ರಕ್ಷಾ ಬಂಧನ: ಮಹಿಳೆಯರಿಗೆ ಉಚಿತ ಆಟೋ ಸೇವೆ
ರಕ್ಷಾಬಂಧನದ ಪ್ರಯುಕ್ತ ಬೀದರ್‌ನ ಆಟೋ ಚಾಲಕರೊಬ್ಬರು ಮಹಿಳೆಯರಿಗೆ ಉಚಿತ ಆಟೋ ಸೇವೆ ನೀಡಿದ್ದಾರೆ. ಆಟೋ ಚಾಲಕರು ಹಾಗೂ ಮಹಿಳೆಯರ ನಡುವೆ ಅಣ್ಣ ತಂಗಿ ಸಂಬಂಧ ಗಟ್ಟಿಯಾಗಿರಲೆಂದು ಉಚಿತ ಸೇವೆ ನೀಡಲಾಯಿತು. ಉಚಿತ ಆಟೋ ಸೇವೆಗೆ ಮಹಿಳೆಯರು ಶ್ಲಾಘನೆ ವ್ಯಕ್ತಪಡಸಿದ್ದಾರೆ.
ಬೀದರ್(ಆ.16): ರಕ್ಷಾಬಂಧನ ಹಾಗೂ 73ನೇ ಸ್ವಾತಂತ್ರ್ಯ ದಿನದ ನಿಮಿತ್ತ ಬಸವಕಲ್ಯಾಣದ ಆಟೋ ಚಾಲಕರೊಬ್ಬರು ಮಹಿಳೆಯರಿಗಾಗಿ ದಿನ ಪೂರ್ತಿ ಉಚಿತ ಆಟೋ ಸೇವೆ ನೀಡಿದ್ದಾರೆ.
ನಗರದ ಬನಶಂಕರಿ ಓಣಿಯ ಸತೀಷ್ ಕೀಶನ್ ರಾವ್ ತೆಲಂಗ ಅವರೇ ಈ ರೀತಿಯ ವಿನೂತನ ಸೇವೆ ನೀಡಿದವರು. ಸಾಮಾನ್ಯವಾಗಿ ಆಟೋ ಚಾಲಕರೆಂದರೆ ಕೇವಲ ಕಾಣುವ ಪ್ರಯಾಣಿಕರಿಗೆ ಆಟೋ ಚಾಲಕರ ಮನಸ್ಥಿತಿ ಹೇಗೆ ಇರುತ್ತದೆ ಎಂಬ ನಿಟ್ಟಿನಲ್ಲಿ ವಿಶೇಷವಾಗಿ ಮಹಿಳೆಯರಿಗೆ ಅಣ್ಣ ತಮ್ಮೊಂದಿರೊಂದಿಗೆ ಅಕ್ಕ ತಂಗಿಯರ ಸಂಬಂಧ ಗಟ್ಟಿಯಾಗಿರಲೆಂದು ಕಟ್ಟುವ ರಕ್ಷಬಂಧನ ದಿನದಂದು ಉಚಿತ ಆಟೋ ಸೇವೆ ನೀಡಿದರು.
ಮಹಿಳೆಯರ ಹಾಗೂ ಆಟೋ ಚಾಲಕರ ಬಾಂಧವ್ಯ ಇನ್ನೂ ಗಟ್ಟಿಯಾಗಲಿ ಎಂದು ಈ ರೀತಿ ಸೇವೆ ನೀಡುತ್ತಿದ್ದೇನೆ ಎಂದು ಸತೀಷ್ ಹೇಳಿದ್ದಾರೆ. ಭೂಮಿ ಮೇಲಿನ ಕೆಲವು ಸಂಬಂಧಗಳಿಗೆ ಬೆಲೆ ಕಟ್ಟಲಾಗದು ಅದರಲ್ಲಿ ಸೋದರ ಮತ್ತು ಸೋದರಿಯ ಸಂಬಂಧ ಪ್ರಮುಖವಾಗಿರುವಂತಹದ್ದು. ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ತೆರಳುವ ಮಹಿಳಾ ಪ್ರಯಾಣಿಕರು ಅದೆಷ್ಟೋ ಹೆದರಿಕೆಯಿಂದ ಆಟೋದಲ್ಲಿ ಕೂಡುತ್ತಾರೆ. ಹೀಗಾಗಿ ನಮ್ಮ ನಿಮ್ಮ ಸಂಬಂಧ ಅಕ್ಕ ತಂಗಿಯರಿಂತೆ ಗಟ್ಟಿಯಾಗಿರಲೆಂದು ಇಂದು ಉಚಿತ ಸೇವೆ ನೀಡುತ್ತಿದ್ದೇನೆ ಎಂದರು.
ಜೀವ ಕಾಪಾಡಿದ ಯೋಧರಿಗೆ ರಾಖಿ ಕಟ್ಟಿ, ಆರತಿ ಬೆಳಗಿ ಕಳುಹಿಸಿಕೊಟ್ಟ ಸಂತ್ರಸ್ತರು!
ತಡ ರಾತ್ರಿವರೆಗೆ ನಗರದಲ್ಲಿ ಪ್ರಯಾಣಿಕರಿಗಾಗಿ ಉಚಿತ ಸಾರಿಗೆ ಸೇವೆ ಒದಗಿಸಿ ಪ್ರಯಾಣಿಕರ ಬಳಿ ಹೋಗಿ ತಮ್ಮ ಸದುದ್ದೇಶವನ್ನು ತಿಳಿಸಿ ಅವರು ತೆರಳಬೇಕಾದ ಸ್ಥಳಗಳಿಗೆ ಅವರನ್ನು ಉಚಿತವಾಗಿ ತಲುಪಿಸಿ ಪ್ರಯಾಣಿಕರ ಮೇಲೆ ತಮಗಿರುವ ಪ್ರೀತಿ ಮತ್ತು ಅಭಿಮಾನ ಸಮಾಜ ಸೇವೆ ಮೂಲಕ ವ್ಯಕ್ತಪಡಿಸಿದ್ದಾರೆ.
ರಕ್ಷಾಬಂಧನದ ಮಹತ್ವವೇನು? ಶುಭ ಕಾರ್ಯಕ್ಕೆ ಯಾವ ಘಳಿಗೆ ಸೂಕ್ತ?
ಮಧ್ಯಾಹ್ನದ ವರೆಗೆ ಸುಮಾರು 63ಕ್ಕೂ ಹೆಚ್ಚು ಪ್ರಯಾಣಿಕರನ್ನು ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ಕರೆದೊಯ್ದು ಬಿಟ್ಟಿದ್ದಾರೆ. ಇವರ ಸೇವೆಗೆ ಮಹಿಳೆಯರು ಶ್ಲಾಘನೆ ವ್ಯಕ್ತಪಡಿಸಿದರು.