, ಮುಖಂಡರು ಸಾರ್ವಜನಿಕರು ಇದ್ದರು.

Latest Videos
Follow Us:
Download App:
  • android
  • ios