ಹುಬ್ಬಳ್ಳಿ[ಮಾ.08]: ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಬಗ್ಗೆ ನನಗೆ ಸಲಹೆ ನೀಡಿ.ಪಕ್ಷ ಬಲವರ್ಧನೆಗೆ ಹೋರಾಟ ರೂಪಿಸಲು ನಾನು ಸಿದ್ದನಾಗಿದ್ದೇನೆ. ಪಕ್ಷ ಸಂಘಟನೆ ವಿಚಾರದಲ್ಲಿ ನಾವು ತಮಿಳರನ್ನು ನೋಡಿ‌ ಕಲಿಯಬೇಕು.
ಪ್ರಾದೇಶಿಕ ಪಕ್ಷಗಳ ಸಂಘಟನೆಗೆ ತಮಿಳರ ಮಾದರಿಯನ್ನ ನಾವು ಅಳವಡಿಸಿಕೊಳ್ಳಬೇಕಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಪಕ್ಷದ ಸಂಘಟನೆ‌ ಕಾರ್ಯಾಗಾರದ ಸಮಾರೋಪ ಸಮಾರಂಭದ ಬಳಿಕ ಭಾನುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುವಾಗ ಬಿ ಎಸ್ ಯಡಿಯೂರಪ್ಪ ಆಡಿದ ಎಲ್ಲ‌ ಮಾತುಗಳು ನೆನಪಿವೆ. ಯಡಿಯೂರಪ್ಪ ಅಂದು ಅತ್ಯುಗ್ರವಾಗಿ ಮಾತನಾಡಿದ್ದರು. ಸಿದ್ದರಾಮಯ್ಯ ನನ್ನನ್ನ ಅಪ್ಪ-ಮಕ್ಕಳು ಮೂಲೆಗುಂಪು ಮಾಡುತ್ತಾರೆ ಅಂತ ಹೇಳಿಕೆ ನೀಡಿದ್ದರು ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕುಮಾರಸ್ವಾಮಿ ಸಾಲ ಮನ್ನಾ ನಿರ್ಧಾರ ತೆಗೆದುಕೊಂಡಾಗ ಸಿದ್ದರಾಮಯ್ಯ ಏನ್ ಹೇಳಿದ್ರು ಗೊತ್ತಾ? ಸಿದ್ದರಾಮಯ್ಯನ ಭಾಗ್ಯಗಳಿಗೆ ಹಣಕಾಸಿನ ಕೊರತೆ ಆಗಬಾರದು ಅಂತ ಹೇಳಿದ್ದರು. ನನ್ನ ಜೊತೆ ಪಕ್ಷ ಕಟ್ಟಿ ಬೆಳೆಸಿದವರೆಲ್ಲ ಬಿಟ್ಟು ಹೋಗುತ್ತಿದ್ದಾರೆ. ಜೆ.ಎಚ್.ಪಾಟೀಲ್ ರನ್ನ ತೆಗೆದು ನನ್ನನ್ನು ಸಿಎಮ್ ಮಾಡಿ ಅಂತ ಸಿದ್ದರಾಮಯ್ಯ ಕೇಳಿದ್ದರು. 2004 ರಲ್ಲೂ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡೋಣ ಎಂದು ಸೋನಿಯಾ ಗಾಂಧಿ ಬಳಿ ಹೇಳಿದ್ದೆ. ಆದ್ರೇ ಅದಕ್ಕೆ ಕಾಂಗ್ರೆಸ್ ನಾಯಕರೇ ಒಪ್ಪಲಿಲ್ಲ  58 ಜನ ಶಾಸಕರನ್ನ ಹಿಡಿಟ್ಟುಕೊಳ್ಳಲು ಅಂದು ಸಾಲ ಮಾಡಿದ್ದೆ ನಾನು. ಅದನ್ನ ಸಿದ್ದರಾಮಯ್ಯ ಕೊಟ್ರಾ? ಎಂದು ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.