ಧಾರವಾಡ[ನ.29]: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ನಾಥುರಾಮ್ ಗೋಡ್ಸೆಯನ್ನ ಮಹಾತ್ಮ ಎಂದು ಕರೆದಿದ್ದಾರೆ.ಸಂಸತ್ ನಲ್ಲಿ ಗೋಡ್ಸೆಗೆ ದೇಶಭಕ್ತ ಅಂತ ಹೇಳಿದ್ದಾರೆ. ರಾಜಕಾರಣಿಗಳು ದ್ವಿಮುಖ ಪಾತ್ರ ಮಾಡೋದನ್ನ ನಿಲ್ಲಿಸಬೇಕು ಎಂದು ಬಿಜೆಪಿ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರು ಹೇಳಿದ್ದಾರೆ.

ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಪ್ರಜ್ಞಾ ಸಿಂಗ್ ಅಂತ ಮಾನಸಿಕವಾಗಿ ಇರುವವರನ್ನ ಜವಾಬ್ದಾರಿಯುತ ವ್ಯಕ್ತಿಗಳು ರಾಜಕೀಯಕ್ಕೆ ತಂದಿದ್ದಾರೆ. ಪ್ರಧಾನಿ ಮೋದಿ, ರಾಜನಾಥ ಸಿಂಗ್, ಇಂತವರಿಗೆ ಗಾಂಧೀಜಿ ಬಗ್ಗೆ ಗೊತ್ತಿಲ್ವಾ, ಯಾಕೆ ಪ್ರಜ್ಞಾ ಸಿಂಗ್ ಅವರಿಗೆ ಇಷ್ಟೊಂದು ಪ್ರಿತಿ ತೋರಿಸುತ್ತಾರೆ. ಗಾಂಧೀಜಿ ಬಗ್ಗೆ ಹೋರಾಟ ಮಾಡುವವರು ಇಷ್ಟೊತ್ತಿಗೆ ದ್ವನಿ ಎತ್ತಬೇಕಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

27 ರಾಷ್ಟ್ರ ಗಳಲ್ಲಿ ಗಾಂಧೀಜಿ ಅವರ ಪ್ರತಿಮೆಗಳಿವೆ. ಪ್ರಧಾನಿ ಮೋದಿ ಅವರು  ಕೂಡಲೇ ಪ್ರಜ್ಞಾ ಸಿಂಗ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನ‌ ಬಿಜೆಪಿ ಇಂದ ಹೊರಹಾಕಬೇಕು. ನಿಮಗೇನಾದರೂ ಧೇಶಭಕ್ತ ಇದ್ದರೆ ಅರಿಬ್ಬರನ್ನ ಬಿಜೆಪಿ ಇಂದ ಹೊರ ಹಾಕಿ‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತವರನ್ನು ಬಿಜೆಪಿಯಿಂದ ತೆಗೆದುಹಾಕದಿದ್ದರೆ ಸ್ಪಷ್ಟವಾಗಿ ಹೇಳಲಿ ಗಾಂಧೀಜಿ ಅವರ ಐಡಿಯಾಲಜಿ ಒಪ್ಪಿಕ್ಕೊಳ್ಳುವುದಿಲ್ಲ ಅಂತ, ಒಪ್ಪಿಕ್ಕೊಳ್ಳೋದು ಆದ್ರೆ ಇಬ್ಬರನ್ನ ಬಿಜೆಪಿ ಇಂದು ಹೊರ ಹಾಕಿ ಎಂದು ಪ್ರಧಾನಿ ಮೋದಿ, ಅಮಿತ್ ಷಾ, ಗೆ ಸವಾಲು ಹಾಕಿದ್ದಾರೆ.  ಪ್ರಜ್ಞಾ ಸಿಂಗ್ ಮತ್ತು ಪ್ರಹ್ಲಾದ್ ಜೋಶಿ ಅವರು ದೇಶದಲ್ಲಿ ಇರಬಾರದು ಎಂದು ಹೇಳಿದ್ದಾರೆ.