*  ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಬಳಿ ನಡೆದ ಘಟನೆ*  ಮಗನ ಮದುವೆ ಮಾತುಕತೆಗೆ ಹೊರಟಿದ್ದ ಮಹಿಳೆ ಸಾವು*  ಬೈಕ್‌ಗೆ-ಟಿಪ್ಪರ್‌ ಡಿಕ್ಕಿ ಸವಾರನಿಗೆ ಗಾಯ 

ಚಿತ್ರದುರ್ಗ(ಡಿ.04):  ಪಂಚರ್‌ ಆಗಿ ನಿಂತಿದ್ದ ಈರುಳ್ಳಿ ಸಾಗಿಸುತ್ತಿದ್ದ ಲಾರಿಗೆ(Truck) ಗ್ಯಾಸ್ ಟ್ಯಾಂಕರ್‌ವೊಂದು(Gas Tanker) ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ(Death) ಘಟನೆ ಚಿತ್ರದುರ್ಗ (Chitradurga) ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 40ರಲ್ಲಿ ಇಂದು(ಶನಿವಾರ) ನಡೆದಿದೆ. ಮೃತರನ್ನ ರಾಯಚೂರು(Raichur) ಮೂಲದ ಹುಲುಗಪ್ಪ, ಕೊಪ್ಪಳ(Koppal) ಜಿಲ್ಲೆಯ ಕುಷ್ಟಗಿ(Kushtagi) ಮೂಲದ ಮಂಜುನಾಥ, ವಿಜಯಪುರ(Vijayapura) ಮೂಲದ ಕ್ಲೀನರ್ ಸಂಜಯ್, ಗದಗ(Gadag) ಜಿಲ್ಲೆಯ ರೋಣ(Ron) ಮೂಲದ ಚಾಲಕ ಶರಣಪ್ಪ ಎಂದು ಗುರುತಿಸಲಾಗಿದೆ.

ಈರುಳ್ಳಿ ಲಾರಿಗೆ ಪಂಚರ್‌ ಹಾಕುತ್ತಿದ್ದ ವೇಳೆ ವೇಗವಾಗಿ ಬಂದ ಗ್ಯಾಸ್ ಟ್ಯಾಂಕರ್‌ ಗುದ್ದಿದೆ. ಹೀಗಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಗದಗ ಜಿಲ್ಲೆ ರೋಣದಿಂದ ಬೆಂಗಳೂರಿಗೆ ಈರುಳ್ಳಿ ಸಾಗಣೆ ವೇಳೆ ದುರಂತ(Accident) ಸಂಭವಿಸಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್(Police) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Bidar Accident: ಮಗನ ಮದುವೆಯ ಕಾರ್ಡ್‌ ನೀಡಲು ಹೋದ ದಂಪತಿ ಅಪಘಾತದಲ್ಲಿ ದುರ್ಮರಣ

ಮಗನ ಮದುವೆ ಮಾತುಕತೆಗೆ ಹೊರಟಿದ್ದ ಮಹಿಳೆ ಸಾವು

ದಾವಣಗೆರೆ(Davanegere): ಮಗನ ಮದುವೆ(Marriage) ಮಾತುಕತೆಗೆಂದು ಬೈಕ್‌ನಲ್ಲಿ ಹೊರಟಿದ್ದ ಮಹಿಳೆಯೊಬ್ಬರು ಆಯತಪ್ಪಿ ಬಿದ್ದಿದ್ದರಿಂದ ಮುಖಕ್ಕೆ ತೀವ್ರ ಪೆಟ್ಟಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಹಾವೇರಿ(Haveri) ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಅಂಕಾಪುರ ಗ್ರಾಮದ ಗಂಗಮ್ಮ(48) ಮೃತ ಮಹಿಳೆ. ತಮ್ಮ ಮಗ ನವೀನನ ಜೊತೆಗೆ ಆತನ ಮದುವೆಗೆ ಮಾತುಕತೆಯಾಡಲೆಂದು ದಾವಣಗೆರೆ ತಾಲೂಕಿನ ಹದಡಿ ಗ್ರಾಮ ಹಾದು ಹೋಗುವಾಗ ಹದಡಿಯ ಸಿ.ಕೆ.ನಾಗರಾಜ ಎಂಬುವರ ಹೊಟೆಲ್‌ ಎದುರು ಹಂಪ್‌ನಲ್ಲಿ ಬೈಕ್‌ ಸಾಗಿದ್ದರಿಂದ ಗಂಗಮ್ಮ ಆಯತಪ್ಪಿ ಕೆಳಗೆ ಬಿದ್ದಿದ್ದರಿಂದ ಮುಖಕ್ಕೆ ತೀವ್ರ ಪೆಟ್ಟಾಗಿತ್ತು.

ತಕ್ಷಣ ಗಂಗಮ್ಮನವರಿಗೆ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ(Treatment) ಎಸ್ಸೆಸ್‌ ಹೈಟೆಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಗಂಗಮ್ಮ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಪುತ್ರಿ ಆರ್‌.ಕೆ.ಸಂಗೀತ ನೀಡಿದ ದೂರಿನ ಮೇರೆಗೆ ಹದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಸ್ತೆ ಅಪಘಾತ, ಪಾದಚಾರಿ ಸಾವು

ಮುಂಡರಗಿ: ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟ ಘಟನೆ ಪಟ್ಟಣದ ಗದಗ-ಮುಂಡರಗಿ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಪಟ್ಟಣದ ಸಣ್ಣದಾವಲ್‌ಸಾಬ್‌ ಖಾಸಿಂಸಾಬ್‌ ಕರ್ನಾಚಿ (55) ಮೃತರು. ಬಯಲಿಗೆ ಹೋಗಿ ಮನೆಗೆ ಬರುವಾಗ ಅಶೋಕ್‌ ಲೈಲ್ಯಾಂಡ್‌ ದೋಸ್ತ್‌ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಸಣ್ಣದಾವಲ್‌ಸಾಬ್‌ ತಲೆಗೆ ತೀವ್ರ ಪೆಟ್ಟು ಬಿದ್ದು ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MP Accident: 40 ಅಡಿ ಆಳದ ಬಾವಿಗೆ ಬಿದ್ದ ಕಾರು: ಬಜರಂಗ ದಳ, ವಿಎಚ್‌ಪಿ ನಾಯಕರು ಸಾವು!

ಬೈಕ್‌ಗೆ-ಟಿಪ್ಪರ್‌ ಡಿಕ್ಕಿ ಸವಾರನಿಗೆ ಗಾಯ

ಗುಂಡ್ಲುಪೇಟೆ: ಟಿಪ್ಪರ್‌-ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರನ ಕೈ ಕಾಲುಗಳಿಗೆ ಪೆಟ್ಟು ಬಿದ್ದ ಘಟನೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಶುಕ್ರವಾರ ನಡೆದಿದೆ. ಹೊಂಗಹಳ್ಳಿ ಗ್ರಾಮದ ನಿವಾಸಿ ಶ್ರೀನಿವಾಸ್‌ಶೆಟ್ಟಿ(40) ಗಾಯಗೊಂಡ ವ್ಯಕ್ತಿ, ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ದಾರೆ. ಬಳಿಕ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಈ ಸಂಬಂಧ ಟಿಪ್ಪರ್‌ ಹಾಗೂ ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಪೀಡ್‌ಗೆ ಬ್ರೇಕ್‌ ಹಾಕಲಿ: 

ಮೈಸೂರು, ಊಟಿ ಹೆದ್ದಾರಿಯಲ್ಲಿ ಸಂಚರಿಸುವ ಟಿಪ್ಪರ್‌ಗಳಲ್ಲಿ ಓವರ್‌ ಲೋಡ್‌ ಕಲ್ಲು ತುಂಬಿಕೊಂಡು ವೇಗದಲ್ಲಿ ತೆರಳುವಾಗ ಅಪಘಾತಗಳು ಸಂಭವಿಸುತ್ತಿವೆ ಎಂದು ಜನರು ದೂರಿದ್ದಾರೆ.

ಮತ್ತೆ ಅಪಘಾತ: 

ಗುರುವಾರ ಬೆಳಗ್ಗೆ ಪಟ್ಟಣದ ಹೊರವಲಯದ ಪೆಟ್ರೋಲ್‌ ಬಂಕ್‌ ಮುಂದೆ ಟಿಪ್ಪರ್‌ನ್ನು ಓವರ್‌ ಟೇಕ್‌ ಮಾಡಲು ಹೋದ ಮತ್ತೊಂದು ಟಪ್ಪರ್‌ ಬಸ್‌ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ.