Asianet Suvarna News Asianet Suvarna News

ಕಲಬುರಗಿ ಪಾಲಿಕೆ ಗದ್ದುಗೆ: ಸನ್ನಿವೇಶ ನೋಡ್ಕೊಂಡು ಎಚ್‌ಡಿಕೆ ತೀರ್ಮಾನ ಮಾಡ್ತಾರೆ, ದೇವೇಗೌಡ

*  ಕುಮಾರಸ್ವಾಮಿ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ
*  ನಮ್ಮ ಮನಸ್ಸೋ ಇಚ್ಚೆ ತೀರ್ಮಾನ ಮಾಡೋದು ಸರಿಯಲ್ಲ 
*  ಮಲ್ಲಿಕಾರ್ಜುನ ಖರ್ಗೆಯವರು ಮಾತಾಡಿದ್ದೂ ನಿಜ 

Former PM HD Devegowda talks Over Kalaburagi Corporation Mayor grg
Author
Bengaluru, First Published Sep 11, 2021, 11:16 AM IST
  • Facebook
  • Twitter
  • Whatsapp

ಹಾಸನ(ಸೆ.11):  ಗ್ರಾಮದ ಜನರು ದೇವಸ್ಥಾನದ ಉದ್ಘಾಟನೆಗೆ ಬರಬೇಕೆಂದಿದ್ರು, ಆದ್ರೆ ದೆಹಲಿಯಲ್ಲಿದ್ದರಿಂದ ಬರಲು ಸಾಧ್ಯವಾಗಿರಲಿಲ್ಲ. ಇವತ್ತು ಗಣೇಶನ ಹಬ್ಬ ಶ್ರೇಷ್ಠವಾದ ದಿನ ಪೂಜೆ ಬರುತ್ತೇನೆಂದು ಹೇಳಿದ್ದೆ, ಊರಿನ ಜನರ ಪ್ರೀತಿಗೆ ಅಭಾರಿಯಾಗಿದ್ದೇನೆ. ತಾಯಂದಿರು ಗೌರವಪೂರ್ವಕವಾಗಿ ಪೂರ್ಣಕುಂಭ ಸ್ವಾಗತ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಹಾಸನದ ಉಡುವಾರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದೇವೇಗೌಡ ಅವರು, ಈ ವಿಚಾದಲ್ಲಿ ಕುಮಾರಸ್ವಾಮಿಯವರಿದ್ದಾರೆ. ಅವರು ಸನ್ನಿವೇಶ ನೋಡಿಕೊಂಡು ತೀರ್ಮಾನ ಮಾಡ್ತಾರೆ. ಇನ್ನೂ ಎಲೆಕ್ಷನ್ ನೋಟಿಫಿಕೇಷನ್ ಆಗಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಮಾತಾಡಿದ್ದೂ ನಿಜ ಅಂತ ಹೇಳಿದ್ದಾರೆ. 

ಕಿಂಗ್ ಮೇಕರ್ ಆದ ಜೆಡಿಎಸ್‌ : ಶಕ್ತಿ ಏನು ಎಂದವರಿಗೆ ಈಗ ಉತ್ತರ ಸಿಕ್ಕಿದೆ

ಸಿಎಂ ಬೊಮ್ಮಾಯಿಯವರು ಕುಮಾರಸ್ವಾಮಿಯವರ ಜೊತೆ ಮಾತಾಡಿದ್ದಾರೆ. ಅಲ್ಲಿಯ ಮುಖಂಡರು, ಗೆದ್ದಿರುವ ಸದಸ್ಯರು ತೀರ್ಮಾನ ಮಾಡ್ತಾರೆ. ಜೆಡಿಎಸ್ ಜೊತೆಗೆ ಒಟ್ಟಿಗೆ ಹೋಗೋಣ ಅಂತಾ ಹೇಳಿದ್ದೇನೆ ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ದೇವೇಗೌಡರು, ಅವರು ಹೇಳ್ತಾರೆ ಅದು ಬೇರೆ ವಿಚಾರ. ಖರ್ಗೆಯವರು ನಮಗೆ ಹೇಳಿಲ್ವೇ.?. ಗೆದ್ದಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕು. ಎರಡು ಜನರು ಮುಸ್ಲಿಮರು ಗೆದ್ದಿದ್ದಾರೆ. ಒಂದು ಶೆಡ್ಯೂಲ್ ಕಾಸ್ಟ್, ಒಂದು ರೆಡ್ಡಿ ಸಮುದಾಯದವರು ಗೆದ್ದಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಮ್ಮ ಮನಸ್ಸೋ ಇಚ್ಚೆ ತೀರ್ಮಾನ ಮಾಡೋದು ಸರಿಯಲ್ಲ ಅಂತ ತಿಳಿಸಿದ್ದಾರೆ. 
 

Follow Us:
Download App:
  • android
  • ios